ಆಧ್ಯಾತ್ಮ

ಧಾರವಾಡದ ಹೆಬ್ಬಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಮಕ್ಕಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆ

ಧಾರವಾಡದ ಹೆಬ್ಬಳ್ಳಿಯ ಡಿಪಿಇಪಿ ಶಾಲೆಯಲ್ಲಿ ಜನ ಜಾಗೃತಿ ಸಂಘದಿAದ ಅರ್ಥಪೂರ್ಣ ಆಯೋಜನೆ

೩೫೦ಕ್ಕೂ ಹೆಚ್ಚು ಸರಕಾರಿ ಶಾಲೆಯ ಮಕ್ಕಳು ಉತ್ಸಾಹದಿಂದ ಭಾಗಿ


ಧಾರವಾಡ ಪ್ರಜಾಕಿರಣ.ಕಾಮ್ : ಸ್ವಾಮಿ ವಿವೇಕಾನಂದರ ೧೬೦ನೇ ಜಯಂತಿ ಹಾಗೂ ಸುಭಾಸಚಂದ್ರ ಬೋಸ್ ಅವರ ೧೨೬ನೇ ಜಯಂತ್ಯೋತ್ಸವ ಪ್ರಯುಕ್ತ ಧಾರವಾಡದ ಜನಜಾಗೃತಿ ಸಂಘದಿAದ ಹೆಬ್ಬಳ್ಳಿಯ ಗ್ರಾಮದ ಡಿಪಿಇಪಿ ಶಾಲೆಯಲ್ಲಿ ಮಕ್ಕಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು.

೩೫೦ಕ್ಕೂ ಹೆಚ್ಚು ಸರಕಾರಿ ಶಾಲೆಯ ಮಕ್ಕಳು ಉತ್ಸಾಹದಿಂದ ಭಾಗಿಯಾಗಿದರು. ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಜನಜಾಗೃತಿ ಸಂಘದಿಂದ ಸ್ಪರ್ಧೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಮಕ್ಕಳು ತಮ್ಮ ಅಮೋಘವಾದ ಕೈ ಚಳಕದಿಂದ ಬಣ್ಣದ ಹೊಸ ಲೋಕವನ್ನೇ ಸೃಷ್ಟಿಸಿದರು.

ಕುಂಚದಲ್ಲಿ ಸ್ವಾಮಿ ವಿವೇಕಾನಂದರ, ಸುಭಾಸಚಂದ್ರ ಬೋಸ್ ಅವರ ಅದ್ಭುತವಾದ ಕಲಾಕೃತಿಗಳನ್ನು ಅರಳಿಸಿದರು. ಇನ್ನು ಕೆಲವರು ವಿಶಿಷ್ಟವಾದ ಪ್ರಬಂಧ ಮಂಡಿಸಿದರೆ, ಇನ್ನುಳಿದವರು ಭಾಷಣದಲ್ಲಿ ಅವರ ಜೀವನ ಸಾಧನೆ ಕುರಿತು ಬೆಳಕು ಚೆಲ್ಲಿದರು.

ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಶಕ್ತಿ, ಸಾಮರ್ಥ್ಯವನ್ನು ಓರೆಗೆ ಹಚ್ಚಿದರು. ಬಳಿಕ ಭಾಷಣದಲ್ಲಿ ಪ್ರಥಮ ಸ್ಥಾನ ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಮುತ್ತಣ್ಣವರ, ಬಾಲಕರ ವಿಭಾಗದಲ್ಲಿ ವಿರೇಶ ದೊಡ್ಡಣ್ಣವರ ಪಡೆದರೆ, ದ್ವಿತೀಯ ಸ್ಥಾನವನ್ನು ಬಾಲಕರ ವಿಭಾಗದಲ್ಲಿ ಅಕ್ಷಯ ಹೆಬಸೂರ ಹಾಗೂ ಬಾಲಕಿಯರ ವಿಭಾಗದಲ್ಲಿ ತೇಜಸ್ವಿನಿ ತುಳಜಪ್ಪನವರ, ತೃತೀಯ ಸ್ಥಾನವನ್ನು ಸಾಗರ ಮಾದರ ಹಾಗೂ ಪೂಜಾ ತುಳಜಪ್ಪನವರ ಪಡೆದರು. ಅಲ್ಲದೆ, ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ಅನ್ನು ಸಮಾಧಾನಕರ ಬಹುಮಾನವಾಗಿ ವಿತರಿಸಲಾಯಿತು.

ಅದೇ ರೀತಿ ಚಿತ್ರಕಲೆ ಸ್ಫರ್ಧೆಯಲ್ಲಿ ಶಂಕರ ಕೇರಿಯವರ ಹಾಗೂ ನಿತಿನ ಗರಗ ಪ್ರಥಮ ಸ್ಥಾನ ಪಡೆದರೆ, ಭಾಗ್ಯ ನಾದಿಗಟ್ಟಿ ಹಾಗೂ ಶಂಕರ ಕಮ್ಮಾರ ದ್ವಿತೀಯ ಸ್ಥಾನ ಪಡೆದರೆ, ಆದಿತ್ಯ ಹೇಂದ್ರೆ ಹಾಗೂ ಶ್ರೇಯಾ ಆದ್ಯ ತೃತೀಯ ಸ್ಥಾನ ಪಡೆದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕೂಡ ಅದೇ ರೀತಿಯಾಗಿ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಮಾರಡಗಿ ಸರ್ಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಬಸವರಾಜ ಲಕ್ಕಮ್ಮನವರ ಅವರಿಗೆ ಒಂದು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಮಕ್ಕಳಿಗೆ ನಮ್ಮ ದೇಶದ ಮಹಾನ್ ಪುರುಷರ ಬಗ್ಗೆ ತಿಳಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘವು ಪ್ರತಿವರ್ಷ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅವರ ಜೀವನ ಸಾಧನೆ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತಿದೆ.

ಮಕ್ಕಳು ಓದು, ವಿದ್ಯಾಭ್ಯಾಸದ ಮೂಲಕ ಆಟ ಪಾಠಗಳೊಂದಿಗೆ ಬಾಲ್ಯವನ್ನು ಅನುಭವಿಸಬೇಕು ಎಂದರು.

ಜನಜಾಗೃತಿ ಸಂಘ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ,ಭಾಷಣದಂತಹ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಿದಾಗ ಅವರ ಯಶೋಗಾಥೆ ತಿಳಿದು ಮತ್ತೊಬ್ಬರಿಗೆ ಪರಿಚಯಿಸುವ ಕೆಲಸ ಮಾಡುತ್ತಾರೆ.

ಆ ನಿಟ್ಟಿನಲ್ಲಿ ಜನಜಾಗೃತಿ ಸಂಘ ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ, ಯುವಕರಿಗೆ, ಸಾರ್ವಜನಿಕರಿಗೆ ಇಂತಹ ವಿಶಿಷ್ಟ ಪೂರ್ಣವಾದ ಕ್ರಾರ್ಯಕ್ರಮ ಆಯೋಜಿಸುವ ಮೂಲಕ ಸಾರ್ಥಕತೆ ಮೆರೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ವೇದಿಕೆ ಮೇಲೆ ಹೆಬ್ಬಳ್ಳಿ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ತಲವಾಯಿ, ಸದಸ್ಯರಾದ ಬಸವರಾಜ ಹೆಬ್ಬಾಳ, ಮುಖಂಡರಾದ ಮುಖಂಡರಾದ ಅಶೋಕ ಲಕ್ಕಮ್ಮನವರ, ಅಡಿವೆಪ್ಪ ಲಕ್ಕಮ್ಮನವರ, ಹಟೇಲ್ ಸಾಬ ಗುಡಿಸಲಮನಿ, ಈರಣ್ಣ ಹಡಪದ, ನಿಂಗಪ್ಪ ಹೊಂಗಲ್, ಚಂದ್ರು ಮಟ್ಟಿ, ಶಿವು ಹಡಪದ, ಸಿ ಆರ್ ಪಿ ಎಂ.ಎನ್. ಮುಲ್ಲಾನವರ, ಬಾಪು ತಿರ್ಲಾಪುರ, ಅಶೋಕ ಹಡಪದ, ಬಿ ಆರ್ ಪಿ ಸವಾಯಿ ಸರ್, ಶಿಕ್ಷಣ ಫೌಂಡೇಶನದ ಶ್ರೀಶೈಲ್ ಅಥಣಿ, ಕಲಾವಿದರಾದ ಶಶಿಧರ ಗರಗ, ಶಾಲೆಯ ಪ್ರಧಾನ ಗುರುಗಳಾದ ಗೀತಾ ದೊಡ್ಡಮನಿ, ಬಸವಣೆಪ್ಪ ಕಮತಿ, ವಿ.ಆರ್. ಭಜಂತ್ರಿ, ಎಸ್. ಆರ್. ಸಣ್ಣಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *