ಕ್ರೀಡೆ

ಧಾರವಾಡ ಜರ್ನಲಿಸ್ಟ್ ಗಿಲ್ಡ್ ನ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಪತ್ರಕರ್ತರು

ಧಾರವಾಡ prajakiran.com ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಗಿಲ್ಡ್‌ ವಾರ್ಷಿಕ ಕ್ರೀಡಾಕೂಟ ಸೋಮವಾರ ಸಮಾರೋಪಗೊಂಡಿತು.

ಕೂಟದ ಸಂಪೂರ್ಣ ಫಲಿತಾಂಶ ಇಂತಿದೆ.
ಒಳಾಂಗಣ ವಿಭಾಗದ ಕೇರಂ ಸಿಂಗಲ್ಸ್ ನಲ್ಲಿ ಬಸವರಾಜ ಅಳಗವಾಡಿ (ಪ್ರ), ರಾಯಸಾಬ ಅನ್ಸಾರಿ (ದ್ವಿ) ಹಾಗೂ ಮಿಲಿಂದ ಪಿಸೆ (ತೃ)

ಶೆಟಲ್ ಬ್ಯಾಡ್ಮಿಂಟನ್  ಸಿಂಗಲ್ಸ್‌ನಲ್ಲಿ ರವೀಶ ಪವಾರ (ಪ್ರ), ಸುಧೀಂದ್ರಪ್ರಸಾದ ಇ.ಎಸ್. (ದ್ವಿ), ಬಸವರಾಜ ಹಿರೇಮಠ (ತೃ), ಶೆಟಲ್ ಡಬಲ್ಸ್ ನಲ್ಲಿ ರವೀಶ ಪವಾರ ಹಾಗೂ ಶಶಿಧರ ಬುದ್ನಿ (ಪ್ರ), ಸುಧೀಂದ್ರಪ್ರಸಾದ ಇ.ಎಸ್. ಹಾಗೂ ಎಸ್.ಎಫ್. ಮುನ್ಶಿ (ದ್ವಿ), ಚೆಸ್‌ನಲ್ಲಿ ಮಲ್ಲಿಕಾರ್ಜುನ ಹಿರೇಮಠ (ಪ್ರ), ಗುರುರಾಜ ಜಮಖಂಡಿ (ದ್ವಿ), ಮಂಜುನಾಥ ಕವಳಿ (ತೃ), ಸ್ಥಾನ ಪಡೆದಿದ್ದಾರೆ.

ಹೊರಾಂಗಣ ವಿಭಾಗದ ೧೦೦ ಮೀ. ಓಟದಲ್ಲಿ ಬಸವರಾಜ ಪಟಾತ (ಪ್ರಥಮ), ಮಂಜುನಾಥ ಅಂಗಡಿ (ದ್ವಿತೀಯ), ಪ್ರಶಾಂತ ಲೋಕಾಪುರ (ತೃತೀಯ),

೨೦೦ ಮೀ. ಓಟದಲ್ಲಿ ಬಸವರಾಜ ಪಟಾತ (ಪ್ರ), ಮಂಜುನಾಥ ಅಂಗಡಿ (ದ್ವಿ) ಹಾಗೂ ಪ್ರಶಾಂತ ಲೋಕಾಪುರ (ತೃ) ಸ್ಥಾನ ಪಡೆದಿದ್ದಾರೆ.

ಗುಂಡು ಎಸೆತದಲ್ಲಿ ರವೀಶ ಪವಾರ (ಪ್ರ), ಮಂಜುನಾಥ ಅಂಗಡಿ (ದ್ವಿ), ಮಲ್ಲಿಕಾರ್ಜುನ ಬಾಳನಗೌಡ್ರ (ತೃ), ಉದ್ದಜಿಗಿತದಲ್ಲಿ ಮಂಜುನಾಥ ಅಂಗಡಿ (ಪ್ರ), ಮಲ್ಲಿಕಾರ್ಜುನ ಬಾಳನಗೌಡ್ರ (ದ್ವಿ), ರಾಯಸಾಬ ಅನ್ಸಾರಿ (ತೃ), ೪೫ ವರ್ಷ ಮೇಲ್ಪಟ್ಟವರ ೧೦೦ ಮೀ. ವೇಗದ ನಡಿಗೆಯಲ್ಲಿ ರವಿಕುಮಾರ ಕಗ್ಗಣ್ಣವರ (ಪ್ರ), ನಾಗರಾಜ ಕಿರಣಗಿ (ದ್ವಿ) ಹಾಗೂ ಶಿವಲಿಂಗಯ್ಯ ಪಾಟೀಲ (ತೃ) ಸ್ಥಾನ ಪಡೆದಿದ್ದಾರೆ.

ಗುಂಪು ಕ್ರೀಡಾ ವಿಭಾಗದ ೪*೧೦೦ ಮೀ. ರಿಲೆಯಲ್ಲಿ ಮಂಜುನಾಥ ಅಂಗಡಿ, ಬಸವರಾಜ ಹೊಂಗಲ, ಮಲ್ಲಿಕಾರ್ಜುನ ಬಾಳನಗೌಡರ, ರಾಯಸಾಬ ಅನ್ಸಾರಿ ತಂಡ (ಪ್ರ), ರವೀಶ ಪವಾರ, ವಿಕ್ರಮ ನಾಡಿಗೇರ, ಸದ್ದಾಂ ಮುಲ್ಲಾ, ನಾಗರಾಜ ಕಿರಣಗಿ ಅವರ ತಂಡ (ದ್ವಿ) ಹಾಗೂ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಬಸವರಾಜ ಹೊಂಗಲï ನಾಯಕತ್ವದ ತಂಡ ಜಯಗಳಿಸಿದ್ದು, ಮಂಜುನಾಥ ಅಂಗಡಿ ನಾಯಕತ್ವದ ತಂ ರನ್ನರ್ ಅಪ್ ಆಗಿದೆ.

ಇದಲ್ಲದೆ ವೈಯಕ್ತಿಕ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಮಂಜುನಾಥ ಅಂಗಡಿ ಭಾಜನರಾಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *