ಆಧ್ಯಾತ್ಮ

ಚಾಲಾಕಿ ನಾಯಿ ಕಳ್ಳನ ಕೈ ಚಳಕ ಸಿ ಸಿ ಟಿವಿಯಲ್ಲಿ ಸೆರೆ

ಉಡುಪಿ Prajakiran.com: ವೈದ್ಯರೊಬ್ಬರ ಮನೆಯ ಸಾಕು ನಾಯಿಯನ್ನು ಕಳ್ಳನೊಬ್ಬ ಕದ್ದುಕೊಂಡು ಹೋಗುವ
ಚಾಲಾಕಿ ನಾಯಿ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ

ಉಡುಪಿಯ ಮಲ್ಪೆ ಸಮೀಪದ ಡಾಕ್ಟರ್ ಸುರೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಬೆಳಗಿನ ಜಾವ ಈ ಕಳ್ಳತನ ನಡೆದಿದೆ.

ಮುಂಜಾನೆ 4.35 ರ ಸುಮಾರಿಗೆ ಎಲ್ಲರೂ ಮಲಗಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಮನೆಯ ಹಿಂಬದಿಯಿಂದ ಒಳಗೆ ನುಗ್ಗಿದ ಕಳ್ಳನು, ಬೆಕ್ಕಿನ ಹೆಜ್ಜೆ ಇಟ್ಟು ಬಂದು, ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ.

ವಿಶಿಷ್ಟ ಹೈಬ್ರಿಡ್ ತಳಿಯ ಈ ನಾಯಿ ಮನೆಯವರ ಅಪಾರ ಪ್ರೀತಿಗೆ ಪಾತ್ರವಾಗಿತ್ತು.

ಬೆಳಗ್ಗೆ ಎದ್ದಾಗ, ನಾಯಿಯನ್ನು ಕಾಣದೆ ಮನೆಯವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ.

ಅಲ್ಲಿ ಕಳ್ಳನ ಕರಾಮತ್ತು ಪತ್ತೆಯಾಗಿದೆ. ಕಳ್ಳ ನಡು ವಯಸ್ಕನಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ನಾಯಿ ಕದ್ದ ಕಳ್ಳನನ್ನು ಹುಡುಕಿಕೊಡಿ ಎಂಬ ಮೆಸೇಜ್ ಉಡುಪಿಯಾದ್ಯಂತ ಹರಿದಾಡುತ್ತಿದೆ.

ನಾಯಿ ಒಂಚೂರು ಬೊಗಳದಂತೆ ಮೋಡಿ ಮಾಡಿರುವ ಕಳ್ಳನ ಚಾಕಚಕ್ಯತೆ ಕಂಡು ಜನ ಬೆರಗಾಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *