ರಾಜ್ಯ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಸರ್ಜಾ ಕುಸಿತ : ಒಬ್ಬ ಕಾರ್ಮಿಕನಿಗೆ ಗಂಭೀರ ಗಾಯ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಸರ್ಜಾ ಕುಸಿತ : ಒಬ್ಬ ಕಾರ್ಮಿಕನಿಗೆ ಗಂಭೀರ ಗಾಯ *ಕಳಪೆ ಕಾಮಗಾರಿಗೆ ಸರ್ಜಾ, ಗೊಡೆ ಕಾರಣ* *ನಿರ್ಮಿತಿ ಕೇಂದ್ರದಿಂದ ಬೇಜವಾಬ್ದಾರಿ ನಿರ್ವಹಣೆ* *ಸಮಾಜ ಕಲ್ಯಾಣ ಇಲಾಖೆಯ ಜಾಣಕುರುಡು* *ಬಿಹಾರ ಮೂಲಕ ಕಾರ್ಮಿಕನ ಕಾಲು‌ ಮೊಳೆ ಮುರಿತ* ಧಾರವಾಡ ಪ್ರಜಾಕಿರಣ.ಕಾಮ್  : ಇಲ್ಲಿನ ಸಪ್ತಾಪುರದಲ್ಲಿರುವ ಗೌರಿ ಶಂಕರ್ ವಸತಿ ನಿಲಯದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹೊಸದಾಗಿ ನಿರ್ಮಿಸುತ್ತಿರುವ ನಿರ್ಮಾಣ ಹಂತದ ಕಟ್ಟಡದ ಸರ್ಜಾ ಕುಸಿದು ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡ […]

ರಾಜ್ಯ

ಧಾರವಾಡದ ಕೆಸಿಡಿಯಲ್ಲಿ ಮೂರನೇ ಬಾರಿಯು ಕೌನ್ಸಲಿಂಗ್ ಮುಂದೂಡಿಕೆ

ಧಾರವಾಡ ಪ್ರಜಾಕಿರಣ.ಕಾಮ್  : ಕರ್ನಾಟಕ ಕಾಲೇಜಿನಲ್ಲಿ ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಬಿ ಎ ಪ್ರವೇಶಾತಿ ಕೌನ್ಸಲಿಂಗ್ ವಿದ್ಯಾರ್ಥಿಗಳ ಹಿತರಕ್ಷಣಾ ಸಮಿತಿ ಪ್ರತಿಭಟನೆಗೆ ಹೆದರಿ ಸತತವಾಗಿ ಮೂರನೇ ಬಾರಿ ಏಕಾಎಕಿ ಮುಂದೂಡಲಾಯಿತು. ಧಾರವಾಡದ ವಿದ್ಯಾರ್ಥಿಗಳ ಹಿತರಕ್ಷಣಾ ಸಮಿತಿ ಸಹ ಸಂಚಾಲಕ ಸುರೇಶ ಕೋರಿ ನೇತೃತ್ವದ ಪ್ರತಿಭಟನೆಗೆ ಹೆದರಿ ಕೌನ್ಸಲಿಂಗ್ ಸ್ಥಗಿತಗೊಳಿಸಲಾಯಿತು‌ ಅಲ್ಲದೆ, ಯಾವುದೇ ರೀತಿಯ ಮುನ್ಸೂಚನೆ ನೀಡದೆ ಕೆಸಿಡಿ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಲ್ಲಿಂದ ಕಾಲು ಕಿತ್ತರು.   ಸೋಮವಾರ ಮತ್ತೆ ಕೌನ್ಸಲಿಂಗ್ ನಡೆಸಲು ಕವಿವಿ ಆಡಳಿತ ಮಂಡಳಿಯ […]

ರಾಜ್ಯ

ಧಾರವಾಡದ ಕೆಸಿಡಿಯಲ್ಲಿ ಪೋಷಕರು-ಆಡಳಿತ ಮಂಡಳಿ ನಡುವೆ ಚಕಮಕಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮಂಗಳವಾರ ನಡೆಯುತ್ತಿದ್ದ ಬಿ ಎ ಪ್ರವೇಶಾತಿ ಕೌನ್ಸಲಿಂಗ್ ವೇಳೆ ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಮಿಂಚಿನ ಪ್ರತಿಭಟನೆ ಬಳಿಕ ಹೆದರಿ ಕೌನ್ಸಲಿಂಗ್ ಸ್ಥಗಿತಗೊಳಿಸಲಾಯಿತು ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ನೇತೃತ್ವದಲ್ಲಿ ನಡೆದ ದಿಢೀರ್ ಪ್ರತಿಭಟನೆಗೆ ಹೆದರಿ ಕೌನ್ಸಲಿಂಗ್ ಸಿಬ್ಬಂದಿ ಅಲ್ಲಿಂದ ಕಾಲು ಕಿತ್ತಿದರು. ಹೆಚ್ಚುವರಿಯಾಗಿ ಶುಲ್ಕ ಪಾವತಿ ಮಾಡುವ ಪ್ರವೇಶಕ್ಕೆ ಮಾತ್ರ ಅವಕಾಶ ಎಂದಿದ್ದಕ್ಕೆ ಅಲ್ಲಿ ಕೆಲಕಾಲ ಆಕ್ರೋಶ ಭುಗಿಲೆದ್ದು, ಪರಿಸ್ಥಿತಿ ಬಿಗಾಡಯಿಸಿತು. […]

ರಾಜ್ಯ

ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟ ಸಿಎಂ

ಬೆಂಗಳೂರು ಪ್ರಜಾಕಿರಣ.ಕಾಮ್ :  ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ.‌ ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು. ಇದಕ್ಕೆ ಗರಂ ಆದ ಸಿಎಂ ಸ್ಥಳದಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಬೇಕು. ಅವರಿಗೆ ಅನಗತ್ಯ ತೊಂದರೆ ಕೊಡಬಾರದು ಎನ್ನುವ ಸೂಚನೆ ನೀಡಿದರು. Share on: WhatsApp

ರಾಜ್ಯ

ಕೆಸಿಡಿಯಲ್ಲಿ ರೋಸ್ಟರ್ ಪದ್ಧತಿ ಗಾಳಿಗೆ ತೂರಿ ಪ್ರವೇಶಾತಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕರ್ನಾಟಕ ಮಹಾವಿದ್ಯಾಲಯದಲ್ಲಿ ರೋಸ್ಟರ್ ಪದ್ಧತಿ ಗಾಳಿಗೆ ತೂರಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಮಿಂಚಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅರ್ಹತೆಯುಳ್ಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ನಿರಾಕರಿಸುತ್ತಿರುವ ಆಡಳಿತ ಮಂಡಳಿ, ಹೈದ್ರಬಾದ ಕರ್ನಾಟಕ ಮೀಸಲಾತಿಯನ್ನು ಪರಿಗಣಿಸದೆ ಇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಹೆಚ್ಚು ಬೇಡಿಕೆಯಿರುವ ವಿಷಯಗಳ ಸೀಟುಗಳನ್ನು ಶೇ. […]

ರಾಜ್ಯ

7ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ನೌಕರರ ಪ್ರತಿಭಟನೆ

*ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರ ಪ್ರತಿಭಟನೆ* ಧಾರವಾಡ ಪ್ರಜಾಕಿರಣ.ಕಾಮ್ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮೂರು ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸಬೇಕು, ಎನ್.ಪಿ.ಎಸ್. ರದ್ದು ಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸಬೇಕು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಬೇಕು ಎಂದು […]

ರಾಜ್ಯ

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಎಬಿವಿಪಿ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್  : ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ಹಾಸ್ಟೆಲ್ ಸೌಲಭ್ಯ ಒದಗಿಸಿ ಹಾಗೂ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಎಬಿವಿಪಿ ಕಾರ್ಯಕರ್ತರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜನ ಸಂಪರ್ಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಲಿಲ್ಲ ಎಂದು ಆಕ್ರೋಶಗೊಂಡು ಸರ್ಕಾರದ ವಿರುದ್ಧ ಹಾಗೂ ಸಚಿವ ಸಂತೋಷ ಲಾಡ್ ವಿರುದ್ಧ ಘೋಷಣೆ ಕೂಗುತ್ತ, […]

ರಾಜ್ಯ

ಧಾರವಾಡ ಹಾಲು ಒಕ್ಕೂಟಕ್ಕೆ ಮತ್ತೆ ಶಂಕರ ಮುಗದ ಅಧ್ಯಕ್ಷ

ಧಾರವಾಡ ಪ್ರಜಾಕಿರಣ.ಕಾಮ್ : ತೀವ್ರ ಕುತೂಹಲ ಮೂಡಿಸಿದ ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಂಕರ ಮುಗದ ಮತ್ತೆ ಜಯಭೇರಿ ಬಾರಿಸಿದ್ದಾರೆ. ಅದರಂತೆ ಧಾರವಾಡ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಸ್ಥಾನಕ್ಕೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಹುಳಗೋಳ ಗ್ರಾಮದ ಸುರೇಶಚಂದ್ರ ಕೃಷ್ಣ ಹೆಗೆಡೆ ಆಯ್ಕೆಯಾದರು. ಹದಿನಾಲ್ಕು ಮತಗಳಲ್ಲಿ ಎಂಟು ಮತ ಶಂಕರ ಮುಗದ ಅವರಿಗೆ ಆರು ಮತಗಳು ಶಿವಲೀಲಾ ಕುಲಕರ್ಣಿ ಅವರಿಗೆ ಬಂದವು. ಈ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಗೆದ್ದಾಗಿದೆ. […]

ರಾಜ್ಯ

ಬಿಬಿಎಂಪಿ ಕಂದಾಯ ಅಧಿಕಾರಿ ಬಳಿ 12 ಲಕ್ಷ ಕ್ಯಾಸಿನೋ ನಾಣ್ಯ ಪತ್ತೆ

*ಬಸವರಾಜ ಮಗಿಗೆ ಸೇರಿದ ಬೆಂಗಳೂರು, ಕಲಬುರಗಿ ಮನೆ, ಜಮೀನು ಸೇರಿ 9 ಕಡೆ ಮೇಲೆ ಲೋಕಾಯುಕ್ತ ದಾಳಿ* ಕಲಬುರಗಿ/ಬೆಂಗಳೂರು ಪ್ರಜಾಕಿರಣ.ಕಾಮ್ : ರಾಜ್ಯದ ಹಲವಡೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ತಾಕಿಸಿ, ಅವರಿಗೆ ಸೇರಿದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಗಿಗೆ ಸೇರಿದ ಒಂಬತ್ತು ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ ಹಾಗೂ ದಾಖಲೆ, […]

ರಾಜ್ಯ

ಧಾರವಾಡದ ಎರಡು ಪಿಜಿ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ

ಧಾರವಾಡ ಪ್ರಜಾಕಿರಣ.ಕಾಮ್ : ಬೆಳಗಾವಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಧಾರವಾಡದ ಸಪ್ತಾಪುರದಲ್ಲಿ ಎರಡು ಪಿಜಿಗಳನ್ನ ನಡೆಸುತ್ತಿರುವುದನ್ನ ಪತ್ತೆ ಹಚ್ಚಿರುವ ಲೋಕಾಯುಕ್ತ ಪೊಲೀಸರು, ಇದೀಗ ದಾಳಿ ಮಾಡಿ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಧಾರವಾಡದ ಕೆಸಿಡಿ ರಸ್ತೆಯ ಸಪ್ತಾಪುರ ಹಾಗೂ ರಾಧಾಕೃಷ್ಣ ನಗರದಲ್ಲಿರುವ ಪಿಜಿ ಮೇಲೆ ಈ ದಾಳಿ ನಡೆಸಲಾಗಿದೆ‌. ಸುಕ್ಷೇಮ ಹೆಸರಿನಲ್ಲಿರುವ ಪಿಜಿಗಳು, ಎರಡೂ ಪಿಜಿ ಹಾಗೂ ಒಂದು ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಅಳ್ನಾವರ ರಸ್ತೆಯ ವರವ ನಾಗಲಾವಿ ಬಳಿ […]