ಆಧ್ಯಾತ್ಮ

ರಾಷ್ಟ್ರಋಷಿ ದತ್ತೋಪಂಥ ಠೇಂಗಡಿಜಿ ನೀಡಿದ ಆತ್ಮನಿರ್ಭರತೆ ಕುರಿತ ದೃಷ್ಟಾಂತಗಳು

ಭಾರತದ ಭೇಟಿಗಾಗಿ ಆಗಮಿಸಿದ ವಿಯಟ್ನಾಂ ಅಧ್ಯಕ್ಷ ಹೊಚಿಮಿನ್ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಕೆಲವು ವರದಿಗಾರರ ದೃಷ್ಟಿ ಅಧ್ಯಕ್ಷರ ಪ್ಯಾಂಟ್‌ನಲಿದ್ದ ಹೊಲಿಗೆಗಳತ್ತ ಬಿದ್ದಿತು.

ಹೊಲಿಗೆ ಇದೆ ಎಂದರೆ ಅದು ಹರಿದಿತ್ತು ಮತ್ತು ಹರಿದಿದ್ದನ್ನು ಸರಿಪಡಿಸಲು ಹೊಲಿಗೆ ಹಾಕಲಾಗಿದೆ ಎಂದರ್ಥವಾಗುತ್ತದೆ.

ವರದಿಗಾರರು ವಿಯಟ್ನಾಂ ಅಧ್ಯಕ್ಷರಿಗೆ ತಾವು ಒಂದು ರಾಷ್ಟ್ರದ ರಾಷ್ಟ್ರಾಧ್ಯಕ್ಷರಾಗಿದ್ದೀರಿ. ಆದರೂ ಹರಿದ ಮತ್ತು ಹೊಲಿಗೆ ಹಾಕಿದ ಪ್ಯಾಂಟ್ ಧರಿಸಿದ್ದೇಕೆ? ಎಂದು ಪ್ರಶ್ನಿಸಿದರು.

ಆಗ ವಿಯಟ್ನಾಂ ಅಧ್ಯಕ್ಷರು : ಮೈ ಕಂಟ್ರಿ ಕ್ಯಾನ ಆಫಾರ್ಡ ದಿಸ್ ಮಚ್ ( ನನ್ನ ದೇಶ ನನಗಿಷ್ಟನ್ನೇ ಒದಗಿಸುವ ಸಾಮರ್ಥ್ಯ ಹೊಂದಿದೆ ) ಎಂದು ಉತ್ತರಿಸಿದರು. ಇದು ನಿಜವಾದ ಆತ್ಮನಿರ್ಭರತೆ (ಸ್ವಾವಲಂಬನ) ಆಗಿದೆ.



ಗಾಂಧೀಜಿ ಮತ್ತು ವೈಸರಾಯ ಐರ್ವಿನ್ ನಡುವೆ ನಡೆಯಬೇಕಾದ ಒಪ್ಪಂದದ  ಸಂದರ್ಭದಲ್ಲಿ ಚರ್ಚೆ ನಡೆಯುತ್ತಿತು. ಮಧ್ಯಾಹ್ನ ಚಹಾ ಸಮಯದಲ್ಲಿ ಐರ್ವಿನ್ ಎಲ್ಲರಿಗೂ ಚಹಾ ಮತ್ತು ಗಾಂಧೀಜಿ ಯವರಿಗೆ ನಿಂಬೆಹಣ್ಣಿನ ಪಾನೀಯ ಒದಗಿಸಿದರು.

ಗಾಂಧೀಜಿ ಏನು ಮಾಡುತ್ತಾರೆ ಎಂದು ಗಮನಿಸುತ್ತಿದ್ದರು. ಗಾಂಧೀಜಿಯವರು ತಮ್ಮ ಜೇಬಿನಿಂದ ಒಂದು ಸಣ್ಣಪುಡಿ ಚೀಟು ತೆಗೆದು ಅದರಲ್ಲಿನ ಪದಾರ್ಥ ಸ್ವಲ್ಪ ಪಾನೀಯದಲ್ಲಿ ನಿಧಾನವಾಗಿ ಕಲಿಸಿ ಕುಡಿದರು.

ಆಗ ಐರ್ವಿನ್‌ರವರು ಪಾನೀಯದಲ್ಲಿ ಏನನ್ನು ಹಾಕಿ ಕೊಂಡಿರಿ ಎಂದು ಪ್ರಶ್ನಿಸಿದರು. ಆಗ ಗಾಂಧೀಜಿಯವರು ತಮ್ಮ (ಬ್ರಿಟಿಷ) ಉಪ್ಪಿನ ಕಾಯಿದೆ ವಿರೋಧಿಸಿ ನಾನು ತಯಾರಿಸಿದ ಉಪ್ಪನ್ನು ಈಗ ಪಾನೀಯದಲ್ಲಿ ಹಾಕಿಕೊಂಡು ಕುಡಿದಿದ್ದೇನೆ ಎಂದು ಉತ್ತರಿಸಿದರು. ಇದು ಆತ್ಮ ನಿರ್ಭರತೆ. ಇದುವೇ ಸ್ವದೇಶಿ.



ಸ್ವದೇಶಿ ಎಂಬುದು ಒಂದು ಭಾವನೆ. ಸ್ವದೇಶಿ ಎಂದರೆ ಕೇವಲ ಆರ್ಥಿಕತೆ ಮಾತ್ರವಲ್ಲ. ಭಾವನೆಗಳ ಆಧಾರದ ಮೇಲೆ ಮಾತ್ರ ಸ್ವದೇಶಿ ಮೈಕೊಡವಿ ಮೇಲೆಳಬಹುದು.

ಪಂಡಿತ ದೀನದಯಾಳ ಉಪಾಧ್ಯಾಯರು ಭಾರತೀಯ ಜನಸಂಘದ ವಿಜಯವಾಡ ಅಧಿವೇಶನದಲ್ಲಿ  ಪ್ರಿನ್ಸಪಿಲ್ ಅಂಡ್ ಪ್ರೊಗ್ರಾಮ ಕುರಿತು ಮಾತಾಡುವಾಗ ರಾಷ್ಟ್ರೀಯ ಸಲ್ಪ ರಿಲಾಯನ್ಸ ( ರಾಷ್ಟ್ರೀಯ ಆತ್ಮ ನಿರ್ಭರ) ಎಂಬ ಪ್ರಮುಖ ವಿಚಾರ ಕುರಿತು ಚರ್ಚಿಸಿದರು.

ರಾಷ್ಟ್ರೀಯ ಆತ್ಮನಿರ್ಭರತೆ ಪೂರ್ಣಪ್ರಮಾಣದಲ್ಲಿ ಒಂದೇ ಸಲಕ್ಕೆ ಸಾಧಿಸಲು ಕಷ್ಟಸಾಧ್ಯವಾಗಬಹುದು. ಏಕೆಂದರೆ ಎಲ್ಲ ವಸ್ತುಗಳು ನಮ್ಮಲ್ಲಿ ಇರುವುದಿಲ್ಲ. ಆದ್ದರಿಂದ ವಿದೇಶಿಗಳಿಂದ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಬಹುದು.

ವಸ್ತುಗಳ ಕೊಡು ಕೊಳ್ಳುವ ವ್ಯವಹಾರ ಸಮಾನ ಸ್ಥರದಲ್ಲಿ ಆಗಬೇಕು. ಆತ್ಮ ಸಮ್ಮಾನ ಇರಬೇಕು ಎಂಬ ಮಾತನ್ನು ಪಂಡಿತ ದೀನದಯಾಳ ಉಪಾಧ್ಯಯರು ಹೇಳಿದ್ದರು. ಇದುವೇ ಸ್ವದೇಶಿ ಇದುವೇ ಸ್ವಾವಲಂಬನ.

ಮಹಾದೇವಯ್ಯ ಕರದಳ್ಳಿ, ಕಲಬುರ್ಗಿ



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *