ಕ್ರೀಡೆ

ಕ್ರಿಕೆಟಿಗರಿಗೆ ಮನೆಯಿಂದ ಹೊರಬಾರದಂತೆ ಬಿಸಿಸಿಐ ಎಚ್ಚರಿಕೆ

ಮುಂಬಯಿ prajakiran.com : ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿರುವ ಭಾರತೀಯ ಕ್ರಿಕೆಟಿಗರಿಗೆ ಮನೆ ಬಿಟ್ಟು ಹೊರಬರದಂತೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಯಾವುದೇ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟರೆ ಅವರನ್ನು ತಂಡದಿಂದ ಕೈಬಿಡಲಾಗುವುದು. ಆಟಗಾರರು ಕೊರೋನಾದಿಂದ ಗುಣಮುಖರಾಗಿ ಬಂದರೂ ಮತ್ತೆ ವಿಶೇಷ ವಿಮಾನ ವ್ಯವಸ್ಥೆ ಮಾಡುವುದಿಲ್ಲ ಎಂದು ಹೇಳಿದೆ. ಜೂ.2 ರಂದು ಇಂಗ್ಲೆಂಡ್‌ಗೆ ಹೊರಡುವ ನಿರೀಕ್ಷೆ ಇದ್ದು, ಅದಕ್ಕೂ ಮುನ್ನ ಮುಂಬೈನಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಅಲ್ಲಿಯವರೆಗೂ ಎಲ್ಲರೂ ಸುರಕ್ಷಿತವಾಗಿದ್ದು, ಮನೆಯಿಂದ ಹೊರಹೋಗದಿರಿ ಎಂದು ಬಿಸಿಸಿಐ ಹೇಳಿದೆ. Share […]

ಕ್ರೀಡೆ

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಅಭಿಯಾನಕ್ಕೆ ಭರ್ಜರಿ ಬೆಂಬಲ

ನವದೆಹಲಿ prajakiran.com : ಕರೋನಾ ಸೋಂಕಿತರಿಗಾಗಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದಂಪತಿ ಅಭಿಯಾನವೊಂದನ್ನು ಆರಂಭಿಸಿದ್ದು, ಒಂದೇ ದಿನದಲ್ಲಿ 3.6 ಕೋಟಿ ರೂ. ಸಂಗ್ರಹವಾಗಿದೆ. ಈ ಬಗ್ಗೆ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, 24 ಗಂಟೆಗೂ ಮುನ್ನವೇ 3.6 ಕೋಟಿ ಸಂಗ್ರಹವಾಗಿದೆ. ನಿಮ್ಮ ಪ್ರತಿಕ್ರಿಯೆಯಿಂದ ಅತೀವ ಖುಷಿಯಾಗಿದೆ. ಹೀಗೆ ಮುಂದುವರಿದು ಗುರಿಯನ್ನು ಪೂರ್ಣಗೊಳಿಸೋಣ. ದೇಶಕ್ಕೆ ಸಹಾಯ ಮಾಡೋಣ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. Share on: WhatsApp

ಕ್ರೀಡೆ

ಹಾಕಿ ಆಟಗಾರ, ಒಲಿಂಪಿಕ್ ಚಿನ್ನದ ಪದಕ ವಿಜೇತ ರವೀಂದರ್ ಪಾಲ್ ಇನ್ನಿಲ್ಲ

ನವದೆಹಲಿ Prajakiran.com : ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆದಿದ್ದ, ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ (65) ಹೆಮ್ಮಾರಿ ಕೊರೋನಾ ಸೋಂಕಿನಿಂದ ಶನಿವಾರ ಬೆಳಗ್ಗೆ ಸಾವನಪ್ಪಿದ್ದಾರೆ. ರವೀಂದರ್ ಪಾಲ್ ಸೋಂಕಿನಿಂದ ಬಳಲಿದ್ದು ಕಳೆದ ಏ.24 ರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸೋಂಕಿನಿಂದ ಗುಣಮುಖರಾಗಿದ್ದು, ಕಳೆದ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಎಂದು ರವೀಂದರ್ ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಶುಕ್ರವಾರ ಇದ್ದಕ್ಕಿದ್ದಂತೆ ಅವರ ಆರೋಗ್ಯ ಸ್ಥತಿ ಗಂಭೀರವಾಗಿದ್ದು, ವೆಂಟಿಲೇಟರ್‌ ಅಳವಡಿಲಾಯಿತು ಎಂದು […]

ಕ್ರೀಡೆ

ಕೊರೋನಾ ಲಸಿಕೆ ಪಡೆದ ಕ್ರಿಕೆಟಿಗ ಶಿಖರ್ ಧವನ್

ನವದೆಹಲಿ prajakiran.com : ಭಾರತ ತಂಡದ ಕ್ರಿಕೆಟ್ ಆಟಗಾರ ಶಿಖರ್ ಧವನ್ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿರುವ ಶಿಖರ್ ಲಸಿಕೆಯನ್ನು ಪಡೆಯಲು ಯಾರು ಹಿಂಜರಿಯಬೇಡಿ. ಕೊರೋನಾ ವಿರುದ್ಧ ಹೋರಾಡಲು ಲಸಿಕೆ ನಮಗೆ ಸಹಾಯ ಮಾಡುತ್ತದೆ. ಕೊರೋನಾ ಮಣಿಸಲು ಮುಂಚೂಣಿಯಲ್ಲಿ ನಿಂತಿರುವ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿತ್ತೇನೆ ಎಂದಿದ್ದಾರೆ. ಇನ್ನು ಶಿಖರ್ ಧವನ್ ಕೊರೋನಾ ಲಸಿಕೆ ತೆಗೆದುಕೊಂಡು ಟೀಂ ಇಂಡಿಯಾದ ಮೊದಲ ಆಟಗಾರರಾಗಿದ್ದಾರೆ. Share on: […]

ಕ್ರೀಡೆ

ಐಪಿಎಲ್‌ ಮೇಲೂ ಕೊರೋನಾ ಕರಿನೆರಳು : 2021ರ ಟೂರ್ನಿ ರದ್ದು…..!

ಮುಂಬೈ prajakiran.com :  ಕೊರೋನಾ ಮಹಾಮಾರಿಯಿಂದ ದೇಶವೇ ಸಂಕಷ್ಟದಲ್ಲಿದೆ. ಇದೀಗ ಕ್ರಿಕೆಟ್‌ ಆಟಗಾರರ ಬೆನ್ನುಬಿದ್ದಿದೆ ಕೊರೋನಾ. ಈಗಾಗಲೇ ಹಲವು ಆಟಗಾರರಿಗೆ ಕೊರೋನಾ ಸೋಂಕು ತಗುಲಿದ್ದು, ಐಪಿಎಲ್-2021 ಟೂರ್ನಿಯನ್ನು ಬಿಸಿಸಿಐ ರದ್ದು ಮಾಡಿದೆ. ಈ ಕುರಿತು ಬಿಸಿಸಿಐ ಉಪ ನಿರ್ದೇಶಕ ರಾಜೀವ್ ಶುಕ್ಲಾ ಮಾತನಾಡಿ, ಈ ಬಾರಿ ಐಪಿಎಲ್ ಟೂರ್ನಿ ಕ್ಯಾನ್ಸಲ್ ಆಗಲು ಕೊರೋನಾ ಕಾರಣ ಎಂದಿದ್ದಾರೆ. ನಿನ್ನೆಯಷ್ಟೇ ಕೊರೋನಾ ಕಾರಣದಿಂದ ಕೆಕೆಆರ್ ಹಾಗೂ ಆರ್‌ಸಿಬಿ ಪಂದ್ಯ ರದ್ದಾಗಿದ್ದು, ಇದೀಗ ಆಟಗಾರರು ಹಾಗೂ ಸಪೋರ್ಟ್ ಸ್ಟಾಫ್‌ಗೆ ಕೊರೋನಾ ಸೋಂಕು […]

ಕ್ರೀಡೆ

ಕೊರೋನಾಗೆ ಬಲಿಯಾದ ಮಿಸ್ಟರ್​ ಇಂಡಿಯಾ ಜಗದೀಶ್​ ಲ್ಯಾಡ್​

ನವದೆಹಲಿ prajakiran.com : ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದೀಗ ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ ಮತ್ತು ಮಿಸ್ಟರ್​ ಇಂಡಿಯಾ ಜಗದೀಶ್​ ಲ್ಯಾಡ್ (34)​ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರೆ. ಜಗದೀಶ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ವಡೋದರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಕೊನೆಯುಸಿರೆಳೆದಿದ್ದಾರೆ. ಮಹಾಮಾರಿ ಕರೋನಾ ಪಾಸಿಟಿವ್ ಘಟಾನುಘಟಿ ನಾಯಕರು, ಸಿನಿಮಾ ನಟರು ಸೇರಿದಂತೆ ವಿವಿಧ ರಂಗದ ಗಣ್ಯರು ಕರೋನಾದಿಂದ ಬಳಲಿ ಬೆಂಡಾಗಿ ಇಹಲೋಕ ತ್ಯಜಿಸಿರುವುದು ವಿಧಿಯಾಟ. Share on: WhatsApp

ಕ್ರೀಡೆ

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಕೊರೋನಾಗೆ ಬಲಿ….!

ಬೆಂಗಳೂರು prajakiran.com : ದೇಶದಲ್ಲಿ ಕೊರೋನಾ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ದಿನೇ ದಿನೇ ಹಲವಾರು ಜನರನ್ನು ಬಲಿಪಡೆಯುತ್ತಿದೆ. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ (63) ಕೊರೋನಾ ದಿಂದ ನಿಧನರಾಗಿದ್ದಾರೆ. ಚಿಕ್ಕಮಗಳೂರ ಕಡೂರಿನ ಚೆಲುವಾಂಬ ಅವರಿಗೆ ಅನಾರೋಗ್ಯದ ಕಾರಣದಿಂದಾಗಿ ಏ.20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಪರೀಕ್ಷೆಯಲ್ಲಿ ವರದಿ ಪಾಸಿಟಿವ್ ಬಂದಿದೆ. ನಾಲ್ಕು ದಿನಗಳಿಂದ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಕಳೆದ ರಾತ್ರಿ ಅತಿಯಾದ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು […]

ಕ್ರೀಡೆ

ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಧಾರವಾಡದ ಕ್ರೀಡಾಪಟು

ಧಾರವಾಡ prajakiran.com : ಧಾರವಾಡದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯದ ಕ್ರೀಡಾಪಟು ಪ್ರಿಯಾಂಕ ಓಲೇಕಾರ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕು. ಪ್ರೀಯಾಂಕಾ ಓಲೇಕಾರ ಆಸ್ಸಾಂನ ಗೌಹಾತಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಮತ್ತು ಚಂಡಿಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರಾಸ್ ಕಂಟ್ರಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಕರ್ನಾಟಕಕ್ಕೆ ಮತ್ತು ಧಾರವಾಡ […]

ಕ್ರೀಡೆ

ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಇನ್ಸಪೆಕ್ಟರ್ ಮುರುಗೇಶ ಚನ್ಬಣ್ಣವರ

5 ಗಂಟೆ 7 ನಿಮಿಷದಲ್ಲಿ 23.1 ಕಿಲೋವಮೀಟರ್ ರನ್ನಿಂಗ್, 90 ಕಿಮೀ ಸೈಕ್ಲಿಂಗ್ ಪೂರ್ಣಗೊಳಿಸಿದ ಖ್ಯಾತಿ ಅಹಮದ್ ನಗರ (ಮಹಾರಾಷ್ಟ್ರ) prajakiran.com : ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಯ ಇನ್ಸಪೆಕ್ಟರ್ ಹಾಗೂ ಸದ್ಯ ಹುಬ್ಬಳ್ಳಿಯ ಹೆಸ್ಕಾಂ ಜಾಗೃತಿ ದಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಮುರುಗೇಶ ಚನ್ನಣ್ಣವರ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇನ್ಸಪೆಕ್ಟರ್ ಮುರುಗೇಶ ಚನ್ಬಣ್ಣವರ ಈ ಹಿಂದೆ ನಡೆದ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿ, ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು. ಆ ಮೂಲಕ ರಾಜ್ಯದ ಹಾಗೂ […]

ಕ್ರೀಡೆ

ರಾಷ್ಟ್ರ ಮಟ್ಟದ ಸ್ಟ್ರೆಂತ್ ಲಿಪ್ಟಿಂಗ್ ಸ್ಪರ್ಧೆ ಆಯ್ಕೆ

ಧಾರವಾಡ prakiran.com : ಕರ್ನಾಟಕ ರಾಜ್ಯ ಸ್ಟ್ರೆಂತ್  ಲಿಪ್ಟಿಂಗ್ ಅಸೋಷಿಯೇಶನ್ ವತಿಯಿಂದ ದಾವಣೆಗೇರಿ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಲ್ಲಿ ಜ. 24ರಂದು ಆಯೋಜಿಸಿದ ರಾಜ್ಯ ಮಟ್ಟದ ಸ್ಟ್ರೆಂತ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಧಾರವಾಡದ ಸ್ಪಾರ್ಕ್ ವ್ಯಾಯಾಮ ಶಾಲೆಯ ಸ್ಪರ್ಧಾರ್ಥಿಗಳು 8 ಚಿನ್ನ, 5 ಬೆಳ್ಳಿ, 1 ಕಂಚಿನ‌ ಪದಕದೊಂದಿಗೆ  ರನ್ನರ್ ಅಪ್ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿವಿಧ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು  ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ  ಧಾರವಾಡದ ಸ್ಪಾರ್ಕ್ ವ್ಯಾಯಾಮ ಶಾಲೆಯ […]