ಜಿಲ್ಲೆ

ಧಾರವಾಡ ಎಸಿಪಿ ಅನುಷಾ ಯಿಂದ ಕೋವಿಡ್-೧೯ ವಿಶೇಷ ಜನಾಂದೋಲನ ಅಭಿಯಾನ

ಧಾರವಾಡ prajakiran.com : ಧಾರವಾಡ ಎಸಿಪಿ ಅನುಷಾ ಜಿ. ಅವರು ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸರ ಸಹಾಯದೊಂದಿಗೆ ಕೋವಿಡ್-೧೯ ವಿಶೇಷ ಜನಾಂದೋಲನ ಅಭಿಯಾನವನ್ನು ಹಮ್ಮಿಕೊಂಡು ಜನರ ಗಮನ ಸೆಳೆದರು. ಧಾರವಾಡದ ಮಾರುಕಟ್ಟೆಗೆ ಬಂದ ಹಳ್ಳಿ ಜನರನ್ನು ಆತ್ಮೀಯತೆಯಿಂದ ಮಾತನಾಡಿಸಿ, ಮಾಸ್ಕ್ ಧರಿಸದೆ ಹೊರಗಡೆ ಸಂಚರಿಸದಂತೆ ಹಾಗೂ ಆರೋಗ್ಯ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಅಲ್ಲದೆ, ಅನೇಕ ಹಿರಿಯ ಜೀವಗಳಿಗೆ ಸ್ವತಃ ಮಾಸ್ಕ್ ಹಾಕಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.  ಕರೋನಾ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, […]

ಜಿಲ್ಲೆ

ಧಾರವಾಡದ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮಿ ನಾರಾಯಣ ಜಾತ್ರಾ ಮಹೋತ್ಸವಕ್ಕೆ ಕರೋನಾ ಕರಿಛಾಯೆ

107 ವರ್ಷದ ಜಾತ್ರೆಗೆ ಬಿತ್ತು ಬ್ರೇಕ್” ಧಾರವಾಡ prajakiran.com : ನಗರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ಜಾತ್ರಾ ಮಹೋತ್ಸವ ಈ ಬಾರಿ ಸರಳ ರೀತಿಯಲ್ಲಿ ಆಚರಣೆಯಾಗುವ ಮೂಲಕ 107 ವರ್ಷದ ಸಂಪ್ರದಾಯಕ್ಕೆ ಈ ವರ್ಷ ಬ್ರೇಕ್ ಬೀಳಲಿದೆ. ಹೌದು, ಇಂದಿಗೆ ಸರಿಯಾಗಿ ೧೦೭ ವರ್ಷಗಳಿಂದ ಇಲ್ಲಿನ ರವಿವಾರ ಪೇಟೆಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದ ದಸರಾ‌ ಮಹೋತ್ಸವ ಕ್ಕೆ ಕರೋನಾ ಕರಿಛಾಯೆ ಆವರಿಸಿದ್ದು ಈ ಬಾರಿ ಅತ್ಯಂತ ಸರಳ […]

ಜಿಲ್ಲೆ

ಧಾರವಾಡದ ಹಲವು ಬಡಾವಣೆಗಳಲ್ಲಿ ಮತ್ತೇ ಬೀದಿ ನಾಯಿಗಳ ಹಾವಳಿ

ಧಾರವಾಡ prajakiran.com : ಧಾರವಾಡದ ಹಲವು ಬಡಾವಣೆಗಳಲ್ಲಿ ಮತ್ತೇ ಬೀದಿ ನಾಯಿಗಳ ಹಾವಳಿ ಶುರುವಾಗಿದೆ.   ಇದರಿಂದಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಂಕಷ್ಟದ ವಾತಾವರಣ ನಿರ್ಮಾಣವಾಗಿದ್ದು, ಹೊರಗಡೆ ಮಕ್ಕಳನ್ನು ಏಕಾಂಗಿಯಾಗಿ ಕಳುಹಿಸಬೇಕಾದರೆ ಹಲವು ಬಾರಿ ವಿಚಾರ ಮಾಡಬೇಕಿದೆ. ಧಾರವಾಡದ ಕೆ.ಸಿ. ಪಾರ್ಕ್ ರಸ್ತೆ, ಮಾಳಮಡ್ಡಿ, ಶ್ರೀರಾಮನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಸಂಚರಿಸುವ ಬೀದಿ ನಾಯಿಗಳು ಸ್ಥಳೀಯರನ್ನು ಆತಂಕಕ್ಕೆ ದೂಡಿವೆ.   ಒಂದೊಂದು ಬಡಾವಣೆಯಲ್ಲಿ ಕನಿಷ್ಟ ಎನಿಲ್ಲವೆಂದರೂ ನಾಲ್ಕೈದು ನಾಯಿಗಳು ಕಾಣಸಿಗುತ್ತವೆ. ಶ್ರೀರಾಮನಗರದಲ್ಲಿ ಹೆಚ್ಚು ಕಡಿಮೆ […]

ಜಿಲ್ಲೆ

ಧಾರವಾಡದಲ್ಲಿ ಧರೆಗುರುಳಿದ ಮನೆ, ಮಳೆಯಲ್ಲೂ ಸಂತ್ರಸ್ತರ ಪರದಾಟ…!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಹೋಗಿದೆ. ಭಾರೀ ಮಳೆಗೆ ಕಮಲಾಪುರದಲ್ಲಿ 40 ಕ್ಕೂ ಹೆಚ್ಚು ಮಣ್ಣಿನ ಮನೆಗಳು ಧರೆಗುರುಳಿವೆ. ಇದರಿಂದಾಗಿ ಜನತೆ ಕಂಗಾಲಾಗಿದ್ದಾರೆ.  ಸಂತ್ರಸ್ತ ಕುಟುಂಬಸ್ಥರು  ಬೀದಿಗೆ ಬಂದಿದ್ದು,  ನಮಗೆ ಸೂಕ್ತ ಪರಿಹಾರ ನೀಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಮನೆಗಳು ಬೀಳುವ ಸಮಯದಲ್ಲಿ ಕುಟುಂಬಸ್ಥರು ಮನೆಯಿಂದ ಆಚೆ ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಘಟನೆ ನಂತರ ಸಂಬಂಧ ಪಟ್ಟ ಅಧಿಕಾರಿಗಳು ಬಂದು […]

ಜಿಲ್ಲೆ

ಧಾರವಾಡದ ನಿಗದಿ ದೊಡ್ಡ ಕೆರೆ ಕಟ್ಟಿ ಬಿರುಕು : ಗ್ರಾಮಸ್ಥರ ಆತಂಕ

ಧಾರವಾಡ prajakiran.com : ಧಾರವಾಡ ತಾಲೂಕಿನ ನಿಗದಿ ಗ್ರಾಮದ ದೊಡ್ಡ ಕೆರೆ ಕಟ್ಟಿ ಬಿರುಕು ಬಿಟ್ಟಿದ್ದು, ಇದರಿಂದಾಗಿ  ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾದ ಬೆನ್ನಲ್ಲೇ ಕೆರೆ ಬಿರುಕು ಬಿಟ್ಟಿರುವುದು ಕಂಗಲಾಗಿಸಿದೆ. ಈ ಬಗ್ಗೆ ಈಗಾಗಲೇ ಹಲವು ಅವಾಂತರಗಳನ್ನ ಸೃಷ್ಟಿಸಿರುವ ಮಳೆರಾಯನ ಆರ್ಭಟ ಹೆಚ್ಚಾಗಿದ್ದರಿಂದ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ಕೆರೆ ಕಟ್ಟೆ ಬಿರುಕು ಬಿಟ್ಟಿದೆ ಎನ್ನಲಾಗಿದೆ. ಸುಮಾರು 30 ರಿಂದ 40 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಗೋಡೆ ಬಿರುಕು ಬಿಟ್ಟಿದ್ದರಿಂದಅದರ   ಕೆಳಗಿನ […]

ಜಿಲ್ಲೆ

ಬಿ.ಆರ್.ಟಿ.ಎಸ್. ಕಳಪೆ ಕಾಮಗಾರಿ ವಿರುದ್ದ ಎಸಿಬಿ, ಲೋಕಾಯುಕ್ತಕ್ಕೆ  ದೂರು

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡಮಧ್ಯದ ನವಲೂರ ಬಳಿ ಬಿ.ಆರ್.ಟಿ.ಎಸ್. ಕಂಪನಿಯು ಆರಂಭಿಸಿದ ಮೇಲ್ಸೇತುವೆ ವಾಹನ ಸಂಚಾರಕ್ಕೆ ಲೋಕಾರ್ಪಣೆಗೊಳ್ಳುವ ಮೊದಲೇ ತಡೆಗೋಡೆಯ ಪ್ಯಾನಲ್ ಗಳು ಕಳಚಿ ಬಿದ್ದು, ಕಾಮಗಾರಿಗಳು ಕಳಪೆಯಾಗಿರುವುದು ಕಂಡು ಬಂದಿದೆ. ಅದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷ  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಲೋಕಾಯುಕ್ತಕ್ಕೆ  ದೂರು ಸಲ್ಲಿಸಿದೆ ಎಂದು ಎಎಪಿ ಧಾರವಾಡ ಜಿಲ್ಲಾಧ್ಯಕ್ಷ ಸಂತೊಷ ನರಗುಂದ ತಿಳಿಸಿದರು. ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, […]

ಜಿಲ್ಲೆ

ಧಾರವಾಡದ ಪವನ ಶಾಲೆ ಮುಖ್ಯಸ್ಥ ಶಂಕರ ಪಾಟೀಲ ಇನ್ನಿಲ್ಲ

ಧಾರವಾಡ prajakiran.com : ಧಾರವಾಡದ ಬಾರಾಕೋಟ್ರಿಯಲ್ಲಿರುವ ಪವನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಶಂಕರ ಪಾಟೀಲ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಂಗಳೂರಿನಲ್ಲಿ ವಿಧಿವಶರಾದರು. ಅವರು ಕಳೆದ ಕೆಲ ದಿನಗಳಿಂದಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ತಾಯಿನಿಧನದ  ಬೆನ್ನಲ್ಲೇ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಎರ್ ಲಿಫ್ಟ್ ಮೂಲಕ ಬೆಂಗಳೂರಿನ ಖಾಸಗಿ ಹಾಗೂ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿಯೇ ನಿಧನಹೊಂದಿದರು. ಕಳೆದ ಕೆಲವು ವರ್ಷಗಳಿಂದ ಧಾರವಾಡದಲ್ಲಿ ಪವನ […]

ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಅವಳಿನಗರದ ಸಂಚಾರಿ ಸ್ವ್ಯಾಬ್ ಸಂಗ್ರಹಣಾ ಕೇಂದ್ರ ನಿಲುಗಡೆ ಸ್ಥಳಗಳು

ಧಾರವಾಡ prajakiran.com : ಕೋವಿಡ್ ತಪಾಸಣೆ ಕಾರ್ಯವನ್ನು ವ್ಯಾಪಕಗೊಳಿಸಿರುವ ಜಿಲ್ಲಾಡಳಿತವು ಹುಬ್ಬಳ್ಳಿ ಧಾರವಾಡ ಅವಳಿನಗರದ ಏಳು ಸ್ಥಳಗಳಲ್ಲಿ ಸಂಚಾರಿ ಸ್ವ್ಯಾಬ್ ಸಂಗ್ರಹಣಾ ಕೇಂದ್ರಗಳ ನಿಲುಗಡೆಗೆ ಸ್ಥಳ ಗುರುತಿಸಿದೆ. ಈ ಸ್ಥಳಗಳಲ್ಲಿ ಪ್ರತಿ ದಿನ ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೨:೩೦ ರವರೆಗೆ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯದ ಮಾದರಿಯನ್ನು ಉಚಿತವಾಗಿ ಸಂಗ್ರಹಣೆ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ ಕೋರಿದ್ದಾರೆ. ವಾಹನ ನಿಲುಗಡೆ ಸ್ಥಳಗಳು: […]

ಜಿಲ್ಲೆ

ಧಾರವಾಡದ ವಿವಿಧ ಬಡಾವಣೆಗಳಲ್ಲಿ ಮೊಂಬತ್ತಿ ಪ್ರತಿಭಟನೆ

ಧಾರವಾಡ prajakiran.com : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ  ನಡೆದ ೧೯ ವರ್ಷದ ಯುವತಿಯ ಅತ್ಯಾಚಾರ  ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಧಾರವಾಡದ ವಿವಿಧ ಬಡಾವಣೆಯ ಜನರು ಮೊಂಬತ್ತಿ ಪ್ರತಿಭಟನೆ ನಡೆಸಿದರು.  ಧಾರವಾಡದ ಯು.ಬಿ.ಹಿಲ್‌ನ ರಾಯದುರ್ಗ ಬಡಾವಣೆ, ಹೊಸಯಲ್ಲಾಪುರದ ಮಂಡ್ ಓಣಿ, ಸನ್ಮತಿ ರಸ್ತೆ, ಹಿರೆಮಠ್ ಚಾಳ ರಾಮನಗರ, ಸೈದಾಪುರ, ನಾಯಕನ ಹುಲಕಟ್ಟಿ ಗ್ರಾಮ ಸೇರಿದಂತೆ ಹಲವೆಡೆ ಮೋಂಬತ್ತಿ ಪ್ರತಿಭಟನೆ ನಡೆಯಿತು. ಈ ವೇಳೆ ಉತ್ತರ ಪ್ರದೇಶದ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ […]

ಜಿಲ್ಲೆ

ಧಾರವಾಡದ ಹಿರಿಯ ರಂಗಕರ್ಮಿ ವಿಷಯಾ ಜೇವೂರಗೆ ಪತಿ ವಿಯೋಗ

ಧಾರವಾಡ prajakiran.com : ಹಿರಿಯ ಶಿಕ್ಷಕ, ಕೆ.ಇ. ಬೋರ್ಡ್ಸ್ ಸಂಸ್ಥೆಯಲ್ಲಿ ಸುಧೀರ್ಘ ೪೦ ವರ್ಷಗಳ ಕಾಲ  ಶಿಷ್ಯ ವತ್ಸಲ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇಂದುಹಾಸ ರಾಮರಾವ್ ಜೇವೂರ ಬುಧವಾರ ಬೆಳಗಿನ ಜಾವ (ಅಕ್ಟೋಬರ್ ೭, ೨೦೨೦ ಬುಧವಾರ) ೨ ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಧಾರವಾಡದ ಮಾಳಮಡ್ಡಿಯ ನಾರಾಯಣ ರೆಸಿಡೆನ್ಸಿ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದ ಅವರು, ಪತ್ನಿ ರಂಗಭೂಮಿ ಕಲಾವಿದೆ, ಖ್ಯಾತ ನಾಟಕಕಾರ್ತಿ ಶ್ರೀಮತಿ ವಿಷಯಾ ಜೇವೂರ ಸೇರಿದಂತೆ, ಮಕ್ಕಳಾದ ವಿಕಾಸ, ಸುಹಾಸ ಮತ್ತು ಇಬ್ಬರು […]