ಧಾರವಾಡ ಪ್ರಜಾಕಿರಣ.ಕಾಮ್ : 10 ಪುಡಿ ರೌಡಿಗಳ ತಂಡ ಧಾರವಾಡ ನಗರದ ಜಕನಿ ಭಾವಿಯ ಹತ್ತಿರ ಯುವಕನೊಬ್ಬನ ಮೇಲೆ ಮನ ಬಂದಂತೆ ತಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ವಿದ್ಯಾಕಾಶಿ, ಸುಸಂಸ್ಕೃತ ನಗರಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಮೊದಲಿನಂತೆ ಉಳಿದಿಲ್ಲ. ಬೀದಿ ರಂಪಾಟಗಳು, ಹೊಡೆದಾಟಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಿವೆ. ಅದರಲ್ಲೂ ಪುಡಿ ರೌಡಿಗಳ ಹಾವಳಿ ಧಾರವಾಡದಲ್ಲಿ ಮೀತಿ ಮೀರಿದೆ.
ಧಾರವಾಡ ಶಹರ ಪೊಲೀಸ್ ಠಾಣೆ ಹತ್ತಿರವೇ ಈ ಘಟನೆ ನಡೆದಿದ್ದು, ಪುಡಿ ರೌಡಿಗಳಿಗೆ ಭಯವೇ ಇಲ್ಲದಂತಾಗಿದೆ. ಧಾರವಾಡದ ಜಕಣಿ ಭಾವಿಯ ಹತ್ತಿರ ಗುರುವಾರ ತಡರಾತ್ರಿ ಹಲ್ಲೆ ನಡೆಸಲಾಗಿದೆ. ಯುವಕನೋರ್ವನಿಗೆ ಹತ್ತು ಜನ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನಾದರೂ ಧಾರವಾಡ ಪೊಲೀಸರು ಎಚ್ಚೆತ್ತುಕೊಂಡು ಪುಡಿರೌಡಿಗಳಿಗೆ ಪೊಲೀಸರು ಎಚ್ಚರಿಕೆ ಸಂದೇಶ ನೀಡಿ, ಧಾರವಾಡ ನಗರದ ನೆಮ್ಮದಿ ಕಾಪಾಡುತ್ತಾರಾ ಕಾಯ್ದು ನೋಡಬೇಕಾಗಿದೆ.