ಸಿನಿಮಾ

ಧಾರವಾಡದಲ್ಲಿ ಪಠಾಣ್ ಹಿಂದಿ ಚಿತ್ರದ ಪೋಸ್ಟರ್ ಹರಿದ ಬಜರಂಗದಳದ ಕಾರ್ಯಕರ್ತರು….!

ಧಾರವಾಡ ಪ್ರಜಾಕಿರಣ.ಕಾಮ್ : ನಗರದ ಸಂಗಮ್ ಚಿತ್ರಮಂದಿರದಲ್ಲಿ ಅಳವಡಿಸಿದ್ದ ಪಠಾಣ್ ಹಿಂದಿ ಚಿತ್ರದ ಪೋಸ್ಟರ್ ಗಳನ್ನು ಬಜರಂಗದಳದ ಕಾರ್ಯಕರ್ತರು ಹರಿದು ಹಾಕಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಬಾಲಿವುಡ್ ನಟ ಶಾರೂಕ್ ಖಾನ್, ನಟಿ ದೀಪಿಕಾ ಪಡುಕೋಣೆ ಅಭಿಯನದ ಪಠಾಣ್ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ.

ಈ ಹಿನ್ನೆಲೆ ಚಿತ್ರಮಂದಿರದಲ್ಲಿ ಚಿತ್ರದ ದೊಡ್ಡ ಪೋಸ್ಟರ್‌ ಅಳವಡಿಸಲಾಗಿತ್ತು. ಇಲ್ಲಿಗೆ ಬಂದ ಬಜರಂಗದಳದ ಕಾರ್ಯಕರ್ತರು, ಚಿತ್ರದ ಬೇಷರಮ್ ರಂಗ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಹಾಕಿ ನೃತ್ಯ ಮಾಡಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಈ ಚಿತ್ರವನ್ನು ಬಿಡುಗಡೆ ಮಾಡದೇ, ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಪೋಸ್ಟರ್ ಹರಿದು ಹಾಕಿದ್ದಾರೆ.

 ಇದು ಅಶ್ಲೀಲತೆಗೆ ಒತ್ತು ನೀಡಿದಂತಿದೆ ಎಂದು ದೇಶಾದ್ಯಂತ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಚಿತ್ರವನ್ನು ಬಾಯ್ಕಟ್ ಮಾಡುವಂತೆ ಕರೆ ನೀಡಿದ್ದವು.

ಅದರ ಭಾಗವಾಗಿ ಬಜರಂಗದಳದ ಕಾರ್ಯಕರ್ತರು ಚಿತ್ರ ಬಿಡುಗಡೆಗೂ ಮುನ್ನ ನಗರದ ಚಿತ್ರಮಂದಿರದಲ್ಲಿ ಅಳವಡಿಸಿದ್ದ ಪೋಸ್ಟರ್ ಹರಿದು ಹಾಕಿದ್ದಾರೆ.

ಈ ಕೂಡಲೇ ಚಿತ್ರ ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಚಿತ್ರಮಂದಿರಕ್ಕೆ ನುಗ್ಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೋರಾಟದ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಹಾನಿಯಾದರೇ ಅದಕ್ಕೆ ನಾವು ಹೊಣೆಗಾರರಲ್ಲ ಎಂಬ ಎಚ್ಚರಿಕೆ ಸಹ ನೀಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *