ಜಿಲ್ಲೆ

ಕುಂದಗೋಳದಲ್ಲಿ ಪತಿ ಸಾವಿನ ಆಘಾತ : ಪತ್ನಿಯೂ ಹೃದಯಾಘಾತದಿಂದ ಸಾವು

ಕುಂದಗೋಳ (ಧಾರವಾಡ) prajakiran.com : ಸತಿಪತಿಗಳು ಒಂದಾದ ಭಕ್ತಿ ಹಿತವಾಗಿರ್ಪ್ಪುದು ಶಿವನಿಗೆ ಎಂಬುವ ಉಕ್ತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

 ಫರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಭಾನುವಾರ ಬೆಳಿಗ್ಗೆ 6-30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫರಿದ್ಧೀನ್ ಪಠಾಣ್ (70) ಪತಿಯ ಸಾವಿನ ದು: ತಾಳಲಾರದೆ  ಸಾಯಂಕಾಲ 4 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

 ತಂದೆತಾಯಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ  ರೋದನೆ ಮುಗಿಲು ಮುಟ್ಟಿದ್ದು ಸಾವಿನಲ್ಲೂ ಒಂದಾದ ಸತಿ ಪತಿಗಳ ಹೊಂದಾಣಿಕೆಗೆ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *