ಸಿನಿಮಾ

ನಟಿ ತಾರಾಗೆ ಕೊರೋನಾ ಪಾಸಿಟಿವ್…..!

ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾಗೆ ಕೊರೋನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ನಟಿ ತಾರಾ, ನನಗೆ ಕೊರೋನಾ ಸೋಂಕು ಧೃಡವಾಗಿದ್ದು, ಸ್ನೇಹಿತರು, ಸಂಬಂಧಿಗಳು, ಅಭಿಮಾನಿಗಳು ಕರೆ ಮಾಡುವ ಮೂಲಕ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ಕೊರೋನಾ ಬಂದ ಕೂಡಲೇ ಯಾರೂ ಕೂಡ ಗಾಬರಿಯಾಗಬೇಡಿ, ಮೊದಲು ಮನೆಯಲ್ಲೇ ಐಸೋಲೇಟ್ ಆಗಿ. ದಯವಿಟ್ಟು ಮನೆಯಿಂದ […]

ಸಿನಿಮಾ

ಕನ್ನಡದ ಬಿಗ್‌ ಬಾಸ್‌ ಶೋ ಮೇಲೂ ಕೊರೋನಾ ಕರಿನೆರಳು : ನಾಳೆ ಎಲ್ಲಾ ಸ್ಪರ್ಧಿಗಳೂ ಮನೆಗೆ ವಾಪಸ್ಸು

ಬೆಂಗಳೂರು prajakiran.com : ಕರ್ನಾಟಕದ ಅತಿದೊಡ್ಡ ಹಾಗೂ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸ್ಥಗಿತಗೊಂಡು 72ನೇ ದಿನಕ್ಕೆ ಅಂತ್ಯವಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಲಾಕ್ ಡೌನ್ ಜಾರಿ ಮಾಡಿದ್ದು, ಈ ಹಿನ್ನೆಲೆ ಕಿರುತೆರೆ ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಈ ಕಾರಣದಿಂದ ‘ಬಿಗ್ ಬಾಸ್’ ಶೋ ನಾಳೆಗೆ ಮುಕ್ತಾಯವಾಗಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಮೇಶ್‌ ಗುಂಡ್ಕಲ್‌ […]

ಸಿನಿಮಾ

ಕಂಗನಾ ರಣಾವತ್ ಗೆ ಕೋವಿಡ್ ದೃಢ….!

ಶಿಮ್ಲಾ Prajakiran.com : ಬಾಲಿವುಡ್ ನಟಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಗಮನ ಸೆಳೆಯುತ್ತಿರುವ ಕಂಗನಾ ರಣಾವುತ್ ಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಸ್ವತಃ ಕಂಗನಾ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನ ತಮ್ಮ ಖಾತೆಯಲ್ಲಿ ಹೇಳಿಕೊಂಡಿದ್ದು, ಹಿಮಾಚಲ ಪ್ರದೇಶಕ್ಕೆ ಬರುತ್ತಿದ್ದಂತೆ ಕೋವಿಡ್ ಪರೀಕ್ಷೆ ಮಾಡಿಸಿದ್ದೆ. ವರದಿ ಪಾಸಿಟಿವ್ ಬಂದಿದೆ ಎಂದಿದ್ದಾರೆ. ಸದ್ಯ ಕ್ವಾರಂಟೈನ್ ಆಗಿದ್ದೇನೆ. ಈ ಸೋಂಕು ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಯಾವುದೇ ಸೂಚನೆಯೂ ಇರಲಿಲ್ಲ. ನಾನಿದನ್ನೂ ಹೊಡೆದುರುಳಿಸುತ್ತೇನೆ […]

ಸಿನಿಮಾ

ಆಕೆಯ ಜೀವವನ್ನು ನಾನು ಬದುಕಿಸಬೇಕಿತ್ತು ಎನಿಸುತ್ತಿದೆ : ಸೋನು ಸೂದ್

ಮುಂಬಯಿ prajakiran.com : ಕೊರೋನಾ ಸಂಕಷ್ಟದ ಪರಿಸ್ಥತಿಯಲ್ಲಿ ಜನರಿಗೆ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಮಾಡಿರುವ ಟ್ವೀಟ್‌ವೊಂದು ಎಲ್ಲರ ಮನಕಲಕುವಂತಿದೆ. ನಾಗಪುರದ ಯುವತಿ ಭಾರತಿಯನ್ನು ಹೈದರಾಬಾದ್‌ಗೆ ಏರ್‌ಲಿಫ್ಟ್ ಮಾಡಿಸಿದ್ದೆ. ಆ ಯುವತಿ ನಿನ್ನೆ ರಾತ್ರಿ ಮೃತಪಟ್ಟಿದ್ದಾಳೆ. ಎಕ್ಮೋ ಮಶೀನ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಾವು ಬದುಕಿನ ಮಧ್ಯೆ ಆಕೆ ಹೊಡೆದಾಡಿದ್ದಳು. ಆಕೆ ಬೇಗ ಹುಷಾರಾಗಲಿ ಎಂದು ಕಾಯುತ್ತಿದ್ದ ಪೋಷಕರಿಗೂ, ಆಕೆ ನಮ್ಮ ಜೊತೆ ಬಂದು ಮಾಮೂಲಾಗಿ ಇರಲಿ ಎಂದು ಹರಸಿದ್ದ […]

ಸಿನಿಮಾ

ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಇನ್ನಿಲ್ಲ

ಬೆಂಗಳೂರು prajakiran.com : ಬೆಟ್ಟದ ಹೂ ಸಿನಿಮಾ ಮೂಲಕ ಜನರ ಮನೆಮಾತಾಗಿದ್ದ ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.  ಹತ್ತು ದಿನಗಳಿಂದಲೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಅನುಭವ, ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಅನುಭವ ಇವರ ಪ್ರಮುಖ ಸಿನಿಮಾಗಳು. Share on: WhatsApp

ಸಿನಿಮಾ

ಕನ್ನಡದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಇನ್ನಿಲ್ಲ….!

ಬೆಂಗಳೂರು Prajakiran.com : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕವಿರತ್ನ ಕಾಳಿದಾಸ, ಕಿಂದರಿ ಜೋಗಿ, ಅಂಜದ ಗಂಡು’ಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ರೇಣುಕಾ ಶರ್ಮಾ(81) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕು ತಗುಲಿದ್ದ ಅವರನ್ನು ಗಿರಿನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದಲ್ಲಿ ಸೋಂಕು ಹೆಚ್ಚಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅನುಪಮ ಚಿತ್ರದ ಮೂಲಕ ನಿರ್ದೇಶನಕ್ಕಿಳಿದ ಅವರು ಶಹಬ್ಬಾಸ್ ವಿಕ್ರಮ್ , ಕವಿರತ್ನ ಕಾಳಿದಾಸ, ಸತ್ಕಾರ ಹಾಗೂ ಶಬರಿಮಲೆ ಸ್ವಾಮಿ ಅಯ್ಯಪ್ಪ ಅವರ ನಿರ್ದೇಶನದ ಸೂಪರ್ ಹಿಟ್ […]

ಸಿನಿಮಾ

ಖ್ಯಾತ ಬಾಲಿವುಡ್ ನಟ, ಮೇಜರ್ ಬಿಕ್ರಮ್ ಜೀತ್ ನಿಧನ

ನವದೆಹಲಿ Prajakiran.com : ನಟ ಬಿಕ್ರಮ್ ಜೀತ್ ಕನ್ವರ್ ಪಾಲ್(52) ಕೊರೋನಾ ಸೋಂಕಿನಿಂದ ಶುಕ್ರವಾರ ನಿಧನರಾಗಿದ್ದಾರೆ. ಜನಪ್ರಿಯ ನಟ ಪಾಲ್ ದಿಢೀರ್ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಆಘಾತವ್ಯಕ್ತಪಡಿಸಿದ್ದಾರೆ. ನಿವೃತ್ತ ಸೇನೆ ಅಧಿಕಾರಿಯಾಗಿದ್ದ ಅವರು ಹಲವಾರು ಟಿವಿ ಸೀರಿಯಲ್ ಗಳಲ್ಲಿ ನಟಿಸುವುದರ ಜೊತೆಗೆ ಸಿನಿಮಾರಂಗದಲ್ಲಿಯೂ ದೀರ್ಘಕಾಲ ನಟಿಸಿದ್ದಾರೆ. ಸಿನಿಮಾ ನಿರ್ಮಾಪಕ ಅಶೋಕ್ ಪಂಡಿತ್ ಅವರು ಈ ವಿಷಯ ಟ್ವೀಟ್ ಮಾಡಿದ್ದು, ನಟ, ಮೇಜರ್ ಬಿಕ್ರಮ್ ಜೀತ್ ಕನ್ವರ್ ಪಾಲ್ ನಿಧನ ಸುದ್ದಿ ಕೇಳಿ ಆಘಾತವಾಗಿದೆ. ನಿವೃತ್ತ ಸೇನಾ ಅಧಿಕಾರಿಯಾಗಿದ್ದ […]

ಸಿನಿಮಾ

ಟಾಲಿವುಡ್ ನಟ ಅಲ್ಲು ಅರ್ಜುನ್ ಗೆ ಕೊರೋನಾ …..!

ಹೈದ್ರಾಬಾದ್ prajakiran. com : ಬಹುಬೇಡಿಕೆಯ ಟಾಲಿವುಡ್ ನಟ, ಸ್ಟೈಲಿಶ್ ಸ್ಟಾರ್ ಎಂದೇ ಖ್ಯಾತರಾದ ಅಲ್ಲು ಅರ್ಜುನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ್ಗ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಕೊರೋನಾ ಸೋಂಕು ತಗುಲಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲೇ ಇರಿ, ಸಮಯ ಮಾಡಿಕೊಂಡು ಕೊರೋನಾ ಲಸಿಕೆ ಪಡೆಯಿರಿ. ನನ್ನ ಬಗ್ಗೆ […]

ಸಿನಿಮಾ

ಕೋವಿಡ್ ಗೆ ಬಲಿಯಾದ ಪುಟ್ಟಣ್ಣ ಕಣಗಾಲ್ ಪುತ್ರ…..!

ಬೆಂಗಳೂರು prajakiran.com : ಮೊನ್ನೆಯಷ್ಟೆ ಕೋಟಿ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ರಾಮು ಕೊರೋನಾ ಸೋಂಕಿನಿಂದ ಅಸು ನೀಗಿದ್ದರು. ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಹೆಸರಾಂತ ಹಿರಿಯ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಬೆಳಗ್ಗೆ ರಾಮು ಕಣಗಾಲ್ ನಿಧನರಾಗಿದ್ದು ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿಲಾಗಿದೆ. ಮದ್ರಾಸ್‌ನಲ್ಲಿ ಓದಿ ಬೆಳೆದಿದ್ದು, ಅನೇಕರಿಗೆ ನೃತ್ಯವನ್ನು ಕಲಿಸಿದ್ದಾರೆ. ‘ಕಣಗಾಲ್​ ನೃತ್ಯಾಲಯ’ಎನ್ನುವ ನಾಟ್ಯಶಾಲೆಯನ್ನು ರಾಮು ಕಣಗಾಲ್ ನಡೆಸುತ್ತಿದ್ದರು. Share […]

ಸಿನಿಮಾ

ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ನಿಧನ

ಬೆಂಗಳೂರು prajakiran.com : ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ನಟಿ ಮಾಲಾಶ್ರೀ ಪತಿ ರಾಮು ಕೊರೋನಾ ಸೋಂಕಿನಿಂದ ಇಂದು ನಿಧನರಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ರಾಮು ಅವರಿಗೆ ಕೊರೋನಾ ಸೊಂಕು ದೃಢಪಟ್ಟಿತ್ತು, ಕೊರೋನಾ ಸೊಂಕಿನಿಂದ ಬಳುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ. ತುಮಕೂರಿನ ಕುಣಿಗಲ್‌ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು […]