ಸಿನಿಮಾ

ಜಾರಿ ನಿರ್ದೇಶನಾಲಯ ವಿಚಾರಣೆ ವೇಳೆ ನಟಿ ರಾಗಿಣಿ ಕಣ್ಣೀರು

ಬೆಂಗಳೂರು prajakiran.com : ಡ್ರಗ್ಸ್ ಜಾಲದ ಆರೋಪಿಗಳ ನಂಟು ಹೊಂದಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಪರಪ್ಪನಅಗ್ರಹಾರ ಸೇರಿರುವ ನಟಿ ರಾಗಿಣಿ ಅಕ್ರಮ ಹಾಗೂ ಬೇನಾಮಿ ಆಸ್ತಿ ಸಂಪಾದನೆ ಸಂಕಷ್ಟ ಎದುರಿಸುತ್ತಿದ್ದಾರೆ.

ಅವರನ್ನು ಜೈಲಿನಲ್ಲಿಯೇ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ನಟಿ ರಾಗಿಣಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದಾರೆ.

ಕನ್ನಡಕ್ಕೆ ಹೇಗೆ ಬಂದಿರಿ, ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಿರಿ. ಅತಿ ಹೆಚ್ಚು ಸಂಭಾವನೆ ಎಷ್ಟು ಪಡೆದಿದ್ದಿರಿ. ಛಪ್ಪಿ ಪರಿಚಯ ಹೇಗೆ, ರವಿಶಂಕರ್ ಭೇಟಿ ಯಾವಾಗ. ದಿನಕ್ಕೆ ಎಷ್ಟು ಖರ್ಚು ಮಾಡ್ತಿರಿ.

ನಿಮ್ಮ ಆದಾಯದ ಮೂಲ ಹೇಗೆ, ಇಷ್ಟೆಲ್ಲಾ ಹೇಗೆ ಸಂಪಾದನೆ ಮಾಡಿದ್ದೀರಿ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದರಿಂದಾಗಿ ಕೆಲ ಕಾಲ ಕಕ್ಕಾಬಿಕ್ಕಿಯಾದ ನಟಿ ರಾಗಿಣಿ ಹಲವು ಪ್ರಶ್ನೆಗಳಿಗೆ ಉತ್ತರಿಸದೆ ವಿಚಲಿತರಾದರು. ಇವೆಲ್ಲಾ ಕೇಳಬೇಡಿ ಸರ್ ಎಂದು ಗೋಗರೆದಿದ್ದಾಳೆ ಎಂದು ಹೇಳಲಾಗುತ್ತಿದೆ.

ಹಲವು ಆಸ್ತಿ ಸಂಪಾದನೆ ಬಗ್ಗೆ ಮೂಲಗಳನ್ನು ಬಿಟ್ಟುಕೊಡಲು ನಿರಾಕರಿಸಿದ ಘಟನೆ ಕೂಡ ಈ ವೇಳೆ ನಡೆದಿದೆ ಎನ್ನಲಾಗುತ್ತಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *