ಮುಂಬೈ prajakiran.com : ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ ಸೋಂಕು ಜನರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆಒಡ್ಡುತ್ತಿದೆ.
ಇದಕ್ಕೆ ಸಿನಿಮಾರಂಗ ಕೂಡ ಹೊರತಾಗಿಲ್ಲ. ಈಗಾಗಲೇ ಹಲವಾರು ಸಿನಿಮಾ ನಟ,ನಟಿಯರಿಗೂ ಸೋಂಕು ತಗುಲಿದೆ.
ಇದೀಗ ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಲ್ಮಾನ್ ಹೇಳಿದ್ದಾರೆ.
‘ಅರ್ಪಿತಾಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೋನಾ ಪರೀಕ್ಷೆ ಮಾಡಿದ್ದು ವರದಿ ಪಾಸಿಟಿವ್ ಬಂದಿದೆ.
ಸದ್ಯ ಅರ್ಪಿತಾ ಆರಾಮಾಗಿ ಇದ್ದಾರೆ. ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾಳೆ.
ಇದೀಗ ಅವಳು ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.