ಸಿನಿಮಾ

ಗಾಯನ ನಿಲ್ಲಿಸಿದ ಗಾನ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್…..!

ಮುಂಬೈ prajakiran.com : ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಾನಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಇಹಲೋಕ ತ್ಯಜಿಸಿದರು.

ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ಸರು.

ಕರೋನಾದಿಂದ ಚೇತರಿಸಿಕೊಂಡರೂ, ದೇಹ ಬಳಲಿತ್ತು. ಹೀಗಾಗಿ ಹಲವು ತಿಂಗಳ ಕಾಲ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಿಸದೆ ವಿಧಿವಶರಾದರು.

ಅವರು ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರಾಗಿದ್ದರು. ಹಿಂದಿ ಚಿತ್ರರಂಗದಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವುದಲ್ಲದೆ, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿಯೂ ಹಾಡುಗಳನ್ನು ಹಾಡಿದ್ದಾರೆ.

೧೯೬೭ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ.

ಲತಾ ಅವರು ೨೮ ಸೆಪ್ಟೆಂಬರ್ ೧೯೨೯ ರಲ್ಲಿ 
ದೀನಾನಾಥ್ ಮಂಗೇಶ್ಕರ್ ,
ಶೇವಂತಿ ಮಂಗೇಶ್ಕರ್ ದಂಪತಿಗಳ ಉದರದಲ್ಲಿ ಜನಿಸಿದ್ದರು.

ಅವರ ತಂಗಿ ಹಿರಿಯ ಹಿನ್ನೆಲೆ ಗಾಯಕಿ
ಆಶಾ ಭೋಂಸ್ಲೆ,  ಉಷಾ ಮಂಗೇಶ್ಕರ್(ತಂಗಿ)
ಮೀನಾ ಮಂಗೇಶ್ಕರ್ (ಸೋದರಿ)
ಹೃದಯನಾಥ್ ಮಂಗೇಶ್ಕರ್ (ಸೋದರ) ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು.

ಅವರಿಗೆ 1969 ರಲ್ಲಿ ಪದ್ಮ ಭೂಷಣ,
1999ರಲ್ಲಿ ಪದ್ಮ ವಿಭೂಷಣ
2001ರಲ್ಲಿ ಭಾರತ ರತ್ನ, ಲಭಿಸಿದೆ.

ಅವರ ಕಂಠಸಿರಿ ಕೋಟ್ಯಾಂತರ ಭಾರತೀಯರ ಮನದಲ್ಲಿ ಮನೆಯಲ್ಲಿ ಹಚ್ಚಹಸಿರಾಗಿದೆ.

ಲತಾ ಮಂಗೇಶ್ಕರ್ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನದಲ್ಲಿ  ಪ್ರಧಾನಿ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ಪಾಲ್ಗೊಂಡು ಗೌರವ ನಮನ ಸಲ್ಲಿಸಲಿದ್ದಾರೆ.

ಸಂಜೆ 6ರ ನಂತರ ಶಿವಾಜಿ ಪಾರ್ಕ್​ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ದೇಶದಲ್ಲಿ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *