prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ತೀರ್ಪು ಕಾಯ್ದರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಗುರುವಾರ ಹೈಕೋರ್ಟ್ ನ್ಯಾರ್ಯಮೂರ್ತಿ ಕೆ. ನಟರಾಜನ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪರ ವಕೀಲ ಶಶಿಕಿರಣ ಶೆಟ್ಟಿ ಅವರು ವಾದ ಮಂಡಿಸಿ ಜಾಮೀನು ನೀಡುವಂತೆ […]

ರಾಜ್ಯ

ಮಹಾರಾಷ್ಟ್ರಕ್ಕೆ ಜಿಂದಾಲ್ ಆಕ್ಸಿಜನ್ ಪೂರೈಕೆ….!

 ಎಂ.ಬಿ.ಪಾಟೀಲ್ ಅಸಮಾಧಾನ ವಿಜಯಪುರ Prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗಿದೆ. ಜನ ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜಿಂದಾಲ್ ಸಂಸ್ಥೆ ಉತ್ಪಾದಿಸುವ ಅರ್ಧ ಆಕ್ಸಿಜನ್ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ರಾಜ್ಯದಲ್ಲೇ ಕೊರತೆ ಇದ್ದಾಗ ಬೆರೆಯವರಿಗೆ ಕಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಕೂಡಲೇ ಈ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಡಾ.ಎಂ.ಬಿ. ಪಾಟೀಲ ಹೇಳಿದರು‌ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯಕ್ಕೆ ಆಕ್ಸಿಜನ್ […]

ರಾಜ್ಯ

ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿ‌ಮುಂಗಟ್ಟು ಬಂದ್…..!

ಬೆಂಗಳೂರು prajakiran.com : ರಾಜ್ಯ ವಿಪತ್ತು ಪ್ರಾಧಿಕಾರದ ಅಧ್ಯಕ್ಷರು ಆಗಿರುವ ರಾಜ್ಯ ಮುಖ್ಯ ಕಾರ್ಯದರ್ಶಿಗಳು ದಿನಾಂಕ: 21-4-2021 ರ ರಾತ್ರಿ 9 ಗಂಟೆಯಿಂದ ದಿನಾಂಕ: 4-5-2021ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ನಿಯಮ, ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಏಪ್ರಿಲ್ 20 ರ ರಾತ್ರಿ ಆದೇಶ ಹೊರಡಿಸಿದ್ದಾರೆ. 1 ರಿಂದ 5 ರವರೆಗಿನ ಪುಟಗಳಲ್ಲಿ ಏಪ್ರಿಲ್ 21 ರಿಂದ ಮೇ 4 ರ ವರೆಗೆ ಎಲ್ಲ ಜಿಲ್ಲೆಗಳಲ್ಲಿ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಿದೆ ಮತ್ತು ಯಾವ ಚಟುವಟಿಕೆಗಳನ್ನು […]

ರಾಜ್ಯ

ಆ್ಯಂಬುಲೆನ್ಸ್ ಗಳಿಗೆ ಸರ್ಕಾರದಿಂದಲೇ ದರ ನಿಗದಿ

ಬೆಂಗಳೂರು prajakiran.com : ಈ ಅಸಹಾಯಕ ಪರಿಸ್ಥಿತಿಯನ್ನು ಬಳಸಿಕೊಂಡು ಜನರನ್ನು ವಾಸೂಲಿ ಮಾಡುತ್ತಿದ್ದ ಸೋಂಕಿತರು ಮತ್ತು ಶವ ಸಾಗಾಟ ಮಾಡುವ ಆ್ಯಂಬುಲೆನ್ಸ್ ಗಳಿಗೆ ಕಡಿವಾಣ ಹಾಕಲು ಶೀಘ್ರದಲ್ಲೇ ಸರ್ಕಾರದಿಂದ ದರ ನಿಗದಿಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು. ಆ್ಯಂಬುಲೆನ್ಸ್ ಶುಲ್ಕ ಸುಲಿಗೆಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 108 ಆ್ಯಂಬುಲೆನ್ಸ್ ಬಳಕೆ ಆದ್ಯತೆ ನೀಡಿ. ಖಾಸಗಿ ಆ್ಯಂಬುಲೆನ್ಸ್ ಗಳಿಗೂ ನಿರ್ದಿಷ್ಟ ದರ ಶೀಘ್ರ ನಿಗದಿ ಮಾಡುವುದಾಗಿ ತಿಳಿಸಿದರು. ಜನರು ಆತ್ಮವಿಶ್ವಾಸದಿಂದ ಇರಬೇಕು […]

ಸಿನಿಮಾ

ಕೊರೋನಾ ಧೃಡಪಟ್ಟು 5 ಕಳೆದರೂ ಇದುವರೆಗೆ ವರದಿ ಸಿಕ್ಕಿಲ್ಲ…..!

ನಟಿ ಅನು ಪ್ರಭಾಕರ್ ಅಳಲು ಬೆಂಗಳೂರು prajakiran.com : ಏ.17ಎಂದು ನನಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಮೆಸೇಜ್ ಬಂದಿದೆ. ಆದರೆ ನನ್ನ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ ಎಂದು ನಟಿ ಅನುಪ್ರಭಾಕರ್ ದೂರಿದ್ದಾರೆ. ಗೌರವಾನ್ವಿತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ, ನಾನು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆ. ಪಾಸಿಟಿವ್ ಎಂಬುದಾಗಿ ಏ.17 ರಂದು ಸಂದೇಶ ಬಂದಿತ್ತು. ಆದರೆ ಇದುವರೆಗೆ ನನ್ನ ಎಸ್ ಆರ್ ಎಫ್ ಐಡಿಯ ಕೊರೋನಾ ವರದಿ […]

ರಾಜ್ಯ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ನೌಕರರ ಸಾವು : ಕೋನೆಗೂ ದಾಖಲಾಯಿತು ರೇಪ್ ಆಂಡ್ ಮರ್ಡರ್

ಧಾರವಾಡ prajakiran.com : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ನೌಕರರ ಸಾವು ಕುರಿತು ಕೊನೆಗೂ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೋಷಕರು ನೀಡಿದ ದೂರಿನ ಅನ್ವಯ ರೇಪ್ ಆಂಡ್ ಮರ್ಡರ್ ಪ್ರಕರಣ ದಾಖಲಾಗಿದೆ. ಅಲ್ಲದೆ ಸರಕಾರದ ಗಮನ ಸೆಳೆಯುವ ರೀತಿಯಲ್ಲಿ ಹೋರಾಟ ಮಾಡಿದ್ದರು. ಇಬ್ಬರನ್ನು ಕೆಲಸದ ನಿಮಿತ್ತ ಬಾಗಲಕೋಟೆ ಪ್ರವಾಸ ಎಂದು ಹೇಳಿ ಗೋವಾಗೆ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿ, ಆನಂತರ ಅಪಘಾತಪಡಿಸಿ ಕೊಲೆ ಮಾಡಲಾಗಿದೆ ಎಂದು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ […]

ಅಪರಾಧ

ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣೆ ಬಳಿ ಸರಣಿ ಅಪಘಾತ

ಧಾರವಾಡ prajakiran.com: ಬೈಕ್, ಕಾರು ಹಾಗೂ ಆಟೋ ನಡುವೆ ಡಿಕ್ಕಿ ಹೊಡೆದು ಧಾರವಾಡ ವಿದ್ಯಾಗಿರಿ ಪೋಲಿಸ್ ಠಾಣೆ ಬಳಿ ಸರಣಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಅಪಘಾತದಿಂದ ಇಬ್ಬರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳಿಯರು ಅಂಬ್ಯುಲೆನ್ಸ್ ಸಹಾಯ ಪಡೆದು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದ್ದಾರೆ. ಕೆಲಕಾಲ ಘಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಸಂಚಾರಿ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿ ಮೂರು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. Share […]

ಅಂತಾರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಇಂದಿನಿಂದ ಸಂಪೂರ್ಣ ಲಾಕ್ ಡೌನ್…..!

ಮುಂಬೈ (ಮಹಾರಾಷ್ಟ್ರ) Prajakiran.com : ಕೊರೋನಾ ಹೆಚ್ಚಳದಿಂದಾಗಿ ಈಗಾಗಲೇ ದೆಹೆಲಿ ಲಾಕ್ ಡೌನ್ ಮಾಡಿದೆ. ಇದೀಗ ಮಹಾರಾಷ್ಟ್ರದಲ್ಲಿಯೂ ಕೂಡ ಇಂದಿನಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇಂದಿನಿಂದ ಮೇ.1ರ ವರೆಗೂ ಈ ನಿಯಮ ಜಾರಿಯಲ್ಲಿರಲಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಶೇ. 15ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದ್ದು, ಮದುವೆ, ಮುಂಜಿಯಂತಹ ಕಾರ್ಯಕ್ರಮಗಳಿಗೆ 25 ಜನರು ಭಾಗಿಯಾಗಲು ಅವಕಾಶ ನೀಡಿಲಾಗಿದೆ. ಕೊರೋನಾ ನಿಯಮ ಉಲ್ಲಂಘಿಸುವವರಿಗೆ ಸರ್ಕಾರ 50 ಸಾವಿರದವರಗೂ ದಂಢ ಪವಿಧಿಸಿದೆ. ತುರ್ತು ಪರಿಸ್ಥಿತಿ ಹೊರತು ಪಡಿಸಿ […]

ಅಪರಾಧ

ಮುರಗೋಡದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು…!

ವರದಿ : ಪ್ರಶಾಂತ ಹೂಗಾರ ಯರಗಟ್ಟಿ prajakiran.com : ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವನು ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ರವಿ ಲಕ್ಷ್ಮಣ ಕಿಲಾರಿ (36) ಸಾವನ್ನಪ್ಪಿದ ದುರ್ದೈವಿ. ಈತ ಅಬ್ದುಲ್ ರೈಮಾನ ಎಂಬುವವರಿಗೆ ಸೇರಿದ ಮನೆಯ ಸೆಂಟರಿಂಗ್ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share on: WhatsApp

ಜಿಲ್ಲೆ

ಧಾರವಾಡ ತಹಸಿಲ್ದಾರ ನೈಟ್ ಕರ್ಪ್ಯೂ ರೌಂಡ್ಸ್ : ಮಾವಿನಹಣ್ಣಿನ ಅಂಗಡಿಗೆ ದಂಡ

ಧಾರವಾಡ prajakiran.com :  ಧಾರವಾಡ ತಹಸಿಲ್ದಾರ ಸಂತೋಷ ಬಿರಾದಾರ ಅವರು ರಾತ್ರಿ ಕರ್ಪ್ಯೂ ಜಾರಿ ಸಲುವಾಗಿ ಜಿಲ್ಲಾಧಿಕಾರಿ ವಿಧಿಸಿರುವ ಕಲಂ 144 ರ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿರುವದರ ಕುರಿತು ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಹಾಗೂ ಸುಪರ್ ಮಾರ್ಕೆಟ್, ಸುಭಾಸರಸ್ತೆ, ಲೈನ್ ಬಜಾರ, ಟಿಕಾರೆ ರಸ್ತೆ, ಶಿವಾಜಿ ಸರ್ಕಲ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ನಂತರ ನರೇಂದ್ರ ಕ್ರಾಸ್ ವರೆಗೆ ಸಂಚರಿಸಿ, ನರೇಂದ್ರ ಕ್ರಾಸ್ ದಲ್ಲಿ ಆದೇಶ ಉಲ್ಲಂಘಿಸಿ, 9 ಗಂಟೆ ನಂತರವು ಮಾವಿನ […]