ರಾಜ್ಯ

ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಮೊರಬ, ಇಂಗಳಹಳ್ಳಿ, ತೆರ್ಲಘಟ್ಟ ಸೇರಿ ಹಲವು ಹಳ್ಳಿ ಸೀಲ್ ಡೌನ್    

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ ೩೪ ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಸೋಂಕಿತರ ವಾಸವಿರುವ ಹಲವು ಹಳ್ಳಿಗಳ ಓಣಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಕರೋನಾ ಸೋಂಕಿನಿಂದ ಬಳಲುವವರ ಮನೆಯ ಬೀದಿಗಳನ್ನು ಸೀಲ್ ಡೌನ್   ಮಾಡಲಾಗಿದೆ. ಜೊತೆಗೆ ಅವರ ಮನೆಯ ಬೀದಿಯ ಸುತ್ತಮುತ್ತ ಇರುವ 200ಮೀಟರ್  ಪ್ರದೇಶ ಬಫರ್ ಜೋನ್ ಎಂದು ಘೋಷಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಧಾರವಾಡಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮವೊಂದರಲ್ಲಿಯೇ ಬರೋಬ್ಬರಿ 23 ಜನರಿಗೆ ಕರೋನಾ ಸೋಂಕು ವಕ್ಕರಿಸಿದ್ದು, ಒಬ್ಬ ಹಿರಿಯ ನಾಗರಿಕ ಚಿಕಿತ್ಸೆ ಫಲಿಸದೆ ಪಿ-೭೦೬೦ ( ೬೫ ವರ್ಷದ ಪುರುಷ)  ಸಾವನ್ನಪ್ಪಿರುವುದರಿಂದ ಮೊರಬ ಗ್ರಾಮದ ವಿವಿಧ ಓಣಿಗಳನ್ನು ಸೀಲ್ ಡೌನ್ ಮಾಡಲಾಗಿದೆ.  



 ಅದೇ ರೀತಿ ಅಣ್ಣಿಗೇರಿಯಅಮೃತೇಶ್ವರ ನಗರ ಸೀಲ್ ಡೌನ್ ನಂತರ ಇದೀಗ ಮತ್ತೊಂದು ಕೋವಿಡ್ 19 ಪಾಸಿಟಿವ್ ಪ್ರಕರಣ ದೃಢಪಟ್ಟ ಹಿನ್ನಲೆಯಲ್ಲಿ ಡಿಡಬ್ಲ್ಯೂಡಿ ೧೨೩  ಪಿ- ೭೦೩೩  (೨ ವರ್ಷದ ಗಂಡು ಮಗು  ) ಅಣ್ಣಿಗೇರಿ ನಿವಾಸಿ  ರಾಜಸ್ಥಾನದಿಂದ ಹಿಂದಿರುಗಿದ ಹಿನ್ನೆಲೆಯಿದೆ. ಆತ ವಾಸಿಸುವ ಓಣಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಡಿಡಬ್ಲ್ಯೂಡಿ ೧೨೨   –  ಪಿ-  ೭೦೩೨    (೫೦ ವರ್ಷ , ಪುರುಷ )    ಇವರು ಅಣ್ಣಿಗೇರಿ  ತಾಲೂಕಿನ ಸಾಸ್ವಿಹಳ್ಳಿ ನಿವಾಸಿ ಜಮ್ಮು ಮತ್ತು ಕಾಶ್ಮೀರದಿಂದ ಹಿಂದಿರುಗಿದ್ದರು. ಇದರಿಂದಾಗಿ ಅವರು ವಾಸಿಸುತ್ತಿದ್ದ ಬಡಾವಣೆಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ.   

ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ನಿವಾಸಿ ಡಿಡಬ್ಲ್ಯೂಡಿ – ೧೨೪ ಪಿ- ೭೦೩೪    ( ೩೬  ವರ್ಷದ ಪುರುಷನಿ ಗೂ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ಸೋಂಕಿತ ವಾಸಿಸುವ ಓಣಿಯನ್ನು ಸೀಲ್ ಡೌನ್ ಮಾಡಲಾಗಿದೆ.




ಹುಬ್ಬಳ್ಳಿ ಆನಂದ ನಗರ ನಿವಾಸಿ ಡಿಡಬ್ಲ್ಯೂಡಿ – ೧೨೫  ಪಿ- ೭೦೩೫  ( ೧೦ ವರ್ಷದ ಬಾಲಕಿಗೂ ಸೋಂಕು ವ್ಯಾಪಿಸಿರುವುದರಿಂದ ಆಕೆ ವಾಸಿಸುವ ಆನಂದ ನಗರದ ಸೋಂಕಿತನ ಮನೆಯ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಹುಬ್ಬಳ್ಳಿ ನೂರಾನಿ ಪ್ಲಾಟ್ ನಿವಾಸಿ ಡಿಡಬ್ಲ್ಯೂಡಿ -೧೨೬ ಪಿ-೭೦೩೬ ( ೫೭ ವರ್ಷ, ಮಹಿಳೆ  )  , ತೆಲಂಗಾಣದಿಂದ ಹಿಂದಿರುಗಿದ್ದರಿಂದ ಆಕೆಗೂ ಸೊಂಕು ವಕ್ಕರಿಸಿದೆ. ಹೀಗಾಗಿ ಆ ನೂರಾನಿ ಪ್ಲಾಟ್ ಸೀಲ್ ಡೌನ್ ಮಾಡಲಾಗಿದೆ.

ಉಣಕಲ್  ಕೊರವಿ ಓಣಿಯ ಇಬ್ಬರು ನಿವಾಸಿಗಳಾದ ಡಿಡಬ್ಲ್ಯೂಡಿ -೧೫೧   ಪಿ- ೭೦೬೧ ( ೪೪ ವರ್ಷ ,ಮಹಿಳೆ) , ಡಿಡಬ್ಲ್ಯೂಡಿ -೧೫೨  ಪಿ- ೭೦೬೨ ( ೬೫  ವರ್ಷ ,ಮಹಿಳೆ) ಇವರಿಬ್ಬರೂ ಕರೋನಾ ಸೋಂಕು ಹರಡಿರುವುದರಿಂದ ಆ ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಇದೇ ವೇಳೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದ ಡಿಡಬ್ಲ್ಯೂಡಿ-92 ಪಿ-6250 ನಾಲ್ಕು ವರ್ಷದ ಮಗುವಿಗೂ ಸೋಂಕು ತಗುಲಿರುವುದರಿಂದ ತೆಂಬದವರ ಓಣಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾಡಳಿತ ವಿವರಿಸಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *