ನವದೆಹಲಿ Prajakiran.com : ದಕ್ಷಿಣ ಸುಡಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಭಾಗವಾಗಿ, ಭಾರತೀಯ ಸೇನಾ ತುಕಡಿಯಲ್ಲಿನ ಎಲ್ಲ 135 ಸೈನಿಕರಿಗೆ ವಿಶ್ವಸಂಸ್ಥೆಯು ವಿಶೇಷ ಸೇವಾ ಪದಕಗಳನ್ನು ನೀಡಿ ಸನ್ಮಾನಿಸಿದೆ.
ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ ಅವರು ಎಲ್ಲ ಯೋಧರಿಗೂ ಪದಕ ಪ್ರಧಾನ ಮಾಡಿದ್ದಾರೆ.
“ಭಾರತೀಯರೇ ನಿಮಗೆ ನಮನ. ನಿಮ್ಮ ಸೈನಿಕರು ದಕ್ಷಿಣ ಸುಡಾನ್ನ ಜೊಂಗ್ಲೆ ರಾಜ್ಯ ಹಾಗೂ ಗ್ರೇಟರ್ ಪೈಬರ್ ಪ್ರಾಂತ್ಯದಲ್ಲಿ ಸಮಾಜ ಸೇವೆಯಲ್ಲಿ ಗಣನೀಯ ಪಾತ್ರ ವಹಿಸಿದ ಕಾರಣಕ್ಕಾಗಿ ಅವರಿಗೆ ವಿಶ್ವಸಂಸ್ಥೆಯ ವತಿಯಿಂದ ಪದಕಗಳನ್ನು ನೀಡಿ ಸನ್ಮಾನಿಸಲಾಗಿದೆ’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯ ದಕ್ಷಿಣ ಸುಡಾನ್ ಶಾಂತಿ ಪಾಲನಾ ಮಿಷನ್ ವಿಭಾಗದ ಅಧಿಕೃತ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ.