ಬೆಂಗಳೂರು prajakiran.com : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯು ಹೆಚ್ಚಾಗುತ್ತಿರುವ ಹಿನ್ನೆಲೆ ಮೇ 24 ರ ವರೆಗೆ ಲಾಕ್ಡೌನ್ ಜಾರಿ ಮಾಡಲಾಗಿದೆ.
ಲಾಕ್ಡೌನ್ ನಿಯಮದಂತೆ ಎಲ್ಲಾ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.
ಕನ್ನಡದ ದೊಡ್ಡ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಕನ್ನಡ ಸೀಸನ್ 8 ರ ಕಾರ್ಯಕ್ರಮವನ್ನು ಕೂಡ ಸ್ಥಗಿತಗೊಳಿಸಲಾಗಿದೆ.
ಈ ವಿಚಾರ ‘ಬಿಗ್ ಬಾಸ್’ ಸ್ಪರ್ಧೆಗಳಿಗೆ ತಿಳಿಸಿ ಶೋ ಅನ್ನು ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ‘ಬಿಗ್ಬಾಸ್ ಸೀಸನ್ 8 ರ ಲೈಟ್ ಆಫ್ ಆಗಿದೆ.
ಸ್ವರ್ಧಿಗಳು, ತಂತ್ರಜ್ಞರು ಸೇಫ್ ಆಗಿ ಮನೆ ಸೇರಿರುತ್ತೀರಾ ಎಂದು ಭಾವಿಸುತ್ತೇನೆ. ಎಲ್ಲರೂ ಆರೋಗ್ಯವಾಗಿರಿ ಎಂದು ಹಾರೈಸಿದ್ದಾರೆ.