ಸಿನಿಮಾ

ಡ್ರಗ್ಸ್ ಕೇಸ ನಲ್ಲಿ ಕೊನೆಗೂ ನಟಿ ರಾಗಿಣಿ ದ್ವಿವೇದಿ ಬಂಧನ…!

ಬೆಂಗಳೂರು prajakiran.com : ಕನ್ನಡ ಸಿನಿಮಾ ಲೋಕದ ಮಾದಕ ಬೆಡಗಿ ರಾಗಿಣಿ ದ್ವಿವೇದಿಯನ್ನು ಕೊನೆಗೂ ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ರಾಗಿಣಿ ಆಪ್ತ ರವಿಶಂಕರ್ ಬಂಧಿಸಿರುವ ಸಿಸಿಬಿ ಪೊಲೀಸರುಹಲವು ಗಂಟೆಗಳ  ನಿರಂತರ ವಿಚಾರಣೆ ಬಳಿಕ  ಅರೆಸ್ಟ್ ಮಾಡಿದ್ದಾರೆ.

ಅವರ ಮೊಬೈಲ್ ನಲ್ಲಿ ಅಂತರ್ ರಾಷ್ಟ್ರೀಯ ಡ್ರಗ್ಸ್ ಪೆಡ್ಲಲ್ಸರ್ ಸಂಪರ್ಕ ವಿರುವ ಮಾಹಿತಿ ದೊರೆತಿದೆ. ಜೊತೆಗೆ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಮಾಡಿರುವ ಹಾಗೂ ಇತರರಿಗೆ ಡ್ರಗ್ಸ್ ನೀಡಿದ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜನೆ ಮಾಡುತ್ತಿದ್ದ ಆರೋಪದ ಮೇಲೆ ವಿರೇನ್ ಖನ್ನಾ ನನ್ನು ಇಬ್ಬರು ಸಿಸಿಬಿ ಪೊಲೀಸ ಇನ್ಸಪೆಕ್ಟರ್ ದೆಹಲಿಗೆ ತೆರಳಿ ಅರೆಸ್ಟ್ ಮಾಡಿದ್ದಾರೆ. ಆತನನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.

ದೆಹಲಿಯಿಂದ ಕರೆದುಕೊಂಡು ಬರಲಾಗುತ್ತಿದೆ. ಆ ಮೂಲಕ ಈವರೆಗೆ ನಟಿ ರಾಗಿಣಿ, ಆಕೆಯ ಆಪ್ತ ರವಿಶಂಕರ್, ನಟಿ ಸಂಜನಾ ರಾಖಿ ಸಹೋದರ ರಾಹುಲ್ ಹಾಗೂ ವಿರೇನ್ ಖನ್ನಾ ಬಂಧನವಾದಂತಾಗಿದೆ.

ಈ ಡ್ರಗ್ಸ್ ಜಾಲದಲ್ಲಿ ಕೆಲವು ಕನ್ನಡದ ನಟ, ನಟಿಯರು ಇದ್ದಾರೆ. ಇನ್ನೂ ಹಲವರ ವಿಚಾರಣೆ ನಡೆಸಲು ಸಿದ್ದತೆ ನಡೆಸಿರುವ ಬೆಂಗಳೂರು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ಸ್ಯಾಂಡಲ್ ವುಡ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ್ ಹಾಗೂ ಚಿತ್ರ ವಿತರಕ ಪ್ರಶಾಂತ್ ಸಂಬರಗಿ ಮಾಡಿದ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಂತಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *