ರಾಜ್ಯ

ಫೆಬ್ರುವರಿಯಲ್ಲಿ ರಾಜ್ಯದ ದಾಸೋಹ ದಿನದ ವಿಶಿಷ್ಟ ಆಚರಣೆ

ತುಮಕೂರು ಪ್ರಜಾಕಿರಣ.ಕಾಮ್ ಜ. 21: ಫೆಬ್ರವರಿ ಮಾಹೆಯಲ್ಲಿ ದಾಸೋಹ ದಿನವನ್ನು ವಿಶಿಷ್ಟವಾದ ಕಾರ್ಯಕ್ರಮವಾಗಿ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ: ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

*ದಾಸೋಹ ದಿನ: ರಜೆ ಘೋಷಣೆ ಇಲ್ಲ*
ದಾಸೋಹ ದಿನದ ಪ್ರಯುಕ್ತ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಂಟಪಗಳು ಮಠಮಾನ್ಯಗಳಲ್ಲಿ ಆಗಬೇಕು. ಇದರ ಆಚರಣೆಗೆಂದು ರಜೆ ಘೋಷಿಸುವುದಿಲ್ಲ.

ಆದರೆ ಗೌರವ ಸಲ್ಲಿಸುವ ಕೆಲಸ ಮಾಡಲಾಗುವುದು. ಬಸವಣ್ಣ ಹಾಗೂ ಶಿವಕುಮಾರ ಸ್ವಾಮೀಜಿಗಳು ಕಾಯಕತತ್ವವನ್ನು ಪ್ರತಿಪಾದಿಸಿದ್ದು, ಅದರಂತೆ ನಾವು ನಡೆಯುತ್ತೇವೆ ಎಂದರು.

*ಸ್ವಾಮೀಜಿಗಳ ಆಶೀರ್ವಾದ ನಾಡಿನ ಜನತೆ ಮೇಲಿದೆ*
ನಡೆದಾಡುವ ದೇವರು , ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಗದ್ದುಗೆ ನಮಸ್ಕಾರ ಮಾಡಿದ್ದು, ಸಂತೋಷ, ಸಮಾಧಾನವಾವಿದೆ.

ಅವರ ಆಶೀರ್ವಾದ ಈ ನಾಡಿನ ಜನತೆ ಮೇಲೆ ಇದೆ ಎಂಬ ಭಾವನೆಯಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ ಎಂದರು.

*ಪ್ರತಿಮೆ ಸ್ಥಾಪನೆಗೆ ವೇಗ*
ಸ್ವಾಮೀಜಿ ಹುಟ್ಟೂರಿನಲ್ಲಿ ಅವರ ಪ್ರತಿಮೆ ಸ್ಥಾಪನೆ ಕುರಿತು ಪರಿಶೀಲಿಸಿದ್ದು, ಅದಕ್ಕೆ ವೇಗ ನೀಡಲಾಗುತ್ತಿದೆ ಎಂದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *