ಜಿಲ್ಲೆ

ಧಾರವಾಡದ ಕೆಲಗೇರಿ ಕೆರೆಯಲ್ಲಿ ಗರಿಷ್ಠಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹ : ಗಾಯತ್ರಿಪುರಂ ಬಳಿ 15 ಅಡಿ ಮಣ್ಣು ಕುಸಿತ

ಧಾರವಾಡ Prajakiran.com :
ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯಲ್ಲಿ ಗರಿಷ್ಠಮಟ್ಟಕ್ಕಿಂತ
ಹೆಚ್ಚಿನ ನೀರು ಸಂಗ್ರಹವಾಗಿದೆ.
ಇದು ಸಹಜವಾಗಿಯೇ ಪಕ್ಕದ ಗಾಯತ್ರಿಪುರಂ ನಿವಾಸಿಗಳು
ಆತಂಕದಲ್ಲಿ ದಿನ ದೂಡುವಂತೆ ಮಾಡಿದೆ.

ಇದರಿಂದಾಗಿ
ಕೆಲಗೇರಿ ಕೆರೆಯ ಕೆಳಭಾಗದಲ್ಲಿ ಇರುವ ಗಾಯತ್ರಿಪುರಂ ಗೆ ಹೊಂದಿಕೊಂಡ ರಸ್ತೆಯ ಕೆಳಗಡೆಯ ಮಣ್ಣು ತಂಪಾಗಿ ಈಗಾಗಲೇ 15 ಅಡಿಗಳಷ್ಟು ಕುಸಿದಿದೆ.

ಅಲ್ಲದೆ, 6*6 ಅಡಿಗಳಷ್ಟು ಕಂದಕ ನಿರ್ಮಾಣವಾಗಿದೆ.
ಜೊತೆಗೆ ಕೆಳಗಡೆಯ ಜಲಮಂಡಳಿಯ ಪೈಪೂ ಒಡೆದಿದೆ. ಹೀಗಾಗಿ ಕೆಲಗೇರಿ ರಸ್ತೆ ಮೇಲೆ ಭಾರೀ ವಾಹನಗಳು ಸಂಚರಿಸಿದಲ್ಲಿ ಅದರಲ್ಲೂ ನಾವು ಕಲ್ಲನ್ನಿಟ್ಟ ಭಾಗದಲ್ಲಿ ಚಲಿಸಿದರೆ ಅಪಾಯ.

 ಭೀಕರ ಅನಾಹುತ ,ಗ್ಯಾರಂಟಿ. ಊಹಿಸಲೂ ಆಗದಷ್ಟು ಜೀವಹಾನಿ ಅಗುವ ಸಾಧ್ಯತೆ ಇದೆ ಎಂದು ಕಲಾವಿದ ಮಂಜುನಾಥ ಹಿರೇಮಠ ತಮ್ಮ ಸಂಕಟವನ್ನು ಪ್ರಜಾಕಿರಣ.ಕಾಮ್ ಎದುರು ತೋಡಿಕೊಂಡಿದ್ದಾರೆ.

ಈ ಕಡೆ ಧಾರವಾಡ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನ ಹರಿಸಿ ಅಗತ್ಯ ಕ್ರ‌ಮ ಜರುಗಿಸಬೇಕಾಗಿದೆ.

ನಮ್ಮ ಕೈಲಾದ್ದನ್ನು ನಾವು ಮಾಡಿದ್ದೇವೆ ಮುಂದೆ ದೇವರೇ ಗತಿ ಎಂದು ಮಂಜುನಾಥ ಆತಂಕ ವ್ಯಕ್ತಪಡಿಸಿದರು.

ಧಾರವಾಡ ಗೋವಾ ಮಾರ್ಗದಲ್ಲಿ ಕೆಲಗೇರಿ ಗ್ರಾಮದ ಹತ್ತಿರ ಕೆರೆ ಪಕ್ಕದಲ್ಲಿರುವ ರಸ್ತೆಯ ಕೆಳಗಡೆಯ ಮಣ್ಣು ಕುಸಿದಿರುವ ಅಪಾಯದ ಮುನ್ಸೂಚನೆ ಅರಿತ ಸ್ಥಳೀಯರು ತಾವೇ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *