ಅಪರಾಧ

ಚಿನ್ನದ ಚೈನ್, ಮೊಬೈಲ್ ದೋಚಿದ್ದ‌ ಮೂವರ ಬಂಧನ

ಧಾರವಾಡ ಪ್ರಜಾಕಿರಣ.ಕಾಮ್ : ವ್ಯಕ್ತಿಯೋರ್ವನ ‌ಮೇಲೆ ಹಲ್ಲೆ ನಡೆಸಿ‌ ಚಿನ್ನದ ಚೈನ್ ಮತ್ತು ಮೊಬೈಲ್ ದೋಚಿದ್ದ‌ ಮೂವರನ್ನು ಬಂಧಿಸುವಲ್ಲಿ ತಾಲೂಕಿನ ಗರಗ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಶಂಕರ ಕೊಕಾಟೆ, ದೀಪಕ ಗೊಲ್ಲರ ಮತ್ತು ತಾಲೂಕಿನ‌ ಕಲ್ಲೂರ ಗ್ರಾಮದ ರವಿ ದಂಡಿನ ಬಂಧಿತ ಆರೋಪಿಗಳು. ಬಂಧಿತರು ಕಳೆದ ಫೆಬ್ರುವರಿ 3 ರಂದು ರಾತ್ರಿ 10 ಗಂಟೆ ಸುಮಾರಿಗೆ ತಾಲೂಕಿನ ಕಲ್ಲೂರ ಗ್ರಾಮದ ಜಿಲಾನಿ‌ ಮಾಬುಬ ಅಲಿ ಸೈಯ್ಯದನವರ ಎಂಬಾತನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತಡೆದು ಹಲ್ಲೆ ನಡೆಸಿ, ಆತನ […]

ಅಪರಾಧ

ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವು

ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಭೀಕರ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ಹುಬ್ಬಳ್ಳಿ ಹೊರವಲಯದ ಪೊನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆನಂದ ನಾಯಕರ (34), ಈರಣ್ಣಾ ಬಡಿಗೇರ (36) ಎಂಬುವರೇ ಮೃತಪಟ್ಟವರು. ಮೃತಪಟ್ಟವರು ಧಾರವಾಡ ಜಿಲ್ಲೆಯ ತಾಲೂಕಿನ ಆಸ್ತಕಟ್ಟಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. Share on: […]

ಅಪರಾಧ

ಶಹಾಪುರ ಅರಣ್ಯಾಧಿಕಾರಿ ಮಹೇಶ್ ಕನಕಟ್ಟಿ ಬರ್ಬರ ಹತ್ಯೆ..!

*ಕ್ಷುಲ್ಲಕ ವಿಚಾರಕ್ಕೆ ಅರಣ್ಯಾಧಿಕಾರಿಯ ಅಟ್ಟಾಡಿಸಿ ಕೊಲೆ..! *ಶಹಾಪುರ ಅರಣ್ಯಾಧಿಕಾರಿ ಮಹೇಶ್ ಕನಕಟ್ಟಿ ಬರ್ಬರ ಹತ್ಯೆ..!* ಯಾದಗಿರಿ ಪ್ರಜಾಕಿರಣ.ಕಾಮ್ : ಜಿಲ್ಲೆಯ ಶಹಾಪುರ ಅರಣ್ಯಾಧಿಕಾರಿ ಮಹೇಶ್ ಬರ್ಬರವಾಗಿ ಕೊಲೆಯಾಗಿದ್ದಾರೆ. ಪಟ್ಟಣದ ಮೋಟಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಈ ಕೊಲೆ ನಡೆದಿದೆ. ಜೂನ್ 5 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಷುಲ್ಲಕ ವಿಚಾರಕ್ಕೆ ಅರಣ್ಯಾಧಿಕಾರಿಯನ್ನು ಹಂತಕರು ಕೊಲೆಗೈದಿದ್ದಾರೆ. ಕುಡಿದ ಅಮಲಿನಲ್ಲಿ ಅರಣ್ಯಾಧಿಕಾರಿಯನ್ನು ಐವರು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಜೂನ್ 5 ರಂದು ಎಂದಿನಂತೆ ಮೋಟಗಿ ರೆಸ್ಟೋರೆಂಟ್ […]

ಅಪರಾಧ

ಹಾಸನದಲ್ಲಿ ಹಾವು ಕಡಿತಕ್ಕೆ ರೈತ ಮಹಿಳೆ ಬಲಿ

ಹಾಸನ ಪ್ರಜಾಕಿರಣ.ಕಾಮ್ ಜಮೀನಿನಲ್ಲಿ ಕಳೆ ಕೀಳುತ್ತಿದ್ದ ರೈತ ಮಹಿಳೆಯೊಬ್ಬರು ಹಾವು ಕಚ್ಚಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ಚಂದ್ರಮ್ಮ (60) ಮೃತ ಮಹಿಳೆ. ಜಮೀನಿನಲ್ಲಿ ಕಳೆ ಕೀಳುತ್ತಿದ್ದ ವೇಳೆ ಅವರ ಬಲಗೈಗೆ ಹಾವು‌ ಕಚ್ಚಿದೆ. ಕೂಡಲೇ ಅವರನ್ನು ಸ್ಥಳೀಯರು ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಗೆ ಕರೆ ತಂದರಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಚಂದ್ರಮ್ಮ ಅವರಿಗೆ ಕಚ್ಚಿದ ಹಾವನ್ನು ಸ್ಥಳೀಯ ಉರಗತಜ್ಞರೊಬ್ಬರು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದರು. ಈ ಕುರಿತು ಮಾಹಿತಿ ಪಡೆದ […]

ಅಪರಾಧ

ರೌಡಿ ಚೈಲ್ಡ್ ರವಿ ಕೊಲೆ ಪ್ರಕರಣ: ನಾಲ್ವರ ಬಂಧನ

*ರೌಡಿ ಚೈಲ್ಡ್ ರವಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್* ಹಾಸನ ಪ್ರಜಾಕಿರಣ.ಕಾಮ್ : ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಮುಖ ಆರೋಪಿ ರಂಗೋಲಿ ಹಳ್ಳದ ಪ್ರೀತಂ ಅಲಿಯಾಸ್ ಗುಂಡಿಪ್ರೀತು (೨೭), ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ(೨೬), ರಂಗನಾಥ್ ಅಲಿಯಾಸ್ ರಂಗ ಚೇತು(೨೬) […]

ಅಪರಾಧ

ಧಾರವಾಡ : ಇಬ್ಬರನ್ನು ಥಳಿಸಿ, ನೂರು ಗ್ರಾಂ ಚಿನ್ನ ದೋಚಿದ ಖದೀಮರು

ಧಾರವಾಡ ಪ್ರಜಾಕಿರಣ.ಕಾಮ್ : ಮನೆಯವರನ್ನು ಥಳಿಸಿ ಚಿನ್ನದ ಆಭರಣಗಳನ್ನು ದೋಚಿದ ಘಟನೆ ಸಮೀಪದ ನವಲೂರಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಗ್ರಾಮದ ಅಶೋಕ ಕದಂ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿನ ಅಂದಾಜು ೧೦೦ ಗ್ರಾಂ.ನಷ್ಟು ಚಿನ್ನದ ಆಭರಣಗಳನ್ನು ದೋಚಲಾಗಿದೆ. ಮನೆಯಲ್ಲಿ ಅಶೋಕ ಕದಂ ಮತ್ತು ಅವರ ಪತ್ನಿ ಲಲಿತಾ ಮಲಗಿದ್ದ ಸಮಯದಲ್ಲಿ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಮನೆಯ ಕಿಟಕಿ ಮೂಲಕ ದರೋಡೆಕೋರರು ಒಳ ಪ್ರವೇಶಿಸಿದ್ದಾರೆ. ಆಗ ಅಶೋಕ ಮತ್ತು ಅವರ ಪತ್ನಿ […]

ಅಪರಾಧ

ಹುಬ್ಬಳ್ಳಿಯ ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು….!

*ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು* *ಧಾರವಾಡದ ಸುತಗಟ್ಟಿ‌ ಬಳಿ ಆರೋಪಿ ಸದ್ದಾಂ ಹುಸೇನ್ ಸೆರೆ* *ಬಂಧಿಸಲು ಹೋದ ಇನ್ಸಪೆಕ್ಟರ್, ಪೊಲೀಸ್ ಮೇಲೆ ಪೆನ್ ಚಾಕುವಿನಿಂದ ದಾಳಿ ಮಾಡಿದ ಸದ್ದಾಂ* ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸರು ಅಪ್ರಾಪ್ತೆಯ ಅತ್ಯಾಚಾರ ಆರೋಪಿಯನ್ನು ಬಂಧಿಸಲು ಹೋದಾಗ ಪೆನ್ ಚಾಕುವಿನಂದ ದಾಳಿ ಮಾಡಿದ ಘಟನೆ ಧಾರವಾಡದ ಸುತಗಟ್ಟಿ ಬಳಿ ನಿನ್ನೆ ರಾತ್ರಿ ನಡೆದಿದೆ. ದಾಳಿಯಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಪೊಲೀಸ್ ಸಿಬ್ಬಂದಿ ಅರುಣ್ […]

ಅಪರಾಧ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ

*ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಅರೆಸ್ಟ್* *ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಎದುರು ಹಿಂದೂ ಸಂಘಟನೆಗಳ ಪ್ರತಿಭಟನೆ* *ಪೊಲೀಸರ ನಡೆ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರದ ಆಕ್ರೋಶ* *ಲವ್ ಜಿಹಾದ್ ಗ್ಯಾರಂಟಿ ಭಾಗ್ಯ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿ* ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಅಪ್ರಾಪ್ತೆಯನ್ನು ಪ್ರೀತಿ, ಪ್ರೇಮ,ಪ್ರಣಯ ಎಂದು ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌. ಆರೋಪಿ ಸದ್ದಾಂ ಹುಸೇನ್‌ ಎಂಬ ಯುವಕನೇ […]

ಅಪರಾಧ

ನವಲಗುಂದನ ಆಯಟ್ಟಿಯಲ್ಲಿ ಪತ್ನಿಯನ್ನೇ ಹತ್ಯೆಗೈದ ಪಾಪಿ ಪತಿ…!

ಪತ್ನಿಯನ್ನೇ ಹತ್ಯೆಗೈದ ಪಾಪಿ ಪತಿ ಧಾರವಾಡ ಪ್ರಜಾಕಿರಣ.ಕಾಮ್ : ಕಟ್ಟಿಕೊಂಡ ಪತ್ನಿಯನ್ನೇ ಪತಿರಾಯನೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಶಿವಪ್ಪ ಬಳ್ಳೂರ ಎಂಬಾತನೇ ತನ್ನ ಪತ್ನಿ ಮಲ್ಲವ್ವ ಬಳ್ಳೂರ ಎಂಬುವವರನ್ನು ಹತ್ಯೆ ಮಾಡಿದ್ದಾನೆ. ಶಿವಪ್ಪ ಹಾಗೂ ಮಲ್ಲವ್ವ ಅವರ ವಿವಾಹವಾಗಿ 15 ವರ್ಷವಾಗಿತ್ತು. ಇವರಿಬ್ಬರಿಗೂ ಸೌಭಾಗ್ಯ ಎಂಬ ಹೆಣ್ಣು ಮಗಳು ಸಹ ಇದ್ದಾಳೆ. ಹೀಗಿದ್ದರೂ ಶಿವಪ್ಪ ತನ್ನ ಪತ್ನಿಯ ಮೇಲೆ ಸಂದೇಹ ಪಡುತ್ತಿದ್ದ. ನಿನ್ನೆ ರಾತ್ರಿ […]

ಅಪರಾಧ

ಟ್ರೇಡಿಂಗ್ ಹೆಸರಿನಲ್ಲಿ ನಂಬಿಸಿ 7.8 ಲಕ್ಷ ವಂಚನೆ

ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಗೋಲ್ಡ್ ಮ್ಯಾನ್ ಸಚ್ ಟ್ರೇಡಿಂಗ್ ಅಕೌಂಟ್‌ನಲ್ಲಿ ಹೂಡಿಕೆ ಮಾಡಿದರೆ ಮನೆಯಲ್ಲಿಯೇ ಕುಳಿತು ಹಣ ಗಳಿಸಬಹುದು ಎಂದು ನಂಬಿಸಿ ನಗರದ ಮಹಿಳೆಗೆ ೭,೦೮ ಲಕ್ಷ ರೂಪಾಯಿ ವಂಚಿಸಲಾಗಿದೆ. ನಗರದ ನವ್ಯಶ್ರೀ ಎಂಬ ಮಹಿಳೆಗೆ ವಂಚಿಸಲಾಗಿದೆ. ವಾಟ್ಸಪ್ ಮೂಲಕ ಪರಿಚಯವಾದ ಅಪರಿಚಿತರು ವಾಟ್ಸಪ್ ಗ್ರೂಪ್‌ ಗೆ ಸೇರಿಸಿ ಗೋಲ್ಡ್ ಮ್ಯಾನ್ ಸಚ್ ಟ್ರೇಡಿಂಗ್ ಅಕೌಂಟ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆಗೆ ಮೊದಲು ಒಂದಿಷ್ಟು ಲಾಭ ನೀಡಿ ನಂತರ ಮಹಿಳೆಯ ಬ್ಯಾಂಕ್ ಖಾತೆಯಿಂದ […]