ಜಿಲ್ಲೆ

ಸಾರ್ವಜನಿಕರಿಂದ ನೇರವಾಗಿ ಫುಡ್ ಕಿಟ್ ,ಆಹಾರ ಧಾನ್ಯ ವಿತರಣೆಗೆ ನಿರ್ಬಂಧ

ಧಾರವಾಡ prajakiran.com : ಜಿಲ್ಲೆಯಾದ್ಯಂತ ಕರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸಂಘ,ಸಂಸ್ಥೆಗಳು ಮತ್ತು ವ್ಯಕ್ತಿಗಳು ನೇರವಾಗಿ ಆಹಾರ ಧಾನ್ಯದ ಕಿಟ್ ಹಾಗೂ ಇತರ ಸಾಮಗ್ರಿಗಳನ್ನು ವಿತರಿಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಕರೋನಾ ಪಾಸಿಟಿವ್ ಪ್ರಕರಣ ವರದಿಯಾಗಿರುವ ಸೋಂಕಿತ ವ್ಯಕ್ತಿಗಳು ವಿವಿಧ ಕಡೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿರುವುದು ಕಂಡು ಬಂದಿರುತ್ತದೆ. ಇದರಿಂದ ಕರೊನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ತೀವ್ರವಾಗುತ್ತಿದೆ. […]

ಜಿಲ್ಲೆ

ಕೋವಿಡ್ ನಿಂದ ಧಾರವಾಡ ಜಿಲ್ಲೆಯ ಇಬ್ಬರು ಗುಣಮುಖ

ಧಾರವಾಡ prajakiran.com : ಕೋವಿಡ್ ನಿಂದ ಗುಣಮುಖರಾಗಿರುವ ಇಬ್ಬರು ಮಕ್ಕಳನ್ನು ನಿನ್ನೆ ಮೇ 1ರಂದು ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ  ಪಿ- 234( 3.6 ವರ್ಷದ ಗಂಡು ಮಗು)   ಹಾಗೂ ಪಿ-235 ( 07 ವರ್ಷದ ಬಾಲಕಿ) ಇವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರನ್ನು 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರು ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಎಕ್ಸ್ ರೇ […]

ಜಿಲ್ಲೆ

ಹೊರರಾಜ್ಯಕ್ಕೆ ಹೋಗಲು ಸೇವಾ ಸಿಂಧು ವೆಬ್ ಸೈಟ್ ಮೂಲಕ ನೋಂದಣಿ  

ಧಾರವಾಡ prajakiran.com  : ಕೋವಿಡ್ 19 ರ ನಿಯಂತ್ರಣಕ್ಕಾಗಿ ಲಾಕ್ ಡೌನ್ -3 ಮುಂದುವರೆಯಲಿರುವುದರಿಂದ ಕರ್ನಾಟಕ ರಾಜ್ಯದಿಂದ ದೇಶದ ಬೇರೆ ರಾಜ್ಯಗಳಿಗೆ ಹೋಗುವವರು ಹಾಗೂ ಹೊರ ರಾಜ್ಯಗಳಿಂದ  ಕರ್ನಾಟಕಕ್ಕೆ ಬರುವವರು ಕರ್ನಾಟಕ ಸರ್ಕಾರದ ಸೇವಾಸಿಂಧು ಯೋಜನೆಯ sevasindhu.karnataka.gov.in ವೆಬ್ ಸೈಟ್  ಮೂಲಕ ತಮ್ಮ ಹೆಸರು , ವಿವರಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. “ಸೇವಾ ಸಿಂಧು” ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸುವ ಆನ್ ಲೈನ್ ವ್ಯವಸ್ಥೆಯಾಗಿದೆ. […]

ಜಿಲ್ಲೆ

ಕ್ಯಾನ್ಸರ್ ಪೀಡಿತನಿಗೆ ಔಷಧಿ ತಲುಪಿಸಿ ಮಾನವೀಯತೆ ಮೆರೆದ ಸಿಬ್ಬಂದಿ

ಧಾರವಾಡ prajakiran.com  :  ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಅವಧಿಯಲ್ಲಿ ಬಿಡುವಿಲ್ಲದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಅವರ ಸಿಬ್ಬಂದಿ ತಮ್ಮ ಕಾರ್ಯದೊತ್ತಡದ ಮಧ್ಯೆಯೂ ಮಾನವೀಯತೆಯಿಂದ ವೃದ್ಧೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಬೆಂಗಳೂರಿನಿಂದ ಔಷಧಿ ತರಿಸಿ ಕೊಟ್ಟಿದ್ದಾರೆ. ನಗರದ ಚರಂತಿಮಠ ಗಾರ್ಡನ  ಜೈ ಜಿನೇಂದ್ರ ಕಾಲನಿಯ ನಿವಾಸಿ ಶಕುಂತಲಾ ಎಂಬ ವಯೋವೃದ್ಧ ಮಹಿಳೆಯೊಬ್ಬರು ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಕ್ಯಾನ್ಸರ್ ಪೀಡಿತನಾಗಿರುವ ತನ್ನ 27 ವರ್ಷದ ಮೊಮ್ಮಗ ಸುನೀಲ ಅವಾರಿಗೆ […]

ಜಿಲ್ಲೆ

ಅಗತ್ಯ ವಸ್ತುಗಳ ಪೂರೈಕೆ ಸ್ಥಳದಲ್ಲಿ ವಿಡಿಯೋ , ಸಿಸಿ ಕ್ಯಾಮೆರಾ , ಡ್ರೋನ್ ಚಿತ್ರೀಕರಣ 

ಧಾರವಾಡ prajakiran.com : ಕೋವಿಡ್-19 ಕರೊನಾ ವೈರಸ್ ಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡಲು ಎಲ್ಲಾ ಸಮಯದಲ್ಲೂ ಸಾರ್ವಜನಿಕರ ಅಂತರ ನಿರ್ವಹಣೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯನ್ನು ತಡೆಗಟ್ಟಬೇಕು. ವಿಶೇಷವಾಗಿ ಹಣ್ಣು ಮತ್ತು ತರಕಾರಿ, ಕಿರಾಣಿ ಅಂಗಡಿಗಳು ಹಾಗೂ ಹಾಲಿನ ಬೂತ್ ಗಳು ಸೇರಿದಂತೆ ಆಹಾರ ಪದಾರ್ಥಗಳ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳ ದೈನಂದಿನ ವಿಡಿಯೋಗ್ರಾಫಿ ಅಥವಾ ಡ್ರೋನ್ ಚಿತ್ರೀಕರಣ ಪ್ರಾರಂಭಿಸಲು  ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ […]

ಜಿಲ್ಲೆ

ಹುಬ್ಬಳ್ಳಿಯಲ್ಲಿ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ : ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಶುಕ್ರವಾರ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಕೆಮ್ಮು,ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ  ಹುಬ್ಬಳ್ಳಿಯ ಶಾಂತಿನಗರದ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ . ಇದು ಧಾರವಾಡ ಜಿಲ್ಲೆಯ 10 ನೇ ಪ್ರಕರಣವಾಗಿದೆ. ಈಗಾಗಲೇ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಎಂಟು ಜನ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ 19 ಪ್ರಕರಣ ದೃಢ ಪಟ್ಟ ಬೆನ್ನಲ್ಲೇ ಹುಬ್ಬಳ್ಳಿಯ ಜನತೆ ಮತ್ತೇ ಆತಂಕಗೊಂಡಿದ್ದು, […]

ಜಿಲ್ಲೆ

ಲಾಕ್ ಡೌನ್ ವಿನಾಯಿತಿ ಕೇವಲ ಒಂದು ದಿನ : ಜಿಲ್ಲಾಡಳಿತದ ನಡೆಗೆ ಸ್ಥಳೀಯರ ವಿರೋಧ

ಧಾರವಾಡ prajakiran.com : ಲಾಕ್ ಡೌನ್ ವಿನಾಯಿತಿಯನ್ನು ಕೇವಲ ಒಂದು ದಿನದ ಮಟ್ಟಿಗೆ ನೀಡಿರುವುದಕ್ಕೆ  ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮೇ 3 ರವರೆಗೆ ಯಾದರೂ ಅದನ್ನುವಿಸ್ತರಿಸಿದರೆ ವ್ಯಾಪಾರಸ್ಥರಿಗೆ ಹಾಗೂ ಜನತೆಗೆ ಅನುಕೂಲವಾಗುತ್ತದೆ. ಜಿಲ್ಲಾಧಿಕಾರಿಗಳು ಧಾರವಾಡ ನಗರಕ್ಕೂ ಅನ್ವಯವಾಗುವಂತೆ ಲಾಕ್ ಡೌನ್  ವಿನಾಯಿತಿ ನೀಡಿ ಆದೇಶ ಹೊರಡಿಸಿರುವುದು ಮೇ 3 ರವರೆಗೆ ಸೋಮವಾರದಿಂದ ಗುರುವಾರದ ವರೆಗೆ ಮಾತ್ರ ಇರುತ್ತವೆ.  ಹಾಗಾದರೆ ನಾಳೆ ಒಂದೇ ದಿನ ಅದು ಅನ್ವಯಿಸಿದಂತಾಗುತ್ತದೆ. ಅಂದರೆ ಏ. 30 ರಂದು ಮಾತ್ರ ಕೆಲವು ವಿನಾಯಿತಿ ನೀಡಲಾಗಿದೆ. […]

ಜಿಲ್ಲೆ

ಮಾಲ್, ಕಾಂಪ್ಲೆಕ್ಸ್ ಹೊರತು ಪಡಿಸಿ ಎಲ್ಲಾ ಅಂಗಡಿಗಳಿಗೆ ಲಾಕ್ಡೌನ್ ವಿನಾಯಿತಿ

ಧಾರವಾಡ prajakiran.com  : ಕೊರೊನಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರದ ಗೃಹ ಮಂತ್ರಾಲಯವು ಘೋಷಿಸಿರುವ ಲಾಕ್‌ಡೌನ್ ಮೇ.೩ ರ ವರೆಗೆ ಮುಂದುವರೆಯಲಿದೆ. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಕರ್ನಾಟಕ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಎಪ್ರಿಲ್ ೨೨ ರಂದು ಪ್ರಕಟಿಸಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಆಧರಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಹುಬ್ಬಳ್ಳಿ ನಗರ ಹೊರತುಪಡಿಸಿ ಅವಳಿ ನಗರದ […]

ಜಿಲ್ಲೆ

ಪಡಿತರ ವಿತರಣೆ ನಿಗಾಕ್ಕೆ ಜಾಗೃತ ತಂಡಗಳ ರಚನೆ : ಮೋಸ ಎಸಗುವ ನ್ಯಾಯಬೆಲೆ ಅಂಗಡಿ ಲೈಸನ್ಸ್ ರದ್ದು

ಧಾರವಾಡ prajakiran.com : ಕೊರೊನಾ ಸಂಕಷ್ಟ ಕಾಲದಲ್ಲಿ ಯಾರಿಗೂ ರೇಷನ್ ನಿರಾಕರಿಸಬಾರದು.  ಕಾರ್ಡ್ ಇಲ್ಲದವರಿಗೆ  ಸೌಲಭ್ಯ  ಒದಗಿಸಬೇಕು. ಕೊರೊನಾದ ಸಂಕಷ್ಟದ ಸಮಯದಲ್ಲಿ ಯಾವ ಕಾರ್ಡ ಗಳನ್ನೂ ಅನರ್ಹಗೊಳಿಸಬಾರದು. ತೂಕ, ಅಳತೆಯಲ್ಲಿ ಮೋಸ ಹಾಗೂ ಪಡಿತರದಾರರಿಂದ ಸೇವಾ ವೆಚ್ಚದ ನೆಪದಲ್ಲಿ ಹಣ ವಸೂಲಿ ಮಾಡುವ ನ್ಯಾಯ ಬೆಲೆ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವರಾದ ಕೆ. ಗೋಪಾಲಯ್ಯ ಅವರು ಖಡಕ್ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ […]

ಜಿಲ್ಲೆ

ಕೋವಿಡ್ ಚಿಕಿತ್ಸೆ ಉಪಕರಣಗಳು, ಸುರಕ್ಷತಾ ಸಾಧನಗಳಿಗೆ ಆದ್ಯತೆ

ಧಾರವಾಡ prajakiran.com : ಕೋವಿಡ್-೧೯ ಚಿಕಿತ್ಸೆ ಪ್ರಯೋಗಾಲಯ ಉಪಕರಣಗಳು ಹಾಗೂ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಒದಗಿಸುವ ಸುರಕ್ಷತಾ ಸಾಮಗ್ರಿಗಳ ಗುಣಮಟ್ಟ ಮತ್ತು ದಾಸ್ತಾನು ಸಂಗ್ರಹದ ಬಗ್ಗೆ ಆದ್ಯತೆಯಡಿ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕರೊನಾ ನಿಯಂತ್ರಣ ಕರ್ತವ್ಯಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿಮ್ಸ ನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆಸ್ಪತ್ರೆ, […]