ಜಿಲ್ಲೆ

ಧಾರವಾಡದಲ್ಲಿ ಒಂದು ವಾರದಿಂದ ‌ಕಲುಷಿತ ನೀರು ಪೂರೈಕೆ…!

ಧಾರವಾಡ prajakiran.com : ಕಳೆದ ಒಂದು ವಾರದಿಂದ ಧಾರವಾಡದ ನಗರದ ವಿವಿಧ ಪ್ರಮುಖ ಕಡೆಗಳಲ್ಲಿ ‌ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಧಾರವಾಡದ ಸರಸ್ವತಪೂರ ಮತ್ತು ಸುತ್ತಮುತ್ತಲಿನ ನಗರದ ದೇವತಾರಾ ಅಪಾರ್ಟಮೆಂಟ್ ನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ನೀರು ವಾಸನೆ ಸಹ ಬರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪ್ರಜಾಕಿರಣ.ಕಾಮ್ ಎದುರು ದೂರಿದ್ದಾರೆ. ಈ ಕಲುಷಿತ ನೀರು ಪೂರೈಕೆಯಿಂದ ಅಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ‌ ಬೀರುತ್ತಿದೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ […]

ಜಿಲ್ಲೆ

ಧಾರವಾಡದ ಪವನ ಶಾಲೆ ಮುಖ್ಯಸ್ಥ ಶಂಕರ ಪಾಟೀಲ ಇನ್ನಿಲ್ಲ

ಧಾರವಾಡ prajakiran.com : ಧಾರವಾಡದ ಬಾರಾಕೋಟ್ರಿಯಲ್ಲಿರುವ ಪವನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಶಂಕರ ಪಾಟೀಲ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಂಗಳೂರಿನಲ್ಲಿ ವಿಧಿವಶರಾದರು. ಅವರು ಕಳೆದ ಕೆಲ ದಿನಗಳಿಂದಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ತಾಯಿನಿಧನದ  ಬೆನ್ನಲ್ಲೇ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಎರ್ ಲಿಫ್ಟ್ ಮೂಲಕ ಬೆಂಗಳೂರಿನ ಖಾಸಗಿ ಹಾಗೂ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿಯೇ ನಿಧನಹೊಂದಿದರು. ಕಳೆದ ಕೆಲವು ವರ್ಷಗಳಿಂದ ಧಾರವಾಡದಲ್ಲಿ ಪವನ […]

ಅಂತಾರಾಷ್ಟ್ರೀಯ

ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಕರೋನಾ ಪಾಸಿಟಿವ್

ಧಾರವಾಡ prajakiran.com : ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ಆದರೂ ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟಿನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ. ನಿನ್ನೆಯಷ್ಟೇ ಹುಬ್ಬಳ್ಳಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.ಹಾಗೂ ಹಲವು ಬಿಜೆಪಿ ಮುಖಂಡರು, ನೂರಾರು ಕಾರ್ಯಕರ್ತರ ಭೇಟಿ ಮಾಡಿದ್ದರು. ಸಚಿವ ಜೋಶಿಯವರಿಗೆ ಕರೋನಾ ಪಾಸಿಟಿವ್ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ರಾಜ್ಯದ ಗೃಹ ಸಚಿವ […]

ರಾಜ್ಯ

ಧಾರವಾಡ ರೈತರಿಗೆ ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆ ಸಂಕಷ್ಟ …!

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆಯು ಭಾರತ ಅಕ್ಸಾ ಇನ್ಸೂರೆನ್ಸ್ ಕಂಪನಿಗೆ ಸರ್ಕಾರ ಕೊಟ್ಟಿದೆ. ಆ ಪ್ರಕಾರ ರೈತರು ವಿಮಾ ಕಂತು ಕಟ್ಟಿದ್ದು, ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾದ ಬೆಳೆಗಳು ಯಾವ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಅನ್ನುವ ವೀಕ್ಷಣೆಗೆ ಬಂದ ಕಂಪೆನಿಯ ಏಕೈಕ ಸಿಬ್ಬಂದಿ ಜೊತೆಗೆ ಸರ್ಕಾರದ ಒಬ್ಬ ಸಿಬ್ಬಂದಿ ಇಲ್ಲ ಎಂದು ಮಾರಡಗಿ ರೈತರು ಆಗಿರುವ ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾ ಹೊರ […]

ರಾಜ್ಯ

ಧಾರವಾಡ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಧಾರವಾಡ prajakiran.com : ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದವರು ಕಳೆದ ಕೆಲ ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಧಾರವಾಡ ಡಿಎಚ್ಒ ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ […]

ಜಿಲ್ಲೆ

ಕುಂದಗೋಳದಲ್ಲಿ ಪತಿ ಸಾವಿನ ಆಘಾತ : ಪತ್ನಿಯೂ ಹೃದಯಾಘಾತದಿಂದ ಸಾವು

ಕುಂದಗೋಳ (ಧಾರವಾಡ) prajakiran.com : ಸತಿ–ಪತಿಗಳು ಒಂದಾದ ಭಕ್ತಿ ಹಿತವಾಗಿರ್ಪ್ಪುದು ಶಿವನಿಗೆ ಎಂಬುವ ಉಕ್ತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.  ಫರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಭಾನುವಾರ ಬೆಳಿಗ್ಗೆ 6-30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫರಿದ್ಧೀನ್ ಪಠಾಣ್ (70) ಪತಿಯ ಸಾವಿನ ದು:ಖ ತಾಳಲಾರದೆ  ಸಾಯಂಕಾಲ 4 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ. […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿ

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ಸಾಕಷ್ಟು ಬೆಳೆಹಾನಿಯಾಗಿದೆ. ಕಷ್ಟಪಟ್ಟು ರೈತ ಬೆಳೆದ ಬೆಳೆಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು, ಗದ್ದೆಗಳು ಕೆರೆಗಳಂತಾಗಿವೆ. ನಿರಂತರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತನಿಗೆ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ‌ ಜಿಲ್ಲೆಯ ರೈತನ ಬದುಕುಮೂರಾಬಟ್ಟೆಯಾಗಿದ್ದು, ಶೇಂಗಾ, ಹೆಸರು, ಸೋಯಾಬಿನ್ ಸೇರಿದಂತೆ […]

ಜಿಲ್ಲೆ

ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ರೈತ ಕುಟುಂಬಗಳಿಗೆ 5 ಲಕ್ಷ ಚೆಕ್ ಹಸ್ತಾಂತರ

ಧಾರವಾಡ prajakiran.com : ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಕೊಚ್ಚಿಹೋದ ಶ್ರೀಕಾಂತರಡ್ಡಿ ಇನಾಮತಿ ಹಾಗೂ ದೇವೆಂದ್ರಪ್ಪ ಯಮನಪ್ಪ ಮಾದರ  ಅವರ ಕುಟುಂಬಗಳಿಗೆ ಬುಧವಾರ ತಲಾ 5 ಲಕ್ಷ ರೂ.ಪರಿಹಾರ ನೀಡಲಾಯಿತು. ನವಲಗುಂದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರು ಮೃತರ ವಾರಸುದಾರರಾದ ಅನಸೂಯಾ ಶ್ರೀಕಾಂತರಡ್ಡಿ ಇನಾಮತಿ ಹಾಗೂ ಸಾವಕ್ಕ ಮಾದರ ಇವರಿಗೆ ತಲಾ 5 ಲಕ್ಷ ರೂ ಗಳ ಪರಿಹಾರ ಧನದ ಚೆಕ್ ನೀಡಿ, ಬೆಣ್ಣೆಹಳ್ಳ ವೀಕ್ಷಿಸಿದರು. ಕಾಂಗ್ರೆಸ್ […]

ಜಿಲ್ಲೆ

ಧಾರವಾಡದ ಹುಣಸಿಕುಮರಿ ಮೂಲ ಸೌಕರ್ಯ ವಂಚಿತ

ಕುಗ್ರಾಮದ ಕಥೆ  ಕೇಳಿ ಜನಪ್ರತಿನಿಧಿಗಳೇ….! ಮೂಲ  ಸೌಕರ್ಯ ಸಮಸ್ಯೆ ಎದುರಿಸುತ್ತಿರುವ  ಗ್ರಾಮ  ಮಂಜುನಾಥ ಕವಳಿ ಧಾರವಾಡ prajakiran.com : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ಸಹ ಸಮಾಜದ ಕಟ್ಟ ಕಡೆಯ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಮ್ಮನ್ನು ಆಳುವ ಸರಕಾರಗಳು ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗುತ್ತಲೇ ಬಂದಿವೆ. ಇದಕ್ಕೆ ಉತ್ತಮ ನಿರ್ದೇಶನವೆಂಬಂತೆ ಧಾರವಾಡದಿಂದ ಕೇವಲ 25 ಕಿ.ಮೀ ದೂರದಲ್ಲಿರೋ ಹುಣಸಿಕುಮರಿ ಎಂಬ ಗ್ರಾಮದ ಜನರ ಅಳಲನ್ನು ಯಾರೂ ಸಹ ಕೇಳದಂತಾಗಿದೆ. ಹೆಚ್ಚು ಕಡಿಮೆ 600 ಜನ […]

ರಾಜ್ಯ

ಧಾರವಾಡ ಜಿಲ್ಲೆಯ ಬೆಳೆಹಾನಿ ಪರಿಶೀಲನೆ

ಅತಿವೃಷ್ಟಿ ಹಾನಿ ಅಧ್ಯಯನ ಧಾರವಾಡ prajakiran.com : ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ  ಕೇಂದ್ರ ಅಧ್ಯಯನ ತಂಡವು ಮಂಗಳವಾರ  ಭೇಟಿ ನೀಡಿ ಪರಿಶೀಲಿಸಿತು. ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ. ಅವರನ್ನೊಳಗೊಂಡ  ಎರಡನೇ ತಂಡವನ್ನು  ಹಾರೋಬೆಳವಡಿ ಗ್ರಾಮದ ಬಳಿ ಸವದತ್ತಿ- ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ಬಳಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ […]