ಜಿಲ್ಲೆ

ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ಪದವೀಧರರ ಆಶಾಕಿರಣ

ಗದಗ Prajakiran.com : ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ಪದವೀಧರರ ಆಶಾಕಿರಣವಾಗಿದ್ದಾರೆ.

ಇವರು ಸಲ್ಲಾವುದ್ದೀನ್ ನಾಗರಕಟ್ಟಿ ನಿವೃತ್ತ ಗದಗ-ಬೇಟಗೇರಿ, ನಗರಸಭೆ, ನೌಕರರ ಸುಪುತ್ರರಾಗಿ ಹಾಗೂ ಜಿ.ಎಸ್.ನಾಗರಕಟ್ಟಿ ನ್ಯಾಯವಾದಿಗಳು ಮತ್ತು ದಿ|| ಟಿ.ಎಸ್.ನಾಗರಕಟ್ಟಿ, ಲೋಕಾಯುಕ್ತ ಕಛೇರಿ ನೌಕರರ ಇವರ ಕಿರಿಯ ಸಹೋದರರಾದ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗದಗನ ಸರ್ಕಾರಿ ಶಾಲೆ ನಂ 2 ರಲ್ಲಿ ವಿದ್ಯಾಭ್ಯಾಸ ಮಾಡಿ, ಪ್ರೌಢ ಶಿಕ್ಷಣವನ್ನು ಗದಗಿನ ವಿದ್ಯಾದಾನ ಸಮಿತಿಯಲ್ಲಿ ಪೂರೈಸಿ ಪದವಿಯನ್ನು ಜೆ.ಟಿ ಕಾಲೇಜನಲ್ಲಿ ಹಾಗೂ ಉನ್ನತ ಶಿಕ್ಷಣವನ್ನು ಆದರ್ಶ ಶಿಕ್ಷಣ ಸಮಿತಿಯಲ್ಲಿ ಪಡೆದಿದ್ದಾರೆ.

ತಮ್ಮ ಕಲಿಕಾ ಜೀವನದಲ್ಲಿ ವಿವಿಧ ಪ್ರಗತಿಪರ ಹಾಗೂ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ವಿವಿಧ ಸಮಾಜಮುಖಿ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಇವರು ಪದವಿ ನಂತರ ಉತ್ತರ ಕರ್ನಾಟಕದಲ್ಲಿನ ಪದವಿದರರ ಸಮಸ್ಯೆಗಳಿಗೆ ಸ್ಪಂದಿಸಲು ಉತ್ತರ ಕರ್ನಾಟಕ ಪದವೀಧರರ ಸಂಘವನ್ನು ರಚಿಸಿ, ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯ ಮಾಡುತ್ತಿರುತ್ತಾರೆ.

ಪ್ರಸಕ್ತ ಇವರು ಪಶ್ಚಿಮ ಪಧವಿದರರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಪದವೀಧರರಿಂದ ಪದವೀಧರರಿಗೋಸ್ಕರ ಎಂಬ ಧ್ಯೇಯೋದೊಂದಿಗೆ ಸ್ಪರ್ಧೆ ಮಾಡಿರುತ್ತಾರೆ.

ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಶುಲ್ಕ ರಹಿತ ಪರೀಕ್ಷೆ,
ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಕಡಿಮೆ ದರದಲ್ಲಿ ವಸತಿಗಾಗಿ ನಿರುದ್ಯೋಗ ಭವನ ನಿರ್ಮಿಸಲು ಪ್ರಯತ್ನಿಸುವುದು,
ಹೈ.ಕ ಮಾದರಿಯಲ್ಲಿ ಮುಂಬೈ-ಕರ್ನಾಟಕಕ್ಕೆ ಮೀಸಲಾತಿಗಾಗಿ ಪ್ರಯತ್ನಿಸುವುದು.

ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆ ನಿರ್ಮಿಸಲು ಪ್ರಯತ್ನಿಸುವುದು.
ಉತ್ತರ ಕರ್ನಾಟಕದ ಪದವಿಧರರ ಅಭಿವೃದ್ಧಿಗಾಗಿ ಪದವಿದರರ ನಿಗಮ ಮಂಡಳಿಯನ್ನು ಸ್ಥಾಪಿಸುವುದು.
ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವುದು.

ಅತಿಥಿ ಉಪನ್ಯಾಸಕರ ಗೌರವಧನವನ್ನು ರೂ 25,000-00 ಗಳಿಗೆ ಹೆಚ್ಚಿಸುವುದು.
ಎಸ್.ಡಿ.ಎಂ.ಸಿ ಕಾಯ್ದೆಯಿಂದ ಶಿಕ್ಷಕ ವೃಂದವನ್ನು ಬಿಡುಗಡೆಗೊಳಿಸುವುದು.
ಖಾಯಂಗೊಳ್ಳದ ಬೋಧಕೇತರ ಸಿಬ್ಬಂದಿಗಳನ್ನು ಖಾಯಂಗೊಳಿಸುವ ಪ್ರಯತ್ನ ಅಥವಾ ಗೌರವಧನವನ್ನು ರೂ 25,000-00 ಗಳಿಗೆ ಹೆಚ್ಚಿಸುವುದು.

ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯ ಮಾದರಿಯಲ್ಲಿ ಮುಂದುವರೆಸಲು ಪ್ರಯತ್ನಿಸುವುದು.

ವಿವಿಧ ಸರಕಾರಿ ಇಲಾಖೆಯಲ್ಲಿ ದಿನಗೂಲಿ ನೌಕರರನ್ನು ಖಾಯಂಗೊಳಿಸಲು ಮತು ಸಂಬಳವನ್ನು ಹೆಚ್ಚಿಸುವಂತೆ ಪ್ರಯತ್ನಿಸುವುದು.

ವಕೀಲ ಸಮುದಾಯದವರಿಗೆ ಬಿ.ಪಿ.ಎಲ್ ಕಾರ್ಡ ನೀಡುವ ಪ್ರಯತ್ನ,
ವಕೀಲ ಸಮುದಾಯದವರಿಗೆ ಉಚಿತ ಆರೋಗ್ಯ ಕಾರ್ಡ ನೀಡುವಂತೆ ಪ್ರಯತ್ನ
ಎಲ್.ಎಲ್.ಬಿ ಪದವೀಧರಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಪಿ.ಯು.ಸಿ ಮತ್ತುಕಾಲೇಜುಗಳಲ್ಲಿ ಕಾನೂನಿಗೆ ಸಂಬಂಧಿಸಿದಂತೆ ಒಂದು ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಿ ಎಲ್.ಎಲ್.ಬಿ ಪದವಿ ಹೊಂದಿದ ಪದವೀಧರರನ್ನು ಉಪನ್ಯಾಸಕರಾಗಿ ನೇಮಿಸುವ ಪ್ರಯತ್ನ.
ಸರಕಾರದಿಂದ ಪತ್ರಕರ್ತರಿಗೆ
ಉಚಿತ ಆರೋಗ್ಯ ಕಾರ್ಡ ಮತ್ತು ಎಲ್ಲ ಟೋಲ್ ನಾಕಾದಲ್ಲಿ ಉಚಿತ ಸಂಚಾರ ವ್ಯವಸ್ಥೆ ಮಾಡುವ ಪ್ರಯತ್ನ
ಹೊಸದಾಗಿ ವರದಿಗಾರ ವೃತ್ತಿ ಆರಂಭಿಸಿದವರಿಗೆ ಸರಕಾರದಿಂದ ಮೂರು ವರ್ಷದವರಿಗೆ ಕನಿಷ್ಠ ರೂ 5000 ಗಳನ್ನು ಗೌರವಧನ ನೀಡುವ ಪ್ರಯತ್ನ ಸೇರಿದಂತೆ
ವಿವಿಧ ಅಂಶಗಳನ್ನು ಗಮನದಲ್ಲಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಪದವಿಧರರ ಆಶಾಕಿರಣವಾಗಿದ್ದಾರೆ.

ಪಕ್ಷೇತರ ಅಭ್ಯರ್ಥಿ ಮಹ್ಮದ ಶಫಿವುದ್ದೀನ್ ಎಸ್.ನಾಗರಕಟ್ಟಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *