ಕ್ರೀಡೆ

ಭಾರತೀಯ ಆಟ್ಯಾಪಾಟ್ಯಾ ಫೆಡರೇಶನ್ ಅಧ್ಯಕ್ಷ ವಿ.ಡಿ. ಪಾಟೀಲ ಇನ್ನಿಲ್ಲ

ಧಾರವಾಡ prajakiran. com : 
ಆಟ್ಯಾಪಾಟ್ಯಾ ಫೆಡರೇಷನ್ ಏಷ್ಯಾ ಖಂಡದ ಹಾಗೂ ಭಾರತೀಯ ಆಟ್ಯಾಪಾಟ್ಯಾ ಫೆಡರೇಷನ್ ಅಧ್ಯಕ್ಷ ವಿ.ಡಿ. ಪಾಟೀಲ ಭಾನುವಾರ ರಾತ್ರಿ ನಿಧನ ಹೊಂದಿದರು.

ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಒಬ್ಬ ಮಗ ಒಬ್ಬ ಮಗಳನ್ನು ಅಗಲಿದ್ದಾರೆ.

ಪಾಟೀಲ ಅವರು ಆಟ್ಯಾಪಾಟ್ಯಾ ಆಟದ ಅಂತರಾಷ್ಟ್ರೀಯ ಆಟಗಾರ ಹಾಗು ಕೊಕ್ಕೋ ಆಟದ ರಾಷ್ಟ್ರೀಯ ಆಟಗಾರರಾಗಿದ್ದರು.

ರಾಷ್ಟ್ರೀಯ ಆಟ್ಯಾಪಾಟ್ಯಾ ತಂಡಕ್ಕೆ ಉಪನಾಯಕರಾಗಿದ್ದರು.

ಭಾರತದಲ್ಲಿ ಆಟ್ಯಾಪಾಟ್ಯಾ ಕ್ರೀಡೆ ಬೆಳೆಯಲು ಪ್ರಮುಖ ಕಾರಣಿಕರ್ತರಲ್ಲಿ ಇವರು ಒಬ್ಬರಾಗಿದ್ದರು.

ಸದ್ಯ ಅವರು ಧಾರವಾಡದ ಯೂನಿವರ್ಸಿಟಿ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಪಾಟೀಲರ ನಿಧನಕ್ಕೆ ಮಾಜಿ ಮೇಯರ್ ಶಿವು ಹಿರೇಮಠ, ಮಹೇಶ್ ಶೆಟ್ಟಿ, ಬಿ.ಎಂ. ಪಾಟೀಲ, ಕೆ.ಎಸ್ ಭೀಮಣ್ಣವರ, ಪಿ.ಎಚ್ ನೀರಲಕೇರಿ, ಅಶೋಕ ಮೋಟೆಬೆನ್ನೂರ, ಬಸವರಾಜ ಪಟಾತ್, ಖಾಲಿದ್ ಖಾನ್, ಜಿನೇಂದ್ರ ಕುಂದಗೋಳ ಸಂತಾಪ ಸೂಚಿಸಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *