ಜಿಲ್ಲೆ

ಧಾರವಾಡಿಗರ ಗಮನ ಸೆಳೆದ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ

ಗಣೇಶ ಹಬ್ಬದ ನಿಮಿತ್ಯ ಧಾರವಾಡದಲ್ಲಿ ಶಶಸ್ತ್ರ ಪಡೆ ಪೊಲೀಸರ ಪಥ ಸಂಚಲನ ಧಾರವಾಡ ಪ್ರಜಾಕಿರಣ.ಕಾಮ್ : ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸರು, ಶಶಸ್ತ್ರ ಪಡೆ ಜೊತೆ ಪಥ ಸಂಚಲನ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಇವರ ನೇತೃತ್ವದಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ನಗರದ ಎಮ್ಮಿಕೇರಿ ನಿಂದ ಶುರುವಾಗಿ ಬಾಗಲಕೋಟ್ ಪೆಟ್ರೋಲ್ ಪಂಪ್ ಜನ್ನತ್ ನಗರ್, ಮದರ್ ಮಡ್ಡಿ ಗಾಂಧಿ ಚೌಕ್. […]

ಜಿಲ್ಲೆ

ನರೇಗಾ ಅಡಿ ಕೆಲಸ ಸರಿಯಾಗಿ ನೀಡಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್  : ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮಗಳ ದುಡಿಯುವ ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸ ಸರಿಯಾಗಿ ನೀಡಬೇಕೆಂದು ಆಗ್ರಹಿಸಿ ಎ.ಐ.ಎಮ್.ಎಸ್.ಎಸ್‌ನ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಮ್.ಎಸ್.ಎಸ್)ಯ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಗ್ರಾಮದ ಜನತೆಗೆ ನರೇಗಾ ಯೋಜನೆ […]

ಜಿಲ್ಲೆ

ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರಿನ ಬಳಕೆ ನಿಷೇಧಕ್ಕೆ ಸ್ವಾಗತ

ಧಾರವಾಡ ಪ್ರಜಾಕಿರಣ .ಕಾಮ್  20 : ಇನ್ನು ಮಂದೆ ಎಲ್ಲ ಸಭೆ ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರಿನ ಬಳಕೆ, ಸರಬರಾಜು ಮಾಡುವುದನ್ನು ನಿಲ್ಲಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ತ.  ಇನ್ನುಂದೆ ಯಾವುದೇ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ಬಳಕೆ, ಸರಬರಾಜು ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರದಿಂದ ಆಯೋಜಿಸಲ್ಪಡುವ ಸಭೆ ಸಮಾರಂಭ ಮತ್ತು ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ […]

ಜಿಲ್ಲೆ

ಸಂಪೂರ್ಣ ಧಾರವಾಡ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ

ಧಾರವಾಡ ಪ್ರಜಾಕಿರಣ.ಕಾಮ್ : ಸಂಪೂರ್ಣ ಧಾರವಾಡ ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕಾಗಿತ್ತು ಎಂದು ಕೆಪಿಸಿಸಿ ವಕ್ತಾರ ಪಿ.ಎಚ್.ನೀರಲಕೇರಿ ಹೇಳಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯಲ್ಲಿ ವಾಡಿಕೆಗಳಗಿಂತ ಕಡಿಮೆ ಪ್ರಮಾಣದ ಮಳೆ ದಾಖಲಾಗಿದೆ. ಮಳೆಯ ಅಭಾವದಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರು ಬಿತ್ತನೆ ಮಾಡಿಲ್ಲ. ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರಗಾಲದ ಛಾಯೇ ಆವರಿಸಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಸಮೀಕ್ಷೆ ನಡೆಸಿ, ಬರ […]

ಜಿಲ್ಲೆ

ಧಾರವಾಡ ಉಪವಿಭಾಧಿಕಾರಿ ಅಶೋಕ್ ತೇಲಿ ವರ್ಗಾವಣೆ

*ನೂತನ ಎಸಿಯಾಗಿ ಶಾಲಂ ಹುಸೇನ್* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡಉಪವಿಭಾಗಧಿಕಾರಿಯಾಗಿದ್ದ ಅಶೋಕ್ ತೇಲಿ ಅವರನ್ನು ರಾಜ್ಯ ಸರ್ಕಾರ ಸ್ಥಳ ತೋರಿಸದೆ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಅವರಿಂದ ತೆರವಾದ ಸ್ಥಳಕ್ಕೆ ಶಾಲಂ ಹುಸೇನ್ ಅವರನ್ನ ವರ್ಗಾವಣೆ ಮಾಡಲಾಗಿದೆ. ಅವರು ಈ ಹಿಂದೆ ವಿಜಯನಗರ ಜಿಲ್ಲೆಯ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾಗಿದ್ದರು. Share on: WhatsApp

ಜಿಲ್ಲೆ

ಗೃಹಲಕ್ಷ್ಮೀ ಯೋಜನೆ ಲೋಕಾರ್ಪಣೆ ನೇರ ವೀಕ್ಷಣೆಗೆ ಧಾರವಾಡದ 243 ಸ್ಥಳಗಳಲ್ಲಿ ಟಿ.ವಿ, ಎಲ್.ಇ.ಡಿ. ಪರದೆಗಳ ವ್ಯವಸ್ಥೆ

ಧಾರವಾಡ ಪ್ರಜಾಕಿರಣ.ಕಾಮ್  ಆ.29: ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ರೂ. 2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಧಾರವಾಡ ಜಿಲ್ಲೆಯಲ್ಲಿ ಕುಟುಂಬದ ಯಜಮಾನಿ ಮಹಿಳೆ ಇರುವ ಒಟ್ಟು 4,04,848 ಪಡಿತರ ಕಾರ್ಡ್‍ಗಳ ಪೈಕಿ ಅದರಲ್ಲಿ 3,40,199 ಫಲಾನುಭವಿಗಳು (ಶೇ.84) ಗೃಹಲಕ್ಷ್ಮೀ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಆಗಸ್ಟ 30, 2023 ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಮುಖ್ಯಮಂತ್ರಿಗಳು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು. […]

ಜಿಲ್ಲೆ

ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳ ಚುನಾವಣೆಯಲ್ಲಿ ಅಕ್ರಮ

*ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳ ಚುನಾವಣೆಯಲ್ಲಿ ಅಕ್ರಮ* *ತನಿಖೆ ಮಾಡಿ ಮರು ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ ಆ. 13 ರಂದು ನಡೆದ ಚುನಾವಣೆಯಲ್ಲಿ ಅನೇಕ ಅಕ್ರಮ ನಡೆದಿದೆ‌ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗುರವಾರ ಮರಾಠ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿದರು.  ಸದಸ್ಯರ ಪಟ್ಟಿಯಲ್ಲಿ ಮರಣ ಹೊಂದಿದ ಹಾಗೂ ಹೊಸ ಸದಸ್ಯರ ಸದಸ್ಯತ್ವದಲ್ಲಿ ಅನೇಕ ಲೋಪದೋಷ ಕಂಡು ಬಂದಿವೆ. ಇದರ ಬಗ್ಗೆ […]

ಜಿಲ್ಲೆ

ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳಿ ಚುನಾವಣೆಯಲ್ಲಿ ಮನೋಹರ ಮೋರೆ ತಂಡ ಭರ್ಜರಿ ಜಯ

ಧಾರವಾಡ ಪ್ರಜಾಕಿರಣ. ಕಾಮ್ : ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಚುನಾವಣೆಯಲ್ಲಿ ಮನೋಹರ ಮೋರೆ ತಂಡ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಆ ಮೂಲಕ ಅಧಿಕಾರದ ಗದ್ದುಗೆ ಉಳಿಸಿಕೊಂಡಿದೆ. ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಮತದಾರರು ಮನೋಹರ ಮೋರೆ ತಂಡದ ಕೈ ಹಿಡಿದಿದ್ದು , ಮೂರನೇ ಬಾರಿಗೆ ಮನೋಹರ ಮೋರೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ . ಧಾರವಾಡ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯ ಕಚೇರಿ ಮುಂದೆ ಜಮಾಯಿಸಿದ ಮನೋಹರ ಮೋರೆ ತಂಡದ ಬೆಂಬಲಿಗರು ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ […]

ಜಿಲ್ಲೆ

ಶಿವನಗರ ಶಾಲೆ ಕಟ್ಟಡದ ಗೋಡೆ ಕುಸಿತ; ಶಿಕ್ಷಣ ಇಲಾಖೆಯ ಮುಂಜಾಗೃತೆಯಿಂದ ತಪ್ಪಿದ ಅವಘಡ

ಧಾರವಾಡ ಪ್ರಜಾಕಿರಣ.ಕಾಮ್     ಜು.27: ನಿರಂತರ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಶಿವನಗರ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದೆ. ಶಾಲೆ ಹಾಗೂ ಶಿಕ್ಷಣ ಇಲಾಖೆ ಮುಂಜಾಗ್ರತವಾಗಿ ಜುಲೈ 25 ರಂದು ಶಿವನಗರದ ದುಂದು ಗೌಳಿ ಅವರ ಖಾಸಗಿ ಕಟ್ಟಡಕ್ಕೆ ಶಾಲಾ ಶೈಕ್ಷಣಿಕ ಕಾರ್ಯಗಳನ್ನು ಸ್ಥಳಾಂತರಿಸಬೇಕೆಂದು ನಿರ್ಧರಿಸಿ, ಜುಲೈ 26 ರಂದು ಶಿವನಗರ ಶಾಲಾ ಮಕ್ಕಳಿಗೆ ರಜೆ ನೀಡಲಾಗಿತ್ತು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್ ಸದಲಗಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಂದಿನಂತೆ […]

ಜಿಲ್ಲೆ

ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಧಾರವಾಡ ಪ್ರಜಾಕಿರಣ.ಕಾಮ್ : ಜುಲೈ 27 ರಂದು ಗುರುವಾದ ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಧಾರವಾಡ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆಯ ಹಿನ್ನೆಲೆಯಲ್ಲಿ ದಿ 27 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ರಜೆ ಘೋಷಿಸಿದ್ದಾರೆ. Share on: WhatsApp