prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಆರೋಗ್ಯ

ಮಂಡಿನೋವು, ನಡ ನೋವಿನಿಂದ ಬಳಲುವವರಿಗೆ ಇಲ್ಲಿದೆ ರಾಮಬಾಣ

ಪ್ರತಿಯೊಬ್ಬ ಮನುಷ್ಯನಿಗೆ ರೋಗ ಬರುವುದೇ ವಾತ, ಪಿತ್ತ ಮತ್ತು ಕಫ ಈ ಮೂರರಿಂದ. ಆರೋಗ್ಯವೆಂದರೆ ಈ ಮೂರು ದೋಷಗಳು ನಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳುವುದು ಎನ್ನುತ್ತಾರೆ ನಮ್ಮ ನಾಟಿ ವೈದ್ಯ ಶಶಿಕಾಂತ ದೇವಾಡಿಗರು. ಪ್ರಮುಖವಾಗಿ ಕಾಮಾಲೆ, ಹಳದಿ ಹಾಗೂ ಬಿಳಿ ಕಾಮಾಲೆ ಹಾಗೂ ಎಲ್ಲಾ ತರಹದ ಮೂಲವ್ಯಾಧಿ, ಕಾಲು ನೋವು, ಸೊಂಟನೋವು, ನಡ ನೋವು, ಮಲ ಬದ್ಧತೆ, ಎಲುಬು ಸವೆತ, ಕಾಲಿನ ಚಿಪ್ಪು ಬದಲಾವಣೆ, ನಡೆದಾಡುವಾಗ ಎಲುಬಿನ ಶಬ್ದ ಬರುವ ರೋಗಗಳಿಗೆ ಇವರು ಕೇವಲ ಒಂದು ಗಂಟೆಯಲ್ಲಿ […]

ರಾಜ್ಯ

ಧಾರವಾಡದ ಕೆಸಿಡಿಯಲ್ಲಿ ಪೋಷಕರು-ಆಡಳಿತ ಮಂಡಳಿ ನಡುವೆ ಚಕಮಕಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮಂಗಳವಾರ ನಡೆಯುತ್ತಿದ್ದ ಬಿ ಎ ಪ್ರವೇಶಾತಿ ಕೌನ್ಸಲಿಂಗ್ ವೇಳೆ ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಮಿಂಚಿನ ಪ್ರತಿಭಟನೆ ಬಳಿಕ ಹೆದರಿ ಕೌನ್ಸಲಿಂಗ್ ಸ್ಥಗಿತಗೊಳಿಸಲಾಯಿತು ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ನೇತೃತ್ವದಲ್ಲಿ ನಡೆದ ದಿಢೀರ್ ಪ್ರತಿಭಟನೆಗೆ ಹೆದರಿ ಕೌನ್ಸಲಿಂಗ್ ಸಿಬ್ಬಂದಿ ಅಲ್ಲಿಂದ ಕಾಲು ಕಿತ್ತಿದರು. ಹೆಚ್ಚುವರಿಯಾಗಿ ಶುಲ್ಕ ಪಾವತಿ ಮಾಡುವ ಪ್ರವೇಶಕ್ಕೆ ಮಾತ್ರ ಅವಕಾಶ ಎಂದಿದ್ದಕ್ಕೆ ಅಲ್ಲಿ ಕೆಲಕಾಲ ಆಕ್ರೋಶ ಭುಗಿಲೆದ್ದು, ಪರಿಸ್ಥಿತಿ ಬಿಗಾಡಯಿಸಿತು. […]

ಅಂತಾರಾಷ್ಟ್ರೀಯ

ಕವಿವಿ ವೈಬ್ ಸೈಟ್ ಹ್ಯಾಕ್ : ಕಂಗಲಾದ ಸಾವಿರಾರು ವಿದ್ಯಾರ್ಥಿಗಳು

ಕವಿವಿ ವೈಬ್ ಸೈಟ್ ಹ್ಯಾಕ್ : ಕಂಗಲಾದ ಸಾವಿರಾರು ವಿದ್ಯಾರ್ಥಿಗಳು ಧಾರವಾಡ ಪ್ರಜಾಕಿರಣ.ಕಾಮ್ : ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯ ಪೈಕಿ ಒಂದಾಗಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವೈಬ್ ಸೈಟ್ ನಿನ್ನೆ ಹಾಗೂ ಮೊನ್ನೆ ಹ್ಯಾಕ್ ಆಗಿತ್ತು. ಈ ವೈಬ್ ಸೈಟ್ ಗೆ ವಿವಿಧ ಕೆಲಸಕಾರ್ಯಗಳಿಗಾಗಿ ಭೇಟಿ ನೀಡಿದ ಸಾವಿರಾರು ವಿದ್ಯಾರ್ಥಿಗಳು ಕೆಲಕಾಲ ನೋಡಬಾರದ / ನೋಡಲಾಗದ ಕೆಲ ನೀಲಿ ಚಿತ್ರಗಳನ್ನು ವೀಡಿಯೋ ನೋಡಿ ಅರೆ ಕ್ಷಣ ದಂಗಾಗಿ ಹೋಗಿದ್ದಾರೆ. ಕೆಲವರು ಈ ವಿಷಯವನ್ನು ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ […]

ಅಪರಾಧ

ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವು

ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಭೀಕರ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ಹುಬ್ಬಳ್ಳಿ ಹೊರವಲಯದ ಪೊನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆನಂದ ನಾಯಕರ (34), ಈರಣ್ಣಾ ಬಡಿಗೇರ (36) ಎಂಬುವರೇ ಮೃತಪಟ್ಟವರು. ಮೃತಪಟ್ಟವರು ಧಾರವಾಡ ಜಿಲ್ಲೆಯ ತಾಲೂಕಿನ ಆಸ್ತಕಟ್ಟಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. Share on: […]

ರಾಜ್ಯ

ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟ ಸಿಎಂ

ಬೆಂಗಳೂರು ಪ್ರಜಾಕಿರಣ.ಕಾಮ್ :  ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ.‌ ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು. ಇದಕ್ಕೆ ಗರಂ ಆದ ಸಿಎಂ ಸ್ಥಳದಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಬೇಕು. ಅವರಿಗೆ ಅನಗತ್ಯ ತೊಂದರೆ ಕೊಡಬಾರದು ಎನ್ನುವ ಸೂಚನೆ ನೀಡಿದರು. Share on: WhatsApp

ಜಿಲ್ಲೆ

ಬಿ.ಆರ್.ಟಿ.ಎಸ್. ಅವ್ಯವಸ್ಥೆಯ ವಿರುದ್ಧ ಧ್ವನಿ

ಧಾರವಾಡ ಪ್ರಜಾಕಿರಣ.ಕಾಮ್  : ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯೆದ ಎಚ್.ಡಿ.ಬಿ.ಆರ್.ಟಿ.ಎಸ್. ಅವ್ಯವಸ್ಥೆಯ ವಿರುದ್ಧ ಧಾರವಾಡ ಧ್ವನಿವತಿಯಿಂದ ಇದೇ ದಿ.೧೫ ರಂದು ನವಲೂರು ಬ್ರಿಡ್ಜ್‌ದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜ್ಯುಬಿಲಿ ಸರ್ಕಲ್‌ದಿಂದ ನವಲೂರು ವರೆಗೆ ಹಾಗೂ ಹುಬ್ಬಳ್ಳಿಯ ಉಣಕಲ್ ಕೆರೆಯಿಂದ ರಾಣಿ ಚನ್ನಮ್ಮ ಸರ್ಕಲ್‌ವರೆಗೆ ಮಿನಿ ವಾಹನಗಳಿಗೆ (ಕಾರು, ಬೈಕ್, ಆಟೋರಿಕ್ಷಾ ಇತರೆ) ಎಚ್.ಡಿ.ಬಿ.ಆರ್.ಟಿ.ಎಸ್. ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಎನ್.ಟಿ.ಟಿ.ಎಫ್., ಟೋಲನಾಕಾ, […]

ಅಂತಾರಾಷ್ಟ್ರೀಯ

ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿ ಅಜ್ಜ-ಅಜ್ಜಿಮನೆ ಸೇರಿದ ಮೊಮ್ಮಕ್ಕಳು

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸತತ ಪ್ರಯತ್ನ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿ ಅಜ್ಜ-ಅಜ್ಜಿಮನೆ ಸೇರಿದ ಮೊಮ್ಮಕ್ಕಳು- ದೇಸಾಯಿ ಕುಟುಂಬದಲ್ಲಿ ಸಂತಸ ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಕಳೆದ ವರ್ಷ ಇಹಲೋಕ ತ್ಯಜಿಸಿದ್ದ ಪ್ರಿಯದರ್ಶಿನಿ ದೇಸಾಯಿಯವರ ಮಕ್ಕಳನ್ನ ಆಸ್ಟ್ರೇಲಿಯಾದ ಸರಕಾರದ ಜತೆ ಈ ಹಿಂದೆ ವಿದೇಶಾಂಗ ಸಚಿವರಾಗಿದ್ದ, ಎಸ ಜೈಶಂಕರ ಮೂಲಕ ಸತತ ಸಂಪರ್ಕ ಸಾಧಿಸಿ ಅವರ ಮೊಮ್ಮಕ್ಕಳನ್ನ ಭಾರತಕ್ಕೆ ಕರೆಸಿಕೊಂಡು ಅಜ್ಜ ಅಜ್ಜಿಯ ಮಡಿಲು ಸೇರಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಶಸ್ವಿಯಾಗಿದ್ದಾರೆ. ದೇಸಾಯಿಯವರ ಕುಟುಂಬ ಹಾಗೂ […]

ರಾಜ್ಯ

ಕೆಸಿಡಿಯಲ್ಲಿ ರೋಸ್ಟರ್ ಪದ್ಧತಿ ಗಾಳಿಗೆ ತೂರಿ ಪ್ರವೇಶಾತಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕರ್ನಾಟಕ ಮಹಾವಿದ್ಯಾಲಯದಲ್ಲಿ ರೋಸ್ಟರ್ ಪದ್ಧತಿ ಗಾಳಿಗೆ ತೂರಿ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸುರೇಶ ಕೋರಿ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಮಿಂಚಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅರ್ಹತೆಯುಳ್ಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ನಿರಾಕರಿಸುತ್ತಿರುವ ಆಡಳಿತ ಮಂಡಳಿ, ಹೈದ್ರಬಾದ ಕರ್ನಾಟಕ ಮೀಸಲಾತಿಯನ್ನು ಪರಿಗಣಿಸದೆ ಇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಹೆಚ್ಚು ಬೇಡಿಕೆಯಿರುವ ವಿಷಯಗಳ ಸೀಟುಗಳನ್ನು ಶೇ. […]

ರಾಜ್ಯ

7ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ನೌಕರರ ಪ್ರತಿಭಟನೆ

*ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರ ಪ್ರತಿಭಟನೆ* ಧಾರವಾಡ ಪ್ರಜಾಕಿರಣ.ಕಾಮ್ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮೂರು ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸಬೇಕು, ಎನ್.ಪಿ.ಎಸ್. ರದ್ದು ಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸಬೇಕು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಬೇಕು ಎಂದು […]

ರಾಜ್ಯ

ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಎಬಿವಿಪಿ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್  : ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ಹಾಸ್ಟೆಲ್ ಸೌಲಭ್ಯ ಒದಗಿಸಿ ಹಾಗೂ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಎಬಿವಿಪಿ ಕಾರ್ಯಕರ್ತರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜನ ಸಂಪರ್ಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಲಿಲ್ಲ ಎಂದು ಆಕ್ರೋಶಗೊಂಡು ಸರ್ಕಾರದ ವಿರುದ್ಧ ಹಾಗೂ ಸಚಿವ ಸಂತೋಷ ಲಾಡ್ ವಿರುದ್ಧ ಘೋಷಣೆ ಕೂಗುತ್ತ, […]