ಅಂತಾರಾಷ್ಟ್ರೀಯ

ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಜೂ. 29ರಂದು ತಾಯಿಂದಿರ ಹಾಲಿನ ಬ್ಯಾಂಕ್ ಆರಂಭ

ಧಾರವಾಡ prajakiran.com : ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಜೂ. 29ರಂದು ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿ-ಧಾರವಾಡದ ಮೊಟ್ಟಮೊದಲ ತಾಯಿಂದಿರ ಹಾಲಿನ ಬ್ಯಾಂಕ್ ಆರಂಭಗೊಳ್ಳಲಿದೆ ಎಂದು ಎಸ್ ಡಿ ಎಂ ವಿಶ್ವವಿದ್ಯಾಲಯ ಉಪಕುಲಪತಿ ಡಾ. ನಿರಂಜನ್ ಕುಮಾರ್ ತಿಳಿಸಿದರು.

ಅವರು ಶನಿವಾರ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಕುರಿತು ವಿವರಿಸಿದರು.

ಇದು ಈ ಭಾಗದ ನವಜಾತ ಶಿಶುಗಳಿಗೆ ವರದಾನವಾಗಿದ್ದು, ಇದರಿಂದಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು,ಅವಧಿ ಪೂರ್ವ ಮಕ್ಕಳ ಜನನ ಮಕ್ಕಳಿಗೆ ಹಾಲಿನ ಅಭಾವ ಬಹಳವಿದೆ. ಮಕ್ಕಳ ಆರೋಗ್ಯ ಸುಧಾರಣೆಗೆ ಸಹಕಾರಿ ಯಾಗಲಿದೆ ಎಂದು ವಿವರಿಸಿದರು.

ಹೆಚ್ಚುವರಿಯಾಗಿ ಹೊಂದಿರುವ ಹಾಲನ್ನು ತಾಯಂದಿರು ದಾನ ಮಾಡಬಹುದಾಗಿದೆ. ಅದನ್ನು ಸಂಸ್ಕರಿಸಿ, ಎಲ್ಲಾ ರೀತಿಯ ಪರಿಶೀಲನೆ ಮಾಡಿ ಸಂಗ್ರಹಿಸಿ ಅಗತ್ಯವಾದ ಮಕ್ಕಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಡಿ ಎಂ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರತ್ನಮಾಲಾ ದೇಸಾಯಿ ತಿಳಿಸಿದರು.

ಇದಕ್ಕಾಗಿ ಬರುವ ದಿನಗಳಲ್ಲಿ ಆಶಾಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಅರಿವು ಮೂಡಿಸಿ ತಾಯಂದಿರ ಹಾಲು ಸಂಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಎಸ್ ಡಿ ಎಂ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ಕುಲಕರ್ಣಿ ಮಾತನಾಡಿ,.
ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಈಗಾಗಲೇ ಇಂತಹ ಕೇಂದ್ರ ವಿದೆ. ಧಾರವಾಡ ಜಿಲ್ಲೆಯ ಮೊಟ್ಟಮೊದಲ ಕೇಂದ್ರ ಇದಾಗಿದೆ‌.

ಇದನ್ನು ಜೂ. 29 ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಇದರ ದಿವ್ಯ ಸಾನಿಧ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ ಎಂದು ಹೇಳಿದರು.

ರೋಟರಿ ಇಂಟರ್ ನ್ಯಾಶನಲ್ ಗ್ಲೋಬಲ್ ಗ್ರಾಂಟ್ ಮೂಲಕ ಸ್ಥಾಪಿಸಲಾಗುತ್ತಿದೆ. ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸ್ , ಕೆವಿಜಿ ಬ್ಯಾಂಕ್ ಧಾರವಾಡದಿಂದ ಸುಮಾರು 60 ಲಕ್ಷಣ ಮೌಲ್ಯದ ಆಧುನಿಕ ಯಂತ್ರೋಪಕರಣಗಳು ಹಾಗೂ ತರಬೇತಿ ಯೊಂದಿಗೆ ಈ ಹಾಲಿನ ಬ್ಯಾಂಕ್ ಕಾರ್ಯ ರೂಪಕ್ಕೆ ಬರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಪಲ್ಲವಿ ದೇಶಪಾಂಡೆ ಹಾಗೂ ಇತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *