ನವದೆಹಲಿ prajakiran.com : ಭಾರತದಲ್ಲಿನ ಕೊರೋನಾ ರೂಪಾಂತರಿ ವೈರಸ್ ಹಲವು ದೇಶಗಳಲ್ಲಿ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ ಅಕ್ಟೋಬರ್ನಲ್ಲಿ ಪತ್ತೆಯಾದ ಕೋವಿಡ್-19 ಬಿ.1.617 ರೂಪಾಂತರಿ, ವಿಶ್ವದ ಸುಮಾರು 4,500 ಜನರಲ್ಲಿ ಕಂಡು ಬಂದಿದೆ.
ಇದರ ಜೊತೆಗೆ ಇನ್ನೂ ಐದು ದೇಶಗಳಲ್ಲಿ ರೂಪಾಂತರಿ ಪತ್ತೆಯಾದ ಬಗ್ಗೆ ಡಬ್ಲ್ಯುಹೆಚ್ಒಗೆ ಮಾಹಿತಿ ಸಿಕ್ಕಿದ್ದು, ವಾರ ಕಳೆದಂತೆ ಈ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದೆ.
ಬ್ರಿಟನ್ನಲ್ಲಿ ಈ ರೂಪಾಂತರಿ ವೈರಸ್ ಹೆಚ್ಚಾಗಿ ಕಂಡು ಬಂದಿದ್ದು, ಬಿ.1.617 ರೂಪಾಂತರಿ ವೈರಸ್ ಮೂರು ವಿಭಿನ್ನ ಉಪ-ವಂಶಾವಳಿಗಳಿಂದ ಸ್ವಲ್ಪ ಭಿನ್ನವಾದ ರೂಪಾಂತರಗಳು ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಕಳೆದ ವಾರ ಡಬ್ಲ್ಯುಹೆಚ್ಒ ಹೇಳಿತ್ತು.
ಈ ರೂಪಾಂತರಿ ವೈರಸ್ ಭಾರತದ ಹೊರಗೆ ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದೆ.