ನವದೆಹಲಿ prajakiran.com : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದಲ್ಲಿ ಮತ್ತೆ ಗೋ ಹತ್ಯೆ ನಿಷೇಧದ ಬಗೆಗಿನ ಮಾತುಗಳು ಮುನ್ನಲೆಗೆ ಕೇಳಿ ಬರುತ್ತಿವೆ.
ಆದರೆ, 2014ರಿಂದ ಅತಿ ಹೆಚ್ಚು ಗೋಮಾಂಸ ರಫ್ತಾಗಿದ್ದು ಇದೇ ಭಾರತದಿಂದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಗೋ ಮಾಂಸ ರಫ್ತಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಹಲವು ವರದಿಗಳು ಮಾಹಿತಿಯನ್ನು ಹೊರಹಾಕಿವೆ.
2020 ನೇ ಸಾಲಿನಲ್ಲಿ ಭಾರತದಿಂದಲೇ 14 ಲಕ್ಷ ಮೆಟ್ರಿಕ್ ಟನ್ ಗೋಮಾಂಸ ವಿದೇಶಕ್ಕೆ ರಫ್ತಾಗಿದ್ದೆ ಎಂದು ಹೇಳಲಾಗುತ್ತದೆ.
ಪ್ರಪಂಚದಲ್ಲಿ ಅತಿ ಹೆಚ್ಚು ಗೋ ಮಾಂಸ ರಫ್ತು ಮಾಡುವ ಸಾಲಿನಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಆಸ್ಟ್ರೇಲಿಯಾ ಸ್ಥಾನ ಪಡೆದುಕೊಂಡಿದೆ.
ಅದೇ ರೀತಿ ಆ ಬಳಿಕ ಮೂರನೇ ಸ್ಥಾನದಲ್ಲಿ ಭಾರತ ದೇಶವಿದೆ. ಕೇಂದ್ರದ ಬಿಜೆಪಿ ಸರ್ಕಾರ 2019-20ನೇ ಸಾಲಿನಲ್ಲಿ ದನದ ಮಾಂಸ ಮಾರಾಟ ಮಾಡಿ ಸುಮಾರು 21,251 ಕೋಟಿ ರೂ. ಹಣ ಸಂಪಾದನೆ ಮಾಡಿದೆ ಎಂದು ತಿಳಿದುಬಂದಿದೆ.
ಒಂದು ಮೂಲಗಳ ಪ್ರಕಾರ ಭಾರತದಿಂದ ಗೋ ಮಾಂಸ ರಫ್ತಿನ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಈ ವರ್ಷ ದುಪ್ಪಟ್ಟಾಗಿದೆ ಎನ್ನಲಾಗುತ್ತದೆ