ನವದೆಹಲಿ prajakiran.com : ಡಾಮಿನಿಕಾ ದೇಶದಲ್ಲಿ ಅಕ್ರಮ ಗಡಿ ಪ್ರವೇಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ವಿಚಾರಣೆಯನ್ನು ನ್ಯಾಯಾಲಯ ಜೂನ್.25ಕ್ಕೆ ಮುಂದೂಡಿದೆ.
ಭಾರತದಲ್ಲಿನ ಬ್ಯಾಂಕ್ ಗಳಿಗೆ 13,500 ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಡಾಮಿನಿಕಾಗೆ ಅಕ್ರಮ ಗಡಿ ಪ್ರವೇಶ ಮಾಡಿರುವ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ನಡೆಯಬೇಕಿದ್ದ ವಿಚಾರಣೆಯನ್ನು ಡಾಮಿನಿಕಾ ನ್ಯಾಯಾಲಯ ಜೂನ್.25ಕ್ಕೆ ಮುಂದೂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಸದ್ಯ ಚೋಕ್ಸಿ ಮಾನಸಿಕ ಒತ್ತಡ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದು, ಡಾಮಿನಿಕಾ ಚೀನಾ ಫ್ರೆಂಡ್ ಶಿಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರ ಕಣ್ಗಾವಲಿನಲಿದ್ದಾರೆ.