ಜಿಲ್ಲೆ

ವಿನಯ ಕುಲಕರ್ಣಿಯನ್ನು ‌ಜಿಲ್ಲೆಯಿಂದ‌ ಹೊರಗಿಟ್ಟಿದ್ದು ಜೋಶಿಯಲ್ಲ, ಸುಪ್ರೀಂಕೋರ್ಟ್

*ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೆಗೆ ಮಾಜಿ ಮೇಯರ್ ಈರೇಶ ಅಂಚಟಗೇರಿ ತಿರುಗೇಟು*

*ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಿರುದ್ಧ ಇಲ್ಲಸಲ್ಲದ ಆರೋಪ*

*ವಿನಯ ಕುಲಕರ್ಣಿ ‌ಜಿಲ್ಲೆಯಿಂದ‌ ಹೊರಗಿಟ್ಟಿದ್ದು ಸುಪ್ರೀಂಕೋರ್ಟ್*

*ಪ್ರಹ್ಲಾದ ಜೋಶಿ ಲಿಂಗಾಯತ ವಿರೋಧಿಯಲ್ಲ*

ಧಾರವಾಡ ಪ್ರಜಾಕಿರಣ.ಕಾಮ್ :
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರಿಗೆ ಧಾರವಾಡ ಜಿಲ್ಲೆಯ ಲಿಂಗಾಯತ ಸಮಾಜದ ಮುಖಂಡರು, ಮಾಜಿ ಮೇಯರ್ ಈರೇಶ ಅಂಚಟಗೇರಿ ಹಲವಾರು ಪ್ರಶ್ನೆಗಳನ್ನ ಕೇಳಿದ್ದಾರೆ.

ಇತ್ತೀಚಿಗೆ ಶಾಸಕರು ಸುದ್ದಿ ಮಾಧ್ಯಮವೊಂದರಲ್ಲಿ ಪಾಲಿಕೆ ಸದಸ್ಯರು ಕೇಂದ್ರ ಸಚಿವರ ಹಿಂದೆ ಇದ್ದಾರೆ ಎನ್ನುವ ಆರೋಪ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿರುವ ಈರೇಶ ಅಂಚಟಗೇರಿ
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ, ಧಾರವಾಡ 71 ನೇ ವಿಧಾನಸಭಾ ಕ್ಷೇತ್ರದ ಶಾಸಕರು, ತಮ್ಮ ನ್ಯಾಯಾಂಗ ಹೋರಾಟದಲ್ಲಿ ವಿಫಲರಾಗಿದ್ದು , ಕೇವಲ ಹತಾಶೆ ಭಾವನೆಯಿಂದ ಆರೋಪಿಸಿದ್ದಾರೆ.
ವಿನಯ ಕುಲಕರ್ಣಿ ಈಗಾಗಲೇ ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯನ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದಾರೆ.
ಸದ್ಯ ಅವರು ಜಾಮೀನಿನ ಮೇಲೆ ಹೊರಗಡೆಯಿದ್ದು, ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಅವರ ಪ್ರವೇಶವನ್ನು ಸ್ವತಃ ಸುರ್ಪಿಂಕೋರ್ಟ್ ನಿಷೇಧ ಹೇರಿದೆ. ಧಾರವಾಡ ಜಿಲ್ಲೆಯ ಪ್ರವೇಶ ಮಾಡಲು ಸಾಧ್ಯವಾಗದ ಕಾರಣ ದ್ವೇಷದ ಭಾವನೆ ಬೆಳೆಸಿಕೊಂಡು ವೈಯಕ್ತಿಕ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಯವರ ಕುರಿತು ಅತ್ಯಂತ ಕೆಳ ಮಟ್ಟದ ಮತ್ತು ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನು ಸಾರ್ವಜನಿಕ ಸಭೆಗಳಲ್ಲಿ ಮತ್ತು ಮಾಧ್ಯಮಗಳ ಮುಖಾಂತರ ಮಾಡುತ್ತಿರುವದು ಆಕ್ಷೇಪಾರ್ಹವಾಗಿದೆ ಎಂದು ಗುಡುಗಿದ್ದಾರೆ.
ಪಂಚಮಸಾಲಿ ಲಿಂಗಾಯತ ಸಮಾಜದ ಯುವನಾಯಕನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಭಾಗಿಯಾದಂತ ಗಂಭೀರವಾದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದ ಮಾತ್ರಕ್ಕೆ ಇಡೀ ಲಿಂಗಾಯತ ಸಮಾಜ ಅವರನ್ನು ಒಪ್ಪಿಕೊಳ್ಳುತ್ತದೆ ಎಂದು ಭಾವಿಸುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ‌.

ಇದಲ್ಲದೆ, ಲಿಂಗಾಯತ ಸಮಾಜದ ಮತದಾರ ಪ್ರಭುಗಳು ಅಷ್ಟೇನೂ ದಡ್ಡರಲ್ಲ ಎಂಬುದು ನೆನಪಿರಲಿ ಎಂದು ಹೇಳಿದ್ದಾರೆ‌.
ವಿನಾಕಾರಣ ಜೋಶಿಯವರನ್ನು ಲಿಂಗಾಯತರ ವಿರೋಧಿ ಎನ್ನುವಂತೆ ಹೇಳಿಕೆಗಳನ್ನು ಕೊಡುತ್ತಾ ಜಾತಿಯಾಧಾರಿತ ರಾಜಕಾರಣವನ್ನು ಪುರಸ್ಕರಿಸುತ್ತಿದ್ದಾರೆ .

ಮಾಜಿ ಸಚಿವ ವಿನಯ ಕುಲಕರ್ಣಿ ಷರತ್ತು ಬದ್ಧ ಜಾಮೀನಿಗೆ ಒಪ್ಪಿದ ನಂತರವೇ ಒಂಬತ್ತು ತಿಂಗಳ ನಂತರ ಬೆಳಗಾವಿ ಹಿಂಡಲಗಾ ಜೈಲಿನಿಂದ ಹೊರಗಡೆ ಬಂದಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆಯೇ ಎಂದು ನೆನಪಿಸಿದ್ದಾರೆ.

ಇಷ್ಟೆಲ್ಲಾ ಆದರೂ, ಇಂದಿಗೂ ಅವರ ನಡೆ ನುಡಿ‌ ನೋಡಿದರೆ ಅವರು ಇನ್ನು ಗೂಂಡಾ ಪ್ರವೃತ್ತಿಯಿಂದ ಹೊರಬಂದಂತೆ ಕಾಣುತ್ತಿಲ್ಲ ಎಂದು ಛೇಡಿಸಿದ್ದಾರೆ.

ಇದೇ ವೇಳೆ
ಯೋಗೀಶಗೌಡ ಗೌಡರ ಸಾವಿನ‌ ಮನೆಯಲ್ಲಿ ರಾಜಕೀಯ ಮಾಡಿದ್ದು ಇದೇ ಲಿಂಗಾಯತ ನಾಯಕನೆಂದು ಬಿಂಬಿಸಿಕೊಳ್ಳುವವರು ಅಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.

ಯೋಗೀಶಗೌಡ ಗೌಡರ ಪತ್ನಿಯನ್ನು ಕಾಂಗ್ರೆಸ್ ಗೆ ಸೆಳೆದಿದ್ದು, ಅದೇ ಲಿಂಗಾಯತ ಸಮಾಜದ ನಾಯಕರೆಂಬುದು ಜಿಲ್ಲೆಯ ಜನತೆ ಇನ್ನು ಮರೆತಿಲ್ಲ ಎಂದು ಕುಟುಕಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ಪ್ರಬುದ್ದರಿದ್ದಾರೆ. ಗೂಂಡಾಮುಕ್ತ ಧಾರವಾಡ ಜಿಲ್ಲೆಗಾಗಿ ಮತ್ತೊಮ್ಮೆ
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಗೆಲುವು ಸಾಧಿಸುವುದು ಅನಿವಾರ್ಯ ಹಾಗೂ ಅಗತ್ಯ ಎಂಬುದನ್ನು ಮರೆಯದಿರಿ ಮರೆತು ನಿರಾಶರಾಗದಿರಿ ಎಂದು ವಿರೇಶ ಅಂಚಟಗೇರಿ ಮನವಿ ಮಾಡಿದ್ದಾರೆ.

ಈ ಹಿಂದೆ ಮಂತ್ರಿ ಹುದ್ದೆಯಲ್ಲಿ ನಡೆಸಿಕೊಂಡು ಬಂದ ದುರಾಡಳಿತ ಮತ್ತು ಭ್ರಷ್ಟಾಚಾರ ಜನತೆಯ ಮನಸಿನಲ್ಲಿ ಈಗಲೂ ಇದ್ದು, ಈ ರೀತಿಯ
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಯವರ ಮೇಲೆ ಮಾಡುವ ಯಾವುದೇ ಆರೋಪಗಳಿಗೆ ಸೂಕ್ತ ಉತ್ತರವನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ನಿಶ್ಚಿತವಾಗಿಯೂ ನೀಡುತ್ತಾರೆ ಎಂದು ಅಂಚಟಗೇರಿ ವಿಶ್ವಾಸ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *