ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಗೋಲ್ಡ್ ಮ್ಯಾನ್ ಸಚ್ ಟ್ರೇಡಿಂಗ್ ಅಕೌಂಟ್ನಲ್ಲಿ ಹೂಡಿಕೆ ಮಾಡಿದರೆ ಮನೆಯಲ್ಲಿಯೇ ಕುಳಿತು ಹಣ ಗಳಿಸಬಹುದು ಎಂದು ನಂಬಿಸಿ ನಗರದ ಮಹಿಳೆಗೆ ೭,೦೮ ಲಕ್ಷ ರೂಪಾಯಿ ವಂಚಿಸಲಾಗಿದೆ.
ನಗರದ ನವ್ಯಶ್ರೀ ಎಂಬ ಮಹಿಳೆಗೆ ವಂಚಿಸಲಾಗಿದೆ. ವಾಟ್ಸಪ್ ಮೂಲಕ ಪರಿಚಯವಾದ ಅಪರಿಚಿತರು ವಾಟ್ಸಪ್ ಗ್ರೂಪ್ ಗೆ ಸೇರಿಸಿ ಗೋಲ್ಡ್ ಮ್ಯಾನ್ ಸಚ್ ಟ್ರೇಡಿಂಗ್ ಅಕೌಂಟ್ನಲ್ಲಿ ಹಣ ಹೂಡಿಕೆ ಮಾಡುವಂತೆ ನಂಬಿಸಿದ್ದಾರೆ.
ಇದನ್ನು ನಂಬಿದ ಮಹಿಳೆಗೆ ಮೊದಲು ಒಂದಿಷ್ಟು ಲಾಭ ನೀಡಿ ನಂತರ ಮಹಿಳೆಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ೭,೦೮ ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.