ಅಂತಾರಾಷ್ಟ್ರೀಯ

ಮೋದಿ ಹೆಸರಿನವರೆಲ್ಲರೂ ಕಳ್ಳರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಗೆ ಸಂಸದ ಸ್ಥಾನದಿಂದ ಅನರ್ಹ

ನವದೆಹಲಿ ಪ್ರಜಾಕಿರಣ.ಕಾಮ್ :  ಮೋದಿ ಹೆಸರಿನ ಎಲ್ಲರೂ ಕಳ್ಳರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದರಾಗಿರುವ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಸೂರತ್ ಜಿಲ್ಲಾ ಕೋರ್ಟ್‌ ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ಹಾಗೂ ಹಾಗೂ 15 ಸಾವಿರ ದಂಡ ವಿಧಿಸಿದೆ. ಇದರ ಬೆನ್ನಲ್ಲಿಯೇ ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.  ಸೂರತ್‌ ಕೋರ್ಟ್‌ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲಿಯೇ ರಾಹುಲ್‌ ಗಾಂಧಿ ಜಾಮೀನು ಪಡೆದು ದೆಹಲಿಗೆ ವಾಪಸಾಗಿದ್ದರು. ಆದರೆ, ಜನಪ್ರತಿನಿಧಿ ಕಾಯ್ದೆ […]

ಅಂತಾರಾಷ್ಟ್ರೀಯ

ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು ಎಲ್ ಆಂಡ್ ಟಿ ಕಂಪನಿ ಇಂಜಿನಿಯರ್ ಶವವಿಟ್ಟು ಪ್ರತಿಭಟನೆ‌…!

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದಲ್ಲಿ  ಘೋಷಣೆ ಕೂಗಿ ತೀವ್ರ ಆಕ್ರೋಶ ಸಾವಿನ ಹೊಣೆ ಹೊರಲು ಎಲ್ ಆಂಡ್ ಟಿ ಕಂಪನಿ, ಮಹಾನಗರ ಪಾಲಿಕೆ, ಕೆ ಯು ಐ ಡಿ ಎಫ್ ಸಿಗೆ ಆಗ್ರಹ ಶವ ಹೊತ್ತ ಅಂಬುಲೆನ್ಸ್ ಸಮೇತ ಒಂದು ಗಂಟೆಗೂ ಅಧಿಕ ಕಾಲ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಧಾರವಾಡ ಪ್ರಜಾಕಿರಣ.ಕಾಮ್ : ಕಳೆದ ಎರಡು ವರ್ಷಗಳಿಂದ ಎಲ್ ಆ್ಯಂಡ್ ಟಿ ಕಂಪನಿ ನೀರು ಸರಬರಾಜು ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಇಂಜಿನೀಯರ್‌ವೊಬ್ಬರು […]

ಅಂತಾರಾಷ್ಟ್ರೀಯ

ಧಾರವಾಡದ ಐ ಐ ಟಿ ಕಟ್ಟಡ ಸೇರಿ ಹಲವು ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಧಾರವಾಡ ಮಾ.12:ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ. ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ.ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ .ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ನೂತನ ಕಟ್ಟಡ ಉದ್ಘಾಟಿಸಿ,ವಿವಿಧ ಯೋಜನೆಗಳ […]

ಅಂತಾರಾಷ್ಟ್ರೀಯ

8479 ಕೋಟಿ ವೆಚ್ಚದ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ರಾಷ್ಟಕ್ಕೆ ಸಮರ್ಪಿಸಿದ ಮೋದಿ

ಮಂಡ್ಯ ಪ್ರಜಾಕಿರಣ.ಕಾಮ್  ಮಾ. 12 : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ 8479 ಕೋಟಿ ರೂ.ಗಳ ವೆಚ್ಚದ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ರಾಷ್ಟಕ್ಕೆ ಸಮರ್ಪಿಸಿದರು. ಇದೇ ವೇಳೆ 4128 ಕೋಟಿ ರೂ.ವೆಚ್ಚದ ಮೈಸೂರು – ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಯ 4 ಪ್ಯಾಕೇಜ್ ಹಾಗೂ ಷಟ್ಪಥ ಬೆಂಗಳೂರು- ಮೈಸೂರು ವಿಭಾಗ ರಾಷ್ಟ್ರೀಯ ಹೆದ್ದಾರಿ 275 ರ 2 ಪ್ಯಾಕೇಜ್ ಗಳ ಶಂಕುಸ್ಥಾಪನೆ ನೆರವೇರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರಾಷ್ಟ್ರೀಯ […]

ಅಂತಾರಾಷ್ಟ್ರೀಯ

ಮಾ.12ರಂದು ಧಾರವಾಡದಲ್ಲಿ ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶನ ಇಲ್ಲ

ಧಾರವಾಡ ಪ್ರಜಾಕಿರಣ.ಕಾಮ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧಾರವಾಡದ ಐ ಐ ಟಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾ.12 ರಂದು ಭಾನುವಾರ ಹಮ್ಮಿಕೊಂಡಿದ್ದ ಕಪ್ಪು ಬಾವುಟ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಕಾಲಿಕ ನಿಧನ ಮತ್ತು ಅವಳಿ ನಗರಕ್ಕೆ ನೀರು ಪೂರೈಕೆ ಕೆಲಸ ನಿರ್ವಹಿಸುತ್ತಿದ್ದ 81 ಕಾರ್ಮಿಕರ ಮರು ನೇಮಕ ಮತ್ತು ಬಾಕಿ ವೇತನ ಬಿಡುಗಡೆ ಮಾಡುವುದಾಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಅವರು […]

ಅಂತಾರಾಷ್ಟ್ರೀಯ

ವೀರಶೈವ-ಲಿಂಗಾಯತದ ಎಲ್ಲಾ ಉಪ ಪಂಗಡಗಳನ್ನು ಕೇಂದ್ರದ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಿ : ನಾಗನಗೌಡ ಪಾಟೀಲ ನೀರಲಗಿ

ವೀರಶೈವ-ಲಿಂಗಾಯತ ಎಲ್ಲಾ ಉಪ ಪಂಗಡಗಳನ್ನು ಒಂದುಗೂಡಿಸಿ 3 ಬಿ ಮೀಸಲಾತಿಗೆ ಸೇರಿಸಿ ಮಿಸಲಾತಿ ಪ್ರಮಾಣ ಶೇ 15% ಕ್ಕೆ ಏರಿಸಿ ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯಗಳ ಜನಸಂಖ್ಯೆ, ಸಾಮಾಜಿಕ, ಆರ್ಥಿಕತೆ ಅನುಗುಣವಾಗಿ ಕಾಲಕಾಲಕ್ಕೆ ವರ್ಗೀಕರಣವನ್ನು ಸರಿಪಡಿಸುವುದು ಸರ್ಕಾರದ ಆದ್ಯ ಕರ್ತವ್ಯ ಆಗಿದೆ. ಆದರೆ, ಆದ್ಯತೆಯಿಂದ ‘ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಅನ್ಯಾಯ ಆಗದ ರೀತಿ ಸಾಮಾಜಿಕ ನ್ಯಾಯದಡಿ ಮೀಸಲಾತಿ ಸೌಲಭ್ಯವನ್ನು ನೀಡಬೇಕೆಂದು ವಿಶ್ವ ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ನಾಗನಗೌಡ ಪಾಟೀಲ ನೀರಲಗಿ ಹಾಗೂ ರಾಜ್ಯ […]

ಅಂತಾರಾಷ್ಟ್ರೀಯ

ಧಾರವಾಡ ಕೆ ಐ ಎ ಡಿ ಬಿಯ ಪರಿಹಾರ ಗೋಲ್ ಮಾಲ್ : ತಂದೆಗೆ ಗೊತ್ತಿಲ್ಲದ ಹಾಗೆಯೇ 64 ಲಕ್ಷ ಡ್ರಾ ಮಾಡಿದ್ದ ಮಗ ಸಿಐಡಿ ಬಲೆಗೆ….!

ತಂದೆಗೆ ಗೊತ್ತಿಲ್ಲದ ಹಾಗೆಯೇ ಕೆ ಐ ಎ ಡಿ ಬಿಯ 64 ಲಕ್ಷ ಡ್ರಾ ಮಾಡಿದ್ದ ಮಗ ಸಿಐಡಿ ಬಲೆಗೆ ಎರಡು ಎಕರೆ ಆರು ಗುಂಟೆ ಜಮೀನಿನ ಮೇಲೆ ಎರಡನೇಯ ಬಾರಿಗೆ ಪರಿಹಾರ ಪಡೆದಿದ್ದ ಭೂಪ ತಂದೆಗೆ ಮೋಸ ಮಾಡಿದ್ದ ಮಗ ಇದೀಗ ಸಿಐಡಿಯ ಮೂರನೇ ಬಂಧಿತ ಆರೋಪಿ 14 ಜನರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್ ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿ ಬಿ ಯಲ್ಲಿ ರೈತರ ಹೆಸರಿನಲ್ಲಿ […]

ಅಂತಾರಾಷ್ಟ್ರೀಯ

ಮೈಸೂರಿನ ಹಿರಿಯ ಗಣಿತಜ್ಞ ಡಾ. ಬಿ.ಎಸ್. ಕಿರಣಗಿ ಇನ್ನು ನೆನಪು ಮಾತ್ರ….!

*ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದವರು* ಮೈಸೂರು ಪ್ರಜಾಕಿರಣ.ಕಾಮ್ : ಮೈಸೂರು ವಿಶ್ವವಿದ್ಯಾಲಯಲ್ಲಿ ಮೂರು ದಶಕಗಳ ಕಾಲ ಗಣಿತಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಾ. ಬಿ.ಎಸ್. ಕಿರಣಗಿ ಅವರು ಬುಧವಾರ ಬೆಳಗ್ಗೆ ಇಹಲೋಕ ತ್ಯಜಿಸಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಡಾ. ಬಿ.ಎಸ್. ಕಿರಣಗಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದವರು. […]

ಅಂತಾರಾಷ್ಟ್ರೀಯ

ಧಾರವಾಡದ ಕೆ ಐ ಎ ಡಿ ಬಿಯ 25 ಕೋಟಿ ಹಗರಣ : ಐ ಡಿ ಬಿ ಐ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರ ಬಂಧನ….!

ಕೆ ಐ ಎ ಡಿ ಬಿ 25 ಕೋಟಿ ಹಗರಣ : ಐ ಡಿ ಬಿ ಐ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರಿಗೆ ಮಾ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿ ಐ ಡಿ ಧಾರವಾಡ ಪ್ರಜಾಕಿರಣ.ಕಾಮ್  : ಧಾರವಾಡದ ಕೆ ಐ ಎ ಡಿ ಬಿಯಲ್ಲಿ ರೈತರ ಭೂಮಿ ಸ್ವಾಧೀನದ ಪರಿಹಾರ ಧನ ವಿತರಣೆಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹುಬ್ಬಳ್ಳಿಯ ಐಡಿಬಿಐ ಬ್ಯಾಂಕ್ ಖಾತೆಯಲ್ಲಿ ಐದಕ್ಕೂ ಹೆಚ್ಚು ಖೊಟ್ಟಿ ಬ್ಯಾಂಕ್ ಖಾತೆಗಳನ್ನು ತೆಗೆದು ಕೋಟ್ಯಾಂತರ ರೂಪಾಯಿ […]

ಅಂತಾರಾಷ್ಟ್ರೀಯ

ಬಿ.ಎಸ್.ಯಡಿಯೂರಪ್ಪಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ

ಧರ್ಮಗುರುಗಳಿಂದ ಹಿಂಸೆಯಲ್ಲಿ ತೊಡಗಿರುವವರ ಮನ:ಪರಿವರ್ತನೆ ಸಾಧ್ಯ – ಸಿಎಂ ಬೊಮ್ಮಾಯಿ ಚಿಕ್ಕಮಗಳೂರು ಪ್ರಜಾಕಿರಣ.ಕಾಮ್ ಮಾ.5 : ಇಂದಿನ ವಿದ್ಯಮಾನದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಭಯೋತ್ಪಾದನೆ ನಡೆಯುತ್ತಿದೆ. ಇಂತಹ ಕುಕೃತ್ಯದಲ್ಲಿ ತೊಡಗಿರುವ ಜನರ ಮನವನ್ನು ಹಿಂಸೆಯಿಂದ ಧರ್ಮದೆಡೆಗೆ ಮನ:ಪರಿವರ್ತನೆ ಮಾಡಬೇಕಿದ್ದು, ಧರ್ಮಗುರುಗಳಿಂದ ಮಾತ್ರ ಈ ಕಾರ್ಯ ಸಾಧ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರ ನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ 51 ಅಡಿ ಎತ್ತರದ […]