ರಾಜ್ಯ

ಧಾರವಾಡ ರೈತರಿಗೆ ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆ ಸಂಕಷ್ಟ …!

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆಯು ಭಾರತ ಅಕ್ಸಾ ಇನ್ಸೂರೆನ್ಸ್ ಕಂಪನಿಗೆ ಸರ್ಕಾರ ಕೊಟ್ಟಿದೆ.

ಪ್ರಕಾರ ರೈತರು ವಿಮಾ ಕಂತು ಕಟ್ಟಿದ್ದು, ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾದ ಬೆಳೆಗಳು ಯಾವ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಅನ್ನುವ ವೀಕ್ಷಣೆಗೆ ಬಂದ ಕಂಪೆನಿಯ ಏಕೈಕ ಸಿಬ್ಬಂದಿ ಜೊತೆಗೆ ಸರ್ಕಾರದ ಒಬ್ಬ ಸಿಬ್ಬಂದಿ ಇಲ್ಲ ಎಂದು ಮಾರಡಗಿ ರೈತರು ಆಗಿರುವ ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾ ಹೊರ ಹಾಕಿದ್ದಾರೆ.

ಅಲ್ಲದೆ ಬಂದ ಕಂಪನಿಯವ ಫಾರ್ಮ್ ಒಂದರಲ್ಲಿ ಸಂಪೂರ್ಣ ಬೆಳೆ ನಾಶವಾಗಿ ಜಮೀನ ರೆಂಟಿ ಹೊಡೆದಿದ್ದು ನಾಶವಾದ ಬೆಳೆ ಕೇವಲ ೧೫%ಅಂತ ರೈತನ ಸಹಿ ತೆಗೆದು ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಕೂಡಿದ ರೈತರು ಇದಕ್ಕೆ ಅಕ್ಷೆಪಣೆ ಮಾಡಿದಾಗ, ಸಿಬ್ಬಂದಿ ನಿಮಗೆ ಬರುವ ಪರಿಹಾರ ಬರುವುದಿಲ್ಲ ಎಂದು ಹೇಳಿದ್ದರಿಂದ ರೊಚ್ಚಿಗೆದ್ದ ರೈತರು ಕಂಪನಿ ಪ್ರತಿನಿಧಿಯನ್ನು ಮಾರಡಗಿ ಪಂಚಾಯಿತಿಗೆ ಕರೆದುಕೊಂಡು ಬಂದರು.

ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಕೇಳಿದರೆ, ನಮಗೆ ಯಾವ ಮಾಹಿತಿಯೂ ಇಲ್ಲ ಎಂದು ನುಣುಚಿಕೊಂಡಿದ್ದಾರೆ.

ಹಾಗಿದ್ದರೆ ನಮ್ಮ ಕೃಷಿ ಸಹಾಯಕನನ್ನು ಕಳುಹಿಸುತ್ತಿದ್ದೆವು ಅಲ್ಲದೆ ಅವನಿಗೆ ಏನು ಎಂತು ಕೇಳಿದರೆ ಸರ್ ನಮ್ಮ ಕಂಪನಿ ಏನು ಹೇಳಿದೆ ಪ್ರಕಾರ ನಾನು ಬರಿದು ರೈತರ ಸಹಿ ತೆಗೆದು ಕೊಳ್ಳುತ್ತಿರುವೆನು ಅಂತ ಹೇಳಿದ ಎಂದು ದೂರಿದ್ದಾರೆ.

ಬೆಳೆ ಕಟಾವು ಪರೀಕ್ಷೆ ಇನ್ನೂವರಿಗೆ ಮಾಡಿಲ್ಲ.ಏನೂ ನಾಟಕ. ಹೀಗಾದರೆ ರೈತರ ಗತಿ ಏನು ಈ ಸಂಬಂಧ ಇಲಾಖೆ ಅಧಿಕಾರಿಗಳು, ಕೃಷಿ ಮಂತ್ರಿಗಳೆ ಏನು ಹೇಳುತ್ತಾರೆ ಎದುರು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಪ್ರಧಾನಿಗಳೆ ನಿಮ್ಮ ಕಾರ್ಪೋರೇಟ್ ಕಂಪೆನಿಗಳ ಬಗ್ಗೆ ಏನು ಹೇಳುತ್ತಿರಿ.

ಸಂಪೂರ್ಣ ಬೆಳೆ ಹಾನಿಗೊಳಗಾದ ಬೆಳೆಗಳು” Zero

ಬರೆಯಬೇಕಾದಲ್ಲಿ ಈರೀತಿ ಕಡಿಮೆ ಬರಿಯುವ ಕಾರ್ಪೋರೇಟ್ ಇನ್ಸೂರೆನ್ಸ್ ಕಂಪನಿಗಳು ರೈತರ ಸೇವೆ ಮಾಡಲ್ಲ ಬದಲಾಗಿ ಲಾಭ ಕ್ಕಾಗಿ ಬರುತ್ತಾರೆ ಅನ್ನೋದಕ್ಕೆ ಇದು ಉದಾಹರಣೆ ಎಂದು ಗುಡುಗಿದ್ದಾರೆ.

ಧಾರವಾಡ ಜಿಲ್ಲಾಡಳಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲದಿದ್ದರೆ

ರೈತರು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ರೈತರೆ ಸಂಘಟಿತರಾಗಿ ಇಂತಹ ಕಾರ್ಪೋರೇಟ್ ಕಂಪೆನಿಗಳು ನಮ್ಮ ಮೇಲೆ ದೌರ್ಜನ್ಯ ಮಾಡುತ್ತವೆ. ರೈತ ಕುಲ ಉಳಿಸಲು ರೈತ ಸಂಘಟನೆಗಳು ಒಂದಾಗಿ, ಪ್ರತಿ ಧ್ವನಿ ಆಗಲೇ ಬೇಕು. ಪಕ್ಷ ಮೊದಲೋ ರೈತ ಮೊದಲೊ ಹೇಳಿ ಎಂದು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *