ಅಂತಾರಾಷ್ಟ್ರೀಯ

ಮೀಸಲಾತಿಯಲ್ಲಿ ಮೋಸ ಮಾಡಿದ್ದರೆ ಕಾಂಗ್ರೆಸ್ ಮಾತ್ರ : ಅಮಿತ್ ಶಾ”

*ಯಾವುದಾದರೂ ರಾಜಕೀಯ ಪಕ್ಷ SC,ST,OBC ಮೀಸಲಾತಿಯನ್ನು ಲೂಟಿ ಮಾಡಿದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ: ಅಮಿತ್ ಶಾ*

ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ ಎರಡು ಹಂತಗಳು ಮುಕ್ತಾಯಗೊಂಡಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮುಂಬರುವ ಮೂರನೇ ಹಂತದ ಚುನಾವಣೆಯ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.

ಸಾರ್ವಜನಿಕ ಸಭೆಗಳು ಮತ್ತು ರೋಡ್ಶೋಗಳ ಮೂಲಕ ಶಾ ಅವರು ರಾಜ್ಯಗಳಾದ್ಯಂತ ಜನರೊಂದಿಗೆ ತೊಡಗಿಸಿಕೊಂಡಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪ್ರಮುಖ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಂವಿಧಾನವನ್ನು ಬದಲಾಯಿಸುವುದು ಮತ್ತು ಮೀಸಲಾತಿಯನ್ನು ಕೊನೆಗೊಳಿಸುವುದು ಸೇರಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಳ್ಳಿಹಾಕಿದರು.

ಭಾರತೀಯ ರಾಜಕೀಯಕ್ಕೆ ಹೊಸ ದಿಶೆಯನ್ನು ನೀಡುವಲ್ಲಿ ಹೆಸರುವಾಸಿಯಾದ ಶಾ, “SC, ST ಮತ್ತು OBC ಮೀಸಲಾತಿಯಲ್ಲಿ ಯಾವುದೇ ರಾಜಕೀಯ ಪಕ್ಷವು ಜನರಿಗೆ ಮೋಸ ಮಾಡಿದ್ದರೆ ಅದು ಕಾಂಗ್ರೆಸ್ ಮಾತ್ರ” ಎಂದು ಹೇಳಿದರು.

ಇತ್ತೀಚೆಗೆ, ಕಾಂಗ್ರೆಸ್ ನಕಲಿ ವೀಡಿಯೊಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ,

ಭಾರತೀಯ ಜನತಾ ಪಕ್ಷವು 400 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ, ಮೋದಿ ಸರ್ಕಾರವು ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂದು ಆರೋಪಿಸುತ್ತಿದೆ.

ಆದಾಗ್ಯೂ, ಮೋದಿ ಸರ್ಕಾರದ ಕಳೆದ 10 ವರ್ಷಗಳ ಆಡಳಿತದ ಆಧಾರದ ಮೇಲೆ ಈ ಆರೋಪವು ಆಧಾರರಹಿತ ಮತ್ತು ಅವಾಸ್ತವ ಎಂದು ಗೊತ್ತಾಗುತ್ತದೆ.

2014 ಮತ್ತು 2019ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೇಶದ ಜನತೆ ಪೂರ್ಣ ಬಹುಮತ ನೀಡಿದ್ದು, ಬಿಜೆಪಿ 10 ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ, ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ನಂತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ಅಥವಾ ಅವಧಿಯನ್ನು ವಿಸ್ತರಿಸಿಲ್ಲ. ಅದರ ಬದಲಿಗೆ ಮೋದಿ ನೇತೃತ್ವದ ಮತ್ತು ಅಮಿತ್ ಶಾ ಅವರ ಕೌಶಲ್ಯಪೂರ್ಣ ಮಾರ್ಗದರ್ಶನದ ಈ ಸರ್ಕಾರ ಪೂರ್ಣ ಬಹುಮತವನ್ನು 370 ನೇ ವಿಧಿಯನ್ನು ತೆಗೆದುಹಾಕಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸಲು, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಲಾಕ್ಡೌನ್ ಹೇರಲು, ಸಿಎಎ ತರಲು ಮತ್ತು ಭಗವಾನ್ ಶ್ರೀರಾಮನ ಮಂದಿರ ನಿರ್ಮಾಣದ ಮಾರ್ಗವನ್ನು ಸುಗಮಗೊಳಿಸಲು ಬಳಸಿಕೊಂಡಿದೆ.

ಹಸಿ ಬಿಸಿ ಸುಳ್ಳಗಳನ್ನು ಹಬ್ಬಿಸಿ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂಬುದು ದೇಶದ ಜನತೆಗೆ ಗೊತ್ತಿದೆ.

ಆಂಧ್ರಪ್ರದೇಶ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಸ್ಸಿ, ಎಸ್ಟಿ ಮತ್ತು ಒಬಿಸಿ ಹಕ್ಕುಗಳ ವಿರುದ್ಧ ಕೆಲಸ ಮಾಡಿ, ಅಸಂವಿಧಾನಿಕ ರೀತಿಯಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಿತು. ಅಂತ್ಯೋದಯ ರಾಜಕೀಯವನ್ನು ಪ್ರತಿಪಾದಿಸುವ ಅಮಿತ್ ಶಾ, ಧರ್ಮಾಧಾರಿತ ಮೀಸಲಾತಿ ಅಸಾಂವಿಧಾನಿಕ ಎಂದು ನಂಬುತ್ತಾರೆ ಮತ್ತು ಈ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಧರ್ಮಾಧಾರಿತ ಮೀಸಲಾತಿಯನ್ನು ರದ್ದುಪಡಿಸಿ, ಎಸ್ಸಿ, ಎಸ್ಟಿ, ಮತ್ತು ಒಬಿಸಿ ಅವರಿಗೆ ನ್ಯಾಯ ನೀಡಲಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಗೆ ಬಿಜೆಪಿಯೇ ಅತಿ ದೊಡ್ಡ ಬೆಂಬಲಿಗವಾಗಿದೆ.

ಸ್ವಾತಂತ್ರ್ಯಾನಂತರ ದೇಶದ ಜನತೆ ದಶಕಗಳ ಕಾಲ ಕಾಂಗ್ರೆಸ್ ಆಡಳಿತವನ್ನು ಕಂಡಿದ್ದು, ಈ ಅವಧಿಯಲ್ಲಿ ಬಡವರು ಇನ್ನಷ್ಟು ಬಡವರಾದರು.

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದು, ಭಾರತವು ವಿಶ್ವಾದ್ಯಂತ ಹೊಸ ಗುರುತನ್ನು ಪಡೆಯುತ್ತಿರುವಾಗ, ಮೋದಿ ಸರ್ಕಾರದ ಸಾಧನೆಗಳನ್ನು ಜನರು ಸಹ ಗುರುತಿಸಿದ್ದಾರೆ.

ಹೋಲಿಸಿ ನೋಡಿದಾಗ, ಮೋದಿ ಸರ್ಕಾರದ 10 ವರ್ಷಗಳು, ಕಾಂಗ್ರೆಸ್ನ 55 ವರ್ಷಗಳ ಆಡಳಿತಕ್ಕಿಂತ ಉತ್ತಮವಾಗಿವೆ.

2024ರ ಲೋಕಸಭೆ ಚುನಾವಣೆಯಲ್ಲಿ ಜನರು ಯಾವ ಕಡೆ ಒಲವು ಹೊಂದಿದ್ದಾರೆ ಎಂದು ಊಹಿಸುವುದು ಸುಲಭ.

ಭಾರತೀಯ ರಾಜಕೀಯ ಚಾಣಕ್ಯ ಅಮಿತ್ ಶಾ 2024ರ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಬಾವುಟ ಹಾರಿಸಲು ಸಂಪೂರ್ಣ ಸಿದ್ಧರಾಗಿದ್ದಾರೆ.

ಶಾ ಒಂದು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರೆ ಗೆಲುವು ಶತಸಿದ್ಧ. ಅವರ ಚಾಣಾಕ್ಷ ತಂತ್ರಗಳಿಗೆ ಉತ್ತರವಿಲ್ಲ ಎಂದು ಪ್ರತಿಪಕ್ಷಗಳೂ ಒಪ್ಪಿಕೊಂಡಿವೆ.

2024ರಲ್ಲಿ 400ಕ್ಕೂ ಹೆಚ್ಚು ಸೀಟು ಪಡೆದು ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗುವುದು ಖಚಿತ.ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಮ್ಯಾಜಿಕ್ ಜೊತೆಗೆ ಶಾ ಫ್ಯಾಕ್ಟರ್ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *