ಜಿಲ್ಲೆ

ಧಾರವಾಡ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಧಾರವಾಡ prajakiran.com : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ೨೦೨೦-೨೧ ನೇ ಸಾಲಿಗಾಗಿ ಜಿಲ್ಲೆಯ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದ್ದು, ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಸ್ಥಳ ಬದಲಾವಣೆ ಸೇರಿದಂತೆ ವಿವಿಧ ಹಕ್ಕು, ಆಕ್ಷೇಪಣೆಗಳಿಗಾಗಿ ಅರ್ಹ ಮತದಾರರು ನಿಗದಿತ ಅರ್ಜಿ ನಮೂನೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾದಿಕಾರಿ ನಿತೇಶ್ ಪಾಟೀಲ ಹೇಳಿದರು.

ಅವರು ಶುಕ್ರವಾರ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ ಮಾತನಾಡಿದರು.

 ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿ ೬, ೭, ೮ ಮತ್ತು ೮(ಎ) ನಮೂನೆಗಳನ್ನು ಪರಿಶೀಲಿಸಿ, ಪೂರಕ ಮತದಾರ ಪಟ್ಟಿಯ ಕರಡು ಪ್ರತಿಯನ್ನು ನವೆಂಬರ್ ೧೬, ೨೦೨೦ ರಂದು ಪ್ರಕಟಿಸಲಾಗುತ್ತದೆ.

ಕರಡು ಮತದಾರ ಪಟ್ಟಿಯಲ್ಲಿನ ವಿಷಯಗಳಿಗೆ ತಕರಾರು ಸಲ್ಲಿಸಲು ಡಿಸೆಂಬರ್ ೧೫, ೨೦೨೦ ರ ವರೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ನವೆಂಬರ್ ೧೬ ರಿಂದ ಡಿಸೆಂಬರ್ ೧೫ ರೊಳಗಿನ ಎರಡು ಶನಿವಾರ ಮತ್ತು ಎರಡು ರವಿವಾರಗಳನ್ನು ಗುರುತಿಸಿ, ಮತದಾರ ಪಟ್ಟಿ ಪರಿಷ್ಕರಣೆ, ನೋಂದಣಿ ಅಭಿಯಾನವನ್ನು ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯಂತೆ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮತದಾರರಿಂದ ಬಂದ ಹೆಸರು ಸೇರ್ಪಡೆ, ಹೆಸರು, ವಿಳಾಸ ತಿದ್ದುಪಡಿ, ವರ್ಗಾವಣೆ, ಸೇರ್ಪಡೆಯಾದ ಹೆಸರು ರದ್ದುಗೊಳಿಸುವ ಕುರಿತು ಸ್ವೀಕರಿಸಿದ ಎಲ್ಲ ಅರ್ಜಿ ನಮೂನೆಗಳನ್ನು ಪರಿಶೀಲಿಸಿ,  ತಕರಾರು ಅವಧಿಯನ್ನು ಜನವರಿ ೫, ೨೦೨೧ ಮಂಗಳವಾರದಂದು ಮುಕ್ತಾಯಗೊಳಿಸಲಾಗುತ್ತದೆ.

ಭಾರತ ಚುನಾವಣಾ ಆಯೋಗದ ಅನುಮತಿ ಮೇರೆಗೆ ಜನೆವರಿ ೧೫,೨೦೨೧ ರ ಶುಕ್ರವಾರದಂದು ವಿಶೇಷ ಪರಿಷ್ಕರಣೆಗೆ ಒಳಪಟ್ಟ ಮತದಾರ ಯಾದಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ಪ್ರಸ್ತುತದಲ್ಲಿ ಧಾರವಾಡ ಜಿಲ್ಲೆಯಲ್ಲಿ ೭,೭೩,೦೪೧ ಜನ ಪುರುಷ, ೭,೫೯,೭೩೨ ಜನ ಮಹಿಳಾ ಹಾಗೂ ೧೦೫ ಜನ ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು ೧೫,೩೨,೮೭೮ ಜನ ಮತದಾರರಿದ್ದರೆ.

ಇದರಲ್ಲಿ ೧,೯೨೩ ಸೇವಾ ಮತದಾರರು, ೧೩,೧೦೬ ವಿಶೇಷ ಚೇತನ ಮತದಾರರು ಸೇರ್ಪಡೆಗೊಂಡಿದ್ದಾರೆ. ವಿವಿಧ ತಾಲೂಕುಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ೧,೬೩೪ ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ,  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಸಾಹುಕಾರ, ರಾಮಪ್ಪ ಬಡಿಗೇರ, ಪ್ರೇಮನಾಥ ಚಿಕ್ಕತುಂಬಳ, ದೇವರಾಜ ಕಂಬಳಿ, ಪ್ರಕಾಶ ಹಳಿಯಾಳ, ವಿನೋದ ಘೋಡಕೆ, ಜಾವಿದ್ ಬೆಳಗಾವಂಕರ, ಸಿದ್ದು ಕಲ್ಯಾಣಶೆಟ್ಟಿ, ಬಸವರಾಜ ಗರಗ, ಸಂತೋಷ ಚವ್ಹಾನ, ವಿಕಾಸ ಸೊಪ್ಪಿನ, ಸಂತೋಷ ನರಗುಂದ, ಮಹೇಶ ಬುರ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಶೀಲ್ದಾರ ಎಚ್.ಎನ್. ಬಡಿಗೇರ ಪಾಲ್ಗೊಂಡಿದ್ದರು.

ಧಾರವಾಡ ಜಿಲ್ಲೆಯ ಒಟ್ಟು ಮತದಾರರ ವಿವರ:

ನವಲಗುಂದ ವಿಧಾನಸಭಾ ಮತಕ್ಷೇತ್ರ (೬೯) ವ್ಯಾಪ್ತಿಯಲ್ಲಿ ೧೦೬೪೮೩ ಪುರುಷರು, ೧೦೩೩೫೪ ಮಹಿಳೆಯರು, ೬ ಜನ ತೃತೀಯಲಿಂಗಿ ಸೇರಿದಂತೆ ಒಟ್ಟು ೨೦೯೮೪೩ ಮತದಾರರಿದ್ದಾರೆ.

ಕುಂದಗೋಳ ಮತಕ್ಷೇತ್ರ (೭೦) ವ್ಯಾಪ್ತಿಯಲ್ಲಿ  ೯೯೪೭೨ ಪುರಷರು, ೯೪೫೭೮ ಮಹಿಳೆಯರು, ೪ ಜನ  ತೃತೀಯಲಿಂಗಿ ಸೇರಿದಂತೆ ಒಟ್ಟು ೧೯೪೦೫೪ ಮತದಾರರಿದ್ದಾರೆ.

ಧಾರವಾಡ ಮತಕ್ಷೇತ್ರ (೭೧) ವ್ಯಾಪ್ತಿಯಲ್ಲಿ ೧೦೮೫೧೪ ಪುರುಷರು, ೧೦೬೮೩೬ ಮಹಿಳೆಯರು, ೧೨ ಜನ   ತೃತೀಯಲಿಂಗಿ ಸೇರಿದಂತೆ ಒಟ್ಟು ೨೧೫೩೬೨ ಮತದಾರರಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೂರ್ವ ಮತಕ್ಷೇತ್ರದ (೭೨) ವ್ಯಾಪ್ತಿಯಲ್ಲಿ ೧೦೧೭೯೬ ಪುರುಷರು, ೧೦೧೨೯೪ ಮಹಿಳೆಯರು, ೧೪ ಜನ ತೃತೀಯಲಿಂಗಿ ಸೇರಿದಂತೆ ಒಟ್ಟು ೨೦೩೧೦೪ ಮತದಾರರಿದ್ದಾರೆ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮತಕ್ಷೇತ್ರದ (೭೩) ವ್ಯಾಪ್ತಿಯಲ್ಲಿ ೧೨೪೭೬೯ ಪುರುಷರು, ೧೨೫೬೪೪ ಮಹಿಳೆಯರು,  ೩೬ ಜನ ತೃತೀಯಲಿಂಗಿ ಸೇರಿದಂತೆ ಒಟ್ಟು ೨೫೦೪೪೯ ಮತದಾರರಿದ್ದಾರೆ

ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರದ (೭೪) ವ್ಯಾಪ್ತಿಯಲ್ಲಿ ೧೩೧೬೨೬ ಪುರುಷರು, ೧೩೩೭೩೮, ಮಹಿಳೆಯರು  ೨೭ ಜನ  ತೃತೀಯಲಿಂಗಿ ಸೇರಿದಂತೆ ಒಟ್ಟು ೨೬೫೩೯೧ ಮತದಾರರಿದ್ದಾರೆ.

ಕಲಘಟಗಿ ಮತಕ್ಷೇತ್ರದ (೭೫) ವ್ಯಾಪ್ತಿಯಲ್ಲಿ  ೧೦೦೩೮೧ ಪುರುಷರು,  ೯೪೨೮೮ ಮಹಿಳೆಯರು, ೬ ಜನ ತೃತೀಯಲಿಂಗಿ ಸೇರಿದಂತೆ ಒಟ್ಟು ೧೯೪೬೭೫ ಮತದಾರರಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ೭೭೩೦೪೧ ಪುರುಷರು, ೭೫೯೭೩೨ ಮಹಿಳೆಯರು, ೧೦೫ ತೃತೀಯಲಿಂಗಿ ಸೇರಿದಂತೆ ಒಟ್ಟು ೧೫೩೨೮೭೮ ಜನ ಮತದಾರರಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *