ಜಿಲ್ಲೆ

ನಗರ ಸ್ವಚ್ಛತೆ ಜನ ಜಾಗೃತಿಗಾಗಿ ಡ್ಯಾನ್ಸ್ ಗೂ ಸೈ ಎಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ

 ಟಗರು ಬಂತು ಟಗರು ಗೆ ಭರ್ಜರಿ ಸ್ಟೆಪ್ಸ್ 

ಧಾರವಾಡ prajakiran. com : ಕೆ.ಎ.ಎಸ್ ಹಾಗೂ ಐ.ಎ.ಎಸ್ ಅಧಿಕಾರಿಗಳೆಂದರೆ ಮುಖದ ಹಾವ-ಭಾವದಲ್ಲಿ ನಗು ಕಡಿಮೆ ಗಂಭೀರ ಸ್ವಭಾವದವರಂತೆ ಕಾಣುತ್ತಾರೆ.

ಅಷ್ಟೇ ಅಲ್ಲದೆ, ನೇರ ನಿಷ್ಠುರವಾಗಿ,  ಅಧಿಕಾರದ ಮದದಿಂದ ಮರೆಯುತ್ತಾರೆ. ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲ ಕೃಷ್ಣ ನಗರದ ಸ್ವಚ್ಛತೆಗಾಗಿ ಜನರಿಗೆ ಮನರಂಜನೆ ನೀಡಿ, ಅರಿವು ಮೂಡಿಸುತ್ತಾರೆ.

 ಟಾಪರ್ ಐಎಎಸ್ ಅಧಿಕಾರಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದು ಸಾರ್ವಜನಿಕರಲ್ಲಿ ಅತೀವ ಸಂತಸ ಮೂಡಿಸಿದೆ.

ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದ ಅಂಗವಾಗಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಿನ್ನೆ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಐಎಎಸ್ ಟಾಪರ್ ಗೋಪಾಲಕೃಷ್ಣ ಅವರು ಟಗರು ಹಾಡಿಗೆ ಸಖತ್ ಸ್ಟೆಪ್ ಹಾಕಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಐಎಎಸ್ ಅಧಿಕಾರಿಯಾಗಿರುವ ಗೋಪಾಲಕೃಷ್ಣ ಅವರು, ಯಾವ ನಟರಿಗಿಂತಲೂ ಕಡಿಮೆ ಇಲ್ಲ ಎನ್ನುವ ಹಾಗೆ ಸ್ಟೆಪ್ ಹಾಕಿದ್ದಾರೆ.

ಆಯುಕ್ತರು ಈ ರೀತಿ ಸಖತ್ ಸ್ಟೆಪ್ ಹಾಕಿದ್ದನ್ನು ಕಂಡು ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಈ ಟಗರು ಹಾಡಿಗೆ ಆಯುಕ್ತರು ಮಾಡಿರುವ ಡ್ಯಾನ್ಸ್ ಸಖತ್ ವೈರಲ್ ಆಗಿದೆ.

ಓರ್ವ ಅಧಿಕಾರಿ ತಾನು ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದಕೊಂಡು ಹೋಗುವುದರ ಜೊತೆಗೆ ನಾನೂ ನಿಮ್ಮೊಳಗೊಬ್ಬ ಎಂಬುದನ್ನ ಬಿಂಬಿಸುತ್ತ ಹೋದರೇ, ಅದು ಸರಕಾರಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯ ಎಂದು ಹೇಳಲಾಗತ್ತೆ. ಅದಕ್ಕೊಂದು ತಾಜಾ ಉದಾಹರಣೆ ಗೋಪಾಲಕೃಷ್ಣ ಅವರು ಎಂದರೆ ಎರಡುಮಾತಿಲ್ಲ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *