ಜಿಲ್ಲೆ

ಧಾರವಾಡದಲ್ಲಿ ಮಹಾನಗರ ಪಾಲಿಕೆಯಿಂದ ಕಳಪೆ ಕಾಮಗಾರಿ ….!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶಿವಾನಂದ ನಗರದಲ್ಲಿ ಮಾಡಲಾಗಿರುವ ಒಳಚರಂಡಿ ಕಾಮಗಾರಿ ಕಳಪೆ ಗುಣಮಟ್ಟ ದಿಂದ ಕೂಡಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಆಮ್ ಆದ್ಮಿ ಪಕ್ಷದ ಮುಖಂಡರಿಗೆ ವಿಷಯ ತಿಳಿಸಿದ್ದರಿಂದ ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯ ನಾಗರಾಜ ಕರೆಣ್ಣವರ ಅವರ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಈ ವೇಳೆ ಒಳಚರಂಡಿ ನಿರ್ಮಾಣಕ್ಕೆ ಬಳಸಿದ ಸಿಮೆಂಟ್ ಕಿತ್ತು ಹೋಗಿರುವುದು ಕಂಡು ಬಂದಿದೆ. ಹೀಗಾಗಿ ಈ ಕುರಿತು […]

ಜಿಲ್ಲೆ

ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ಪದವೀಧರರ ಆಶಾಕಿರಣ

ಗದಗ Prajakiran.com : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ಪದವೀಧರರ ಆಶಾಕಿರಣವಾಗಿದ್ದಾರೆ. ಇವರು ಸಲ್ಲಾವುದ್ದೀನ್ ನಾಗರಕಟ್ಟಿ ನಿವೃತ್ತ ಗದಗ-ಬೇಟಗೇರಿ, ನಗರಸಭೆ, ನೌಕರರ ಸುಪುತ್ರರಾಗಿ ಹಾಗೂ ಜಿ.ಎಸ್.ನಾಗರಕಟ್ಟಿ ನ್ಯಾಯವಾದಿಗಳು ಮತ್ತು ದಿ|| ಟಿ.ಎಸ್.ನಾಗರಕಟ್ಟಿ, ಲೋಕಾಯುಕ್ತ ಕಛೇರಿ ನೌಕರರ ಇವರ ಕಿರಿಯ ಸಹೋದರರಾದ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗದಗನ ಸರ್ಕಾರಿ ಶಾಲೆ ನಂ 2 ರಲ್ಲಿ ವಿದ್ಯಾಭ್ಯಾಸ ಮಾಡಿ, ಪ್ರೌಢ ಶಿಕ್ಷಣವನ್ನು ಗದಗಿನ ವಿದ್ಯಾದಾನ ಸಮಿತಿಯಲ್ಲಿ ಪೂರೈಸಿ […]

ಜಿಲ್ಲೆ

ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೃಷ್ಣಕಾಂತ್ ಅಧಿಕಾರ ಸ್ವೀಕಾರ

ಧಾರವಾಡ : ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ. ಕೃಷ್ಣಕಾಂತ್ ಬುಧವಾರ ಅಧಿಕಾರ ಸ್ವೀಕಾರ ಮಾಡಿದರು. ಧಾರವಾಡ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಹಾಗೂ ಸಿಬ್ಬಂದಿ ಅದ್ದೂರಿ ಸ್ವಾಗತ ಕೋರಿದರು. ಬಳಿಕ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ಮಾತನಾಡಿ, ಜಿಲ್ಲೆಯ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಶ್ರಮಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ನಿರ್ಗಮಿತ […]

ಜಿಲ್ಲೆ

ಧಾರವಾಡದಲ್ಲಿ ಹಂದಿ ಕಾಟದಿಂದ ಬೇಸತ್ತು ಪಂಚಾಯ್ತಿಗೆ ಬೀಗ ಹಾಕಿದ ರೈತರು

ಧಾರವಾಡ prajakiran.com : ಹಂದಿಗಳ ಕಾಟದಿಂದ ಬೇಸತ್ತ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರೈತರು ಪಂಚಾಯ್ತಿ ಕಚೇರಿಗೆ ಬೀಗ ಹಾಕಿದ ಘಟನೆ ಮಂಗಳವಾರ ನಡೆದಿದೆ. ಹೊಲ, ಗದ್ದೆಗಳಿಗೆ ನುಗ್ಗುತ್ತಿರುವ ಹಂದಿಗಳು ಬೆಳೆಯನ್ನೆಲ್ಲ ನಾಶ ಮಾಡುತ್ತಿವೆ. ಮೊದಲೇ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದು, ಇದರ ಮಧ್ಯೆ ಹಂದಿಗಳು ಹೊಲಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಈ ಸಂಬಂಧ ಪಂಚಾಯ್ತಿ ಪಿಡಿಓ ಅವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಹಂದಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ರೈತರು, […]

ಜಿಲ್ಲೆ

ಧಾರವಾಡದಲ್ಲಿ ಧಾರಾಕಾರ ಮಳೆಗೆ ಮನೆ, ಅಪಾರ್ಟ್ ಮೆಂಟ್ ಗಳಿಗೆ ನುಗ್ಗಿದ ನೀರು

ಧಾರವಾಡ prajakiran.com : ಮಂಗಳವಾರ ಸಂಜೆ ಧಾರವಾಡ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ತನ್ನ ಅಟ್ಟಹಾಸ ಮೆರೆದಿದ್ದಾನೆ. ಮಂಗಳವಾರ ಮಧ್ಯಾಹ್ನದವರೆಗೂ ಬಿಸಿಲು ಹಾಗೂ ಸೆಕೆಯ ವಾತಾವರಣವಿತ್ತು. ಮಧ್ಯಾಹ್ನದ ನಂತರ ಆಕಾಶದಲ್ಲಿ ಕಪ್ಪಿಟ್ಟ ಮೋಡಗಳು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಮಳೆ ಸುರಿಯುವಂತೆ ಮಾಡಿದವು. ಗಾಳಿ ಹಾಗೂ ಗುಡುಗು, ಸಿಡಿಲಿನ ಮಧ್ಯೆ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡವು. ಅದರಲ್ಲೂ ಬಾರಾಕೋಟ್ರಿ, […]

ಜಿಲ್ಲೆ

ಧಾರವಾಡದಲ್ಲಿ ಮಾಸ್ಕ್ ಧರಿಸದ ಜನರಿಗೆ ಮಹಾನಗರ ಪಾಲಿಕೆಯಿಂದ ದಂಡ….!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ೩ ರ ವತಿಯಿಂದ ನಗರದ ವಿವಿಧೆಡೆ ಕೋವಿಡ್-೧೯ ಹಿನ್ನಲೆಯಲ್ಲಿ ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುವ ಅಭಿಯಾನ ಆರಂಭಗೊಂಡಿದೆ. ವಲಯ ವ್ಯಾಪ್ತಿಯ ಲೈನ್ ಬಜಾರ್, ಲಕ್ಷ್ಮಿ ಟಾಕೀಸ್ ವೃತ್ತ, ರೇಲ್ವೆ ಸ್ಟೇಶನ್ ರಸ್ತೆ ಮತ್ತಿತರ ಕಡೆಗಳಲ್ಲಿ ಅಧಿಕಾರಿಗಳು ಸಂಚರಿಸಿ ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದ ೨೦ ಜನರಿಂದ ಒಟ್ಟು ೫೨೦೦ ರೂಪಾಯಿ ದಂಡ ವಸೂಲು […]

ಜಿಲ್ಲೆ

ಧಾರವಾಡದಲ್ಲಿ ಒಂದು ವಾರದಿಂದ ‌ಕಲುಷಿತ ನೀರು ಪೂರೈಕೆ…!

ಧಾರವಾಡ prajakiran.com : ಕಳೆದ ಒಂದು ವಾರದಿಂದ ಧಾರವಾಡದ ನಗರದ ವಿವಿಧ ಪ್ರಮುಖ ಕಡೆಗಳಲ್ಲಿ ‌ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಧಾರವಾಡದ ಸರಸ್ವತಪೂರ ಮತ್ತು ಸುತ್ತಮುತ್ತಲಿನ ನಗರದ ದೇವತಾರಾ ಅಪಾರ್ಟಮೆಂಟ್ ನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ನೀರು ವಾಸನೆ ಸಹ ಬರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪ್ರಜಾಕಿರಣ.ಕಾಮ್ ಎದುರು ದೂರಿದ್ದಾರೆ. ಈ ಕಲುಷಿತ ನೀರು ಪೂರೈಕೆಯಿಂದ ಅಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ‌ ಬೀರುತ್ತಿದೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ […]

ಜಿಲ್ಲೆ

ಧಾರವಾಡ ದಸರಾ ಜಂಬೂ ಸವಾರಿ ಉತ್ಸವಕ್ಕೆ ಚಾಲನೆ

ಧಾರವಾಡ prajakiran.com : ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಸಂಜೆ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಲಾಯಿತು. ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ದುರ್ಗಾದೇವಿಯ ಅಲಂಕೃತ ಬೆಳ್ಳಿ ಮೂರ್ತಿಯನ್ನು ಮರವಣಿಗೆ ಮೂಲಕ ಗಾಂಧಿನಗರದ ಸಾಯಿ ಬಾಬಾ ದೇವಸ್ಥಾನದ, ಮಾರ್ಗವಾಗಿ ಈಶ್ವರ ದೇವಸ್ಥಾನದ ಆವರಣದಲ್ಲಿನ ನಿರ್ಮಿಸಿದ್ದ ಭವ್ಯ ಮಂಟಪದಲ್ಲಿ ದೇವಿ ಮೂರ್ತಿಯನ್ನು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ  ಸುಮಂಗಲೆಯರು ಪಾಲ್ಗೊಂಡಿದ್ದರು.  ಧಾರವಾಡ ದಸರಾ ಜಂಬೂ ಸವಾರಿ ಉತ್ಸವ […]

ಜಿಲ್ಲೆ

ಗಜೇಂದ್ರಗಡದಲ್ಲಿ ವರಾಹ ಕಾಟಕ್ಕೆ ಸುಸ್ತಾದ ಜನತೆ…!

ಕಡಿವಾಣ ಹಾಕದ ಪುರಸಭೆ ಅಧಿಕಾರಿಗಳಿಗೆ ಜನತೆ ಹಿಡಿ ಶಾಪ ದಾವಲಸಾಬ ತಾಳಿಕೋಟಿ ಗಜೇಂದ್ರಗಡ : ಸರ್ಕಾರ ಸ್ವಚ್ಛತೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಕೋಟೆನಾಡು ಗಜೇಂದ್ರಗಡ ಮಾತ್ರ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಬಹುತೇಕ ಬಡಾವಣೆಗಳು ಸೇರಿದಂತೆ ಸಾರ್ವಜನಿಕ ಉದ್ಯಾನ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಹಂದಿಗಳ ಕಾಟ ಹೆಚ್ಚಾಗಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿದ್ದು, ಇದರಿಂದ ಸ್ಥಳೀಯ ಜನತೆ […]

ಜಿಲ್ಲೆ

ಧಾರವಾಡದಲ್ಲಿ ಕೈ ಕೈ ಮಿಲಾಯಿಸಿದ ಹಾಲಿ ಮಾಜಿ ಜಿಪಂ ಸದಸ್ಯರು

ಧಾರವಾಡ prajakiran.com : ಅನುದಾನ ರ್ದುಬಳಕೆ ಆರೋಪ ಕುರಿತಂತೆ ಹಾಲಿ ಮಾಜಿ ಜಿಪಂ ಸದಸ್ಯರು ಕೈ ಕೈ ಮಿಲಾಯಿಸಿದ ಘಟನೆ ಧಾರವಾಡ ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ನಡೆದಿದೆ. ಹಾಲಿ ಜಿಪಂ ಸದಸ್ಯಅಣ್ಣಪ್ಪ ದೇಸಾಯಿ ಹಾಗೂ ಮಾಜಿ ಜಿಪಂ ಉಪಾಧ್ಯಕ್ಷ ಶಿವಲಿಂಗ ಚಿಕ್ಕಣ್ಣವರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಸ್ಥಳದಲ್ಲಿದ್ದ ಗ್ರಾಮದ ಮುಖಂಡರು ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಗಳಗಿ ಹುಲಕೊಪ್ಪ ಗ್ರಾಪಂನಲ್ಲಿ 80 ಲಕ್ಷಅನುದಾನ ದುರುಪಯೋಗಗೊಂಡ ಆರೋಪದ ಹಿನ್ನಲೆಯಲ್ಲಿ  ಸಭೆ ಕರೆಯಲಾಗಿತ್ತು. ಈ […]