ಕ್ರೀಡೆ

ಲಗೋರಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗಾಲಿ ಓಟ ಸೇರಿ ಹಲವು ದೇಸಿ ಕ್ರೀಡೆ ಆಡಿ ನಲಿದ ನೂರಾರು ಮಕ್ಕಳು, ಮಹಿಳೆಯರು

ಕುಣಿದು ಕುಪ್ಪಳಿಸಿದ ಚಿಣ್ಣರು

ಧಾರವಾಡ ಪ್ರಜಾಕಿರಣ.ಕಾಮ್  : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಕೆ ಎಚ್ ಬಿ ವಾಟರ್ ಟ್ಯಾಂಕ್ ಮೈದಾನದಲ್ಲಿ ಜನಜಾಗೃತಿ ಸಂಘದಿAದ ಸ್ವಾಮಿವಿವೇಕಾನಂದರ ೧೬೦ನೇ ಜಯಂತಿ ಹಾಗೂ ಸುಭಾಸಚಂದ್ರ ಬೋಸ್ ರವರ ೧೨೬ನೇ ಜಯಂತಿ ಪ್ರಯುಕ್ತ ಹತ್ತು ಹಲವು ದೇಸಿಕ್ರೀಡಾಕೂಟಗಳು ನಡೆದವು.

ನೂರಾರು ಮಕ್ಕಳು, ಮಹಿಳೆಯರು ಲಗೋರಿ, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗಾಲಿ ಓಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಹಲವು ವರ್ಷಗಳ ಬಳಿಕ ಇಂತಹ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಬಾಲ್ಯದ ನೆನಪುಗಳು ಮರುಕಳಿಸಿವೆ ಎಂದು ಹಿರಿಯ ನಾಗರಿಕರು, ಮಹಿಳೆಯರು ಮನದಾಳದ ನೆನಪುಗಳನ್ನು ಹಂಚಿಕೊಂಡರು.

ಚಿಣ್ಣರ ಉತ್ಸಾಹಕ್ಕಂತೂ ಪಾರವೇ ಇರಲಿಲ್ಲ. ಎಲ್ಲಾ ಕ್ರೀಡೆಗಳಲ್ಲಿ ಸಂಭ್ರಮದಿಂದ ಭಾಗವಹಿಸಿ ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ದೇಸಿಕ್ರೀಡಾಕೂಟಗಳಿಗೆ ಚಾಲನೆ ನೀಡಿದ ಸುಮಂಗಲಾ ಬಸವರಾಜ ಕೊರವರ ಮಾತನಾಡಿ, ಆಧುನಿಕತೆ ಬೆಳೆದಂತೆ ಅವಸಾನದ ಅಂಚಿನಲ್ಲಿರುವ ದೇಸಿ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ.

ಈ ಹಿನ್ನಲೆಯಲ್ಲಿ ಜನಜಾಗೃತಿ ಸಂಘವು ನಮ್ಮ ಮುಂದಿನ ಪಿಳಿಗೆಗೆ ಅವುಗಳನ್ನು ಪರಿಚಯಿಸುವ ಸದುದ್ದೇಶದಿಂದ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಅವುಗಳ ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ ಎಂದರು.

ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಮಕ್ಕಳು, ಮಹಿಳೆಯರು ಮೊಬೈಲ್, ಟಿವಿ ಜಗತ್ತಿನಲ್ಲಿ ಮುಳುಗಿಹೋಗಿರುವ ಸಂದರ್ಭದಲ್ಲಿ ಮತ್ತೆ ನಮ್ಮ ಗ್ರಾಮೀಣ ಸೊಗಡಿನ ದೇಸಿ ಕ್ರೀಡೆಗಳನ್ನು ಪರಿಚಯಿಸುವ ಮಹತ್ವಾಂಕ್ಷೆಯಿಂದ ಗೋಣಿಚೀಲ ಓಟ, ಗಾಲಿ ಓಟ, ಲಗೋರಿ, ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್ ನಂತಹ ಅನೇಕ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.‌

ಅವುಗಳಿಗೆ ಉತ್ತಮ ಸ್ಪಂದನೆ ದೊರೆತಿರುವುದು. ನೂರಾರು ಮಕ್ಕಳು, ಮಹಿಳೆಯರು ಸಂತಸದಿಂದ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಆನಂದ ಪಾಟೀಲ, ಮಲ್ಲೇಶ ಅಂಬಿಗೇರ, ಕುಮಾರ ಅಗಸಿಮನಿ, ನವೀನ ಪ್ಯಾಟಿ, ಬಸವರಾಜ ಧಾರವಾಡ, ಪ್ರಮೋದ ಹರಕುಣಿ, ಮಹಿಳೆಯರಾದ ಸುಶೀಲಾ ಕಾಂಬಳೆ, ಪ್ರಮೀಳಾ ಬಾವಿ, ಸುಧಾ ಕರಿಯಣ್ಣವರ, ಅನ್ನಪೂರ್ಣ ಪ್ರಭುಸ್ವಾಮಿಮಠ, ಜಯಶ್ರೀ ಕಟ್ಟಿಮನಿ, ಶೋಭಾ ಮದಬಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *