ಜಿಲ್ಲೆ

ಧಾರವಾಡ ದಸರಾ ಜಂಬೂ ಸವಾರಿ ಉತ್ಸವಕ್ಕೆ ಚಾಲನೆ

ಧಾರವಾಡ prajakiran.com : ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಸಂಜೆ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಲಾಯಿತು.

ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ದುರ್ಗಾದೇವಿಯ ಅಲಂಕೃತ ಬೆಳ್ಳಿ ಮೂರ್ತಿಯನ್ನು ಮರವಣಿಗೆ ಮೂಲಕ ಗಾಂಧಿನಗರದ ಸಾಯಿ ಬಾಬಾ ದೇವಸ್ಥಾನದ, ಮಾರ್ಗವಾಗಿ ಈಶ್ವರ ದೇವಸ್ಥಾನದ ಆವರಣದಲ್ಲಿನ ನಿರ್ಮಿಸಿದ್ದ ಭವ್ಯ ಮಂಟಪದಲ್ಲಿ ದೇವಿ ಮೂರ್ತಿಯನ್ನು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ಮೆರವಣಿಗೆಯಲ್ಲಿ ಕುಂಭ ಹೊತ್ತ  ಸುಮಂಗಲೆಯರು ಪಾಲ್ಗೊಂಡಿದ್ದರು.  ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯ ಅಧ್ಯಕ್ಷ ಗುರುರಾಜ ಹುಣಸಿಮರದ, ಪಿ.ಎಚ್.ಕಿರೇಸೂರ, ಸುಭಾಸ ಮೋರೆ, , ಗಣಪತರಾವ್ ಮುಂಜಿ, ನಾರಾಯಣ ಕೋಪರ್ಡೆ,ರಾಜೇಂದ್ರ ಕಪಲಿ,ಕರಿಯಪ್ಪ ಸುಣಗಾರ, ವಿಶಾಲ ಮರಡಿ,  ಮಂಜುಳಾ ಮುಂಜಿ, ಅನುರಾಧಾ ಆಕಳವಡಿ, ಸಂಗೀತಾ ಪಾಪಳೆ, ರಾಧಾ ಹಿತಲಮನಿ,ಶ್ರೀ ಸಾಯಿಲಲಿತ ಭಜನಾ,ಹಾಗೂ ಶ್ರೀದೇವಿ ಮಹಿಳಾ ಮಂಡಳ, ಕಸ್ತೂರಬಾ ಮಹಿಳಾ ಮಂಡಳದ ಸದಸ್ಯರು ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *