ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬಡವರಲ್ಲ : ಬಸವರಾಜ ಕೊರವರ
ಸರಕಾರಿ ಶಾಲೆಗಳಲ್ಲಿ ಕಲಿಕೆ ಜೊತೆಗೆ ಮಕ್ಕಳಿಗೆ ಜೀವನ ಪಾಠ
ಧಾರವಾಡ : ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ತಾಲೂಕಿನ 17 ಸರಕಾರಿ ಶಾಲೆಯ 4 ಸಾವಿರ ಮಕ್ಕಳಿಗೆ ಸುಮಾರು 10 ಸಾವಿರ ನೋಟ್ ಬುಕ್ ವಿತರಣೆ ಮಾಡಲಾಗಿದೆ.
ಅದೇ ರೀತಿಯಾಗಿ
ಶನಿವಾರ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು.
ಬಳಿಕ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಕಳೆದ ಒಂದು ವಾರದಲ್ಲಿ
ಧಾರವಾಡದ ನರೇಂದ್ರ ಗ್ರಾಮದ 7 ಶಾಲೆಗಳು, ಕೊಟಬಾಗಿಯ ಎರಡು,
ಜಿರಗಿವಾಡ, ಕಲ್ಲೂರ, ಮಂಗಳಗಟ್ಟಿ, ಲಕಮಾಪುರ ಗ್ರಾಮದ ಹತ್ತಾರು ಶಾಲೆಯ ನಾಲ್ಕು ಸಾವಿರ ಮಕ್ಕಳಿಗೆ ಈವರೆಗೆ ನೋಟ್ ಬುಕ್ ವಿತರಿಸಲಾಗಿದೆ ಎಂದರು.
ಸರಕಾರಿ ಶಾಲೆಯ ಮಕ್ಕಳಿಗೆ ಸಕಾಲಕ್ಕೆ ಪಠ್ಯ ಪುಸ್ತಕ ದೊರೆಯಬೇಕು. ಶಾಲೆಯಲ್ಲಿ ಓದುವ ಮಕ್ಕಳು ಬಡವರಲ್ಲ. ಅವರು ಆರ್ಥಿಕವಾಗಿ ಹಿಂದುಳಿದವರಿರಬಹುದು ಆದರೆ ಮಾನಸಿಕವಾಗಿ ಸಿರಿವಂತರು ಎಂದರು.
ಇಂತಹ ಶಾಲೆಯಲ್ಲಿ ಕಲಿಕೆ ಜೊತೆಗೆ ಜೀವನ ಪಾಠ ಸಿಗುತ್ತದೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಹೋರಾಟಗಾರರು ಆಗಿರುವ ಜನ ಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳು ಸದೃಢವಾದರೆ, ಸುಂದರ ಹಾಗೂ ಸಮರ್ಥ ಭಾರತ ಕಟ್ಟಬಹುದಾಗಿದೆ. ಸಮಾಜದ ಕಟ್ಟ ಕಡೆಯ ಮಕ್ಕಳು ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರಕಾರ ಉಚಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ನೀಡುತ್ತಿದೆ.
ಅವರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಇದಾಗಿದ್ದು, ಇಂದಿನ ಮಕ್ಕಳು ಇಂದಿನ ಪ್ರಜೆಗಳು.
ಸರಕಾರಿ ಶಾಲೆ ಉಳಿಸಿ ಬೆಳಸಲು ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೊಟಬಾಗಿ ಗ್ರಾಮದ ಸಂತೋಷ ಕುರಕರೆ, ಜಿರಗಿವಾಡ ಗ್ರಾಮದ ಸಾವಮ್ಮ ಹೊಂಗಲ್, ಪ್ರಭಾಕರ ದೇಶಪಾಂಡೆ, ಯಾದವಾಡ ಗ್ರಾಮದ ಮಂಜುನಾಥ ಕೊಟಬಾಗಿ, ರುದ್ರೇಶ ಹಳ್ಳಿಗೇರಿಮಠ, ಮಹೇಶ ದಿಂಡಲಕೊಪ್ಪ, ನಿಂಗಯ್ಯ ಹಿರೇಮಠ, ನಜೀರಸಾಬ ಅನ್ಸಾರಿ, ಮಹೇಶ ಕಣಾಜನವರ,ರುದ್ರೇಸ ಬಡಿಗೇರ, ಜನಜಾಗೃತಿ ಸಂಘದ ರಾಘವೇಂದ್ರ ಶೆಟ್ಟಿ, ಆನಂದ ಪಾಟೀಲ, ಕುಮಾರ್ ಅಗಸಿಮನಿ, ಮಲ್ಲೇಶ ಅಂಬಿಗೇರ, ನವೀನ ಪ್ಯಾಟಿ ಸೇರಿದಂತೆ ಅನೇಕ ಗುರು ಹಿರಿಯರು ಉಪಸ್ಥಿತರಿದ್ದರು.