ಜಿಲ್ಲೆ

ಧಾರವಾಡದ ಹುಣಸಿಕುಮರಿ ಮೂಲ ಸೌಕರ್ಯ ವಂಚಿತ

ಕುಗ್ರಾಮದ ಕಥೆ  ಕೇಳಿ ಜನಪ್ರತಿನಿಧಿಗಳೇ….!

ಮೂಲ  ಸೌಕರ್ಯ ಸಮಸ್ಯೆ ಎದುರಿಸುತ್ತಿರುವ  ಗ್ರಾಮ 

ಮಂಜುನಾಥ ಕವಳಿ

ಧಾರವಾಡ prajakiran.com : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ಸಹ ಸಮಾಜದ ಕಟ್ಟ ಕಡೆಯ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಮ್ಮನ್ನು ಆಳುವ ಸರಕಾರಗಳು ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗುತ್ತಲೇ ಬಂದಿವೆ.

ಇದಕ್ಕೆ ಉತ್ತಮ ನಿರ್ದೇಶನವೆಂಬಂತೆ ಧಾರವಾಡದಿಂದ ಕೇವಲ 25 ಕಿ.ಮೀ ದೂರದಲ್ಲಿರೋ ಹುಣಸಿಕುಮರಿ ಎಂಬ ಗ್ರಾಮದ ಜನರ ಅಳಲನ್ನು ಯಾರೂ ಸಹ ಕೇಳದಂತಾಗಿದೆ.

ಹೆಚ್ಚು ಕಡಿಮೆ 600 ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ವಾಸಿಸುವವರೆಲ್ಲರೂ ಗೌಳಿ ಸಮುದಾಯದವರು. ಜಾನುವಾರು ಸಾಕಾಣಿಕೆಯೇ ಇವರ ಮುಖ್ಯ ಕಸುಬು. ಧಾರವಾಡ ಜಿಲ್ಲೆಯ ಅತ್ಯಂತ ಹಿಂದುಳಿದ ಕುಗ್ರಾಮವಾಗಿದೆ.

ಧಾರವಾಡ ತಾಲೂಕಿನ ಹುಣಸಿಕುಮರಿ ಗ್ರಾಮದ ಪ್ರಮುಖ ತೊಂದರೆ ಅಂದರೆ ಅದು ರಸ್ತೆ, ಬಗ್ಗೆ ಅದೆಷ್ಟೇ ಬಾರಿ ಇಲ್ಲಿನ ಜನರು ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಮನವಿ ಮಾಡಿದರೂ ಸಹ ಒಂದೇ ಒಂದು ಬಾರಿಯೂ ಕಡೆ ಗಮನ ಹರಿಸಿಲ್ಲ,

ಈ ಗ್ರಾಮಕ್ಕೆ ಶಾಸಕ  ಸಿ.ಎಂ.ನಿಂಬಣ್ಣವರ ಜನರ ಮತ ಪಡೆದ ಬಳಿಕ ಜಾತ್ರೆಗೆಂದು ಒಮ್ಮೆ ಬಂದಿದ್ದರು. ಅದನ್ನ ಬಿಟ್ಟು ಇದುವರೆಗೂ ಈ ಕಡೆ ಹಾಯ್ದೆ ಇಲ್ಲ.

ಕೇವಲ ಇಲ್ಲಿ ರಸ್ತೆದೊಂದೇ ಸಮಸ್ಯೆ ಇಲ್ಲಾ, ಇಲ್ಲಿ ಆಸ್ಪತ್ರೆ ವ್ಯವಸ್ಥೆ ಇಲ್ಲಾ, ಶೌಚಾಲಯಗಳಿಲ್ಲ, ಪಡಿತರ ವಿತರಣೆಗಾಗಿ ವಾಹನವಿಲ್ಲದವರು ಅರಣ್ಯ ದಾರಿಯಲ್ಲಿ  ಕಲಕೇರಿಯವರೆಗೂ ಅಂದರೆ 5 ಕಿಮೀ ವರೆಗೂ ನಡಿಗೆಯಲ್ಲೇ ಸಾಗಬೇಕು.

ಧಾರವಾಡ ತಾಲೂಕಿನ ಕಲಕೇರಿ ಗ್ರಾಮದಿಂದ ಮುಂದೆ ಹೋದರೆ ಈ ಹುಣಸಿಕುಮರಿ ಎಂಬ ಗ್ರಾಮ ಸಿಗುತ್ತದೆ. ಕಾಡಿನ ಮಧ್ಯೆ ಈ ಗ್ರಾಮಕ್ಕೆ ತೆರಳಬೇಕು. 40-50 ವರ್ಷಗಳಾದರೂ ಇದುವರೆಗೆ ಈ ಊರಿನ ರಸ್ತೆ ಡಾಂಬಾರನ್ನು ಕಂಡಿಲ್ಲಾ,

ಇನ್ನೂ ಈ ರಸ್ತೆಯನ್ನು ನೋಡಿದ್ರೆ ನಗರದ ಜನ ಭಯ ಪಡುವಂತ ಸ್ಥಿತಿಯಲ್ಲಿದೆ. ಈ ರಸ್ತೆ 15 ದಿನಗಳ ಹಿಂದೆ ಮಡ್ಡಿಯಂತಿತ್ತು ಈಗಷ್ಟೆ ಸಮ ಮಾಡಲಾಗಿದೆ.

ಇನ್ನೂ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ರಸ್ತೆ ಮಾಡಿಸಿದ್ರೆ ಕಳ್ಳರಿಗೆ ಅರಣ್ಯ ಸಂಪತ್ತನ್ನು ದೋಚಲು ದಾರಿ ಸರಳವಾಗುತ್ತದೆ ಎನ್ನುವ ವಾದ ಅರಣ್ಯ ಇಲಾಖೆಯದ್ದು.

ಅಷ್ಟೇ ಅಲ್ಲದೆ ಈ ರಸ್ತೆಗಾಗಿ ಅನುದಾನ ಕೂಡ ಮಂಜೂರಾಗಿದ್ದನ್ನು ಶಾಸಕ ನಿಂಬಣ್ಣವರ ಬೇರೆ ಕಡೆ ಕೆಲಸಕ್ಕೆಂದು ಬಳಕೆ ಮಾಡಿಕೊಂಡಿದ್ದಾರಂತೆ.

ಈ  ರಸ್ತೆ ಬಗ್ಗೆ ಕಲಕೇರಿ  ಗ್ರಾಮ ಪಂಚಾಯ್ತಿ ಸದಸ್ಯ ಸುನಿಲ ದೇವರನ್ನು ಕೇಳಿದರೇ ಅವರು  ಗ್ರಾಮೀಣಾಭಿವೃದ್ಧಿಗಾಗಿ ಸರಕಾರ ಹಲವಾರು ರೀತಿಯ ಅನುದಾನ ಬಂದರೂ ಅವುಗಳ ಬಳಕೆ ಮಾಡಿಕೊಳ್ಳಲು ಶಾಸಕರು ಹಾಗೂ ಅಧಿಕಾರಿಗಳು ಬಿಡುತ್ತಿಲ್ಲ.

ಬಿಡುಗಡೆಯಾದ ಹಣವನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡುವ ಕಾರ್ಯದಲ್ಲಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಕಾಡಿನ ಮಧ್ಯೆ ಹಿಂದುಳಿದ ಜನರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

ಆಸ್ಪತ್ರೆ ಸೇರಿದಂತೆ ಮೂಲ  ಸೌಕರ್ಯಗಳನ್ನು ಜನರಿಗೆ ಒದಗಿಸಿ ಕೊಡಬೇಕು ಎಂದು ಹೇಳುತ್ತಾರೆ.

ಇಂತಹ ದಟ್ಟ ಕಾಡಿನ ಮಧ್ಯ ಇರುವ ರಸ್ತೆಯೇ ಸರಿ ಇಲ್ಲದಿದ್ದಲ್ಲಿ ಜನರು ಸಂಚರಿಸೋದಾದ್ರೂ ಹೇಗೆ..?  ಅಷ್ಟೇ ಅಲ್ಲದೆ ಕೊರೋನಾ ಬರುವುದಕ್ಕಿಂತ ಮುಂಚೆ ಈ ಗ್ರಾಮಕ್ಕೆ ದಿನಕ್ಕೆ 2 ಅಥವಾ 3 ಬಸ್ ಬಿಡುತ್ತಿದ್ದರಂತೆ.

ಆದ್ರೆ ಈಗ ಒಂದು ಬಸ್ ಇಲ್ಲಾ ಅದಕ್ಕೆ ಇನ್ನೊಂದು ಪ್ರಮುಖ ಕಾರಣ ಅಂದ್ರೆ ರಸ್ತೆ ಅನ್ನಬಹುದು, ರಸ್ತೆ ಹದಗೆಟ್ಟ ಹಿನ್ನೆಲೆ ಬಸ್ ಬಿಡುತ್ತಿಲ್ಲಾ, ಮತ್ತೆ ಬೇರೆ ಕಡೆ ಹೋಗಬೇಕಾದ್ರೆ ಇಲ್ಲಿನ ಜನ ಏನು ಮಾಡಬೇಕು..?

ರಾತ್ರಿ ಸಮಯದಲ್ಲಿ ಹುಣಸಿಕುಮರಿ ಗ್ರಾಮದ ಜನರಿಗೇನಾದರೂ ಆರೋಗ್ಯದ ಸಮಸ್ಯೆಯಾದರೆ ಯಾರನ್ನ ಕೇಳಬೇಕು..? ಇಷ್ಟು ವರ್ಷಗಳಾದರೂ ಈ ಊರಿನ ಜನರ ಸಮಸ್ಯೆಯತ್ತ ಸರ್ಕಾರ ಗಮನಹರಿಸಿಲ್ಲಾ ಅಂದ್ರೆ ಅದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ.

ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬೇಗ ಇಲ್ಲಿನ ಸಮಸ್ಯೆ ಬಗೆ ಹರಿಸಲು ಪ್ರಮಾಣಿಕ ಪ್ರಯತ್ನ ಮಾಡಲಿ ಎಂಬುದು ಈ ಗ್ರಾಮದ ಜನರ   ಹಾಗೂ ನಮ್ಮ ಆಶಯ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *