ಜಿಲ್ಲೆ

ಧಾರವಾಡದ ನವಲೂರ ಬಳಿ ಮತ್ತೆ ಕುಸಿತಕಂಡ ಬಿಆರ್ ಟಿ ಎಸ್ ಕಳಪೆ ಕಾಮಗಾರಿ  

ಧಾರವಾಡ prajakiran.com : ಇತ್ತೀಚಿಗಷ್ಟೇ ಕುಸಿತ ಕಂಡು ಹುಬ್ಬಳ್ಳಿ-ಧಾರವಾಡದ ಜನತೆಯಿಂದ ಹಿಗ್ಗಾಮುಗ್ಗಾ ಛೀಮಾರಿ ಹಾಕಿಸಿಕೊಂಡು ಅಪಮಾನಗೊಂಡಿದ್ದ ಬಿ ಆರ್ ಟಿ ಎಸ್ ಕಳಪೆ ಕಾಮಗಾರಿ ಅವಾಂತರ ಮತ್ತೆ ಮುಂದುವರೆದಿದೆ. ಈ ಬಾರಿಯೂ ನವಲೂರು ಬಳಿಯಿಂದ ಜೋಗೆಲ್ಲಾಪುರ ಹೋಗುವ ರಸ್ತೆಯಲ್ಲಿ ಸಿಮೆಂಟ್ ಬ್ಲ್ಯಾಕ್ ಗಳು ಕುಸಿದುಬಿದ್ದಿವೆ. ಅದನ್ನು ನೋಡಿದರೆ ಬಿ ಆರ್ ಟಿ ಎಸ್ ಕಾಮಗಾರಿ ಬಗ್ಗೆ ಮತ್ತೆ ಅನುಮಾನ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ, ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹೇಳಿದ್ದು ಸತ್ಯ ಎಂಬುದು ಸಾಬೀತಾಗಿದೆ. […]

ಜಿಲ್ಲೆ

ವಿಶೇಷ ಶಿಕ್ಷಕರ ರಾಜ್ಯಪ್ರಶಸ್ತಿಗೆ ಅರ್ಜಿ ಆಹ್ವಾನ

ಧಾರವಾಡ prajakiran.com : ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ , ಸಂಸ್ಥೆ ಹಾಗೂ ವಿಶೇಷ ಶಾಲೆಗಳಲ್ಲಿ ಕರ್ತವ್ಯ ನಿರ್ವಯಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡಲು  ಅರ್ಜಿ ಅಹ್ವಾನಿಸಿದೆ.  ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರು ಹಾಗೂ ವಿಶೇಷ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ನಿಗದಿತ ಅರ್ಜಿ ನಮೂನೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ. ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ನೆಲಮಹಡಿ, ಮಿನಿವಿಧಾನಸೌಧ, ಧಾರವಾಡ ಇವರ […]

ಜಿಲ್ಲೆ

ಧಾರವಾಡದಲ್ಲಿ ಜೀವ ಅಂಗೈಯಲ್ಲಿ ಹಿಡಿದು ಜೀವನ ನಡೆಸುತ್ತಿರುವ ನಿವಾಸಿಗಳು

ಧಾರವಾಡ prajakiran.com : ಅನೇಕರು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದು ಜೀವನ ನಡೆಸುತ್ತಿರುವ ಘಟನೆ ಧಾರವಾಡದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೈಮೇಲೆ ವಿದ್ಯುತ್ ತಂತಿ ಹರಿದು ಬೀಳುವ ಆತಂಕ ಎದುರಾಗಿದ್ದರೂ ಹೆಸ್ಕಾಂ ಮಾತ್ರ ಜಾಣ ಕುರುಡುತನ ತೋರಿಸುತ್ತಿದೆ. ಧಾರವಾಡದ ಎತ್ತಿನಗುಡ್ಡ ರಸ್ತೆ ಹಾಶ್ಮೀನಗರದ 1 st cross ನಿವಾಸಿಗಳ ಸಮಸ್ಯೆಹೇಳತೀರದಾಗಿದೆ. ಈ ಹಿನ್ನಲೆಯಲ್ಲಿ ವಿದ್ಯುತ್ ತಂತಿಗಳು ಹಾಗೂ ವಿದ್ಯುತ ಕಂಬ ಸರಿಪಡಿಸುವಂತೆ ನಿವಾಸಿಗಳು ಒತ್ತಾಯ ಮಾಡಿದ್ದಾರೆ. ಕಳೆದ 7 ತಿಂಗಳಿಂದ ಹೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಮನವಿ […]

ಜಿಲ್ಲೆ

ಗದಗನಲ್ಲಿ ಕೆಸರು ಗುಂಡಿಗಳ ಮೇಲೆ ವಾಹನ ಸವಾರರ ಸರ್ಕಸ್‌

ರಸ್ತೆ ದುರಸ್ತಿಗೆ ಆಟೋ ಸಂಘ ಒತ್ತಾಯ ಹದಗೆಟ್ಟ ಹೊಸ ಬಸ್ ನಿಲ್ದಾಣ ರಸ್ತೆ : ಜನರ ಪರದಾಟ ಗದಗ prajakiran.com :  ಜಿಲ್ಲಾ ಕೇಂದ್ರವಾದ ಗದಗನ ಹೊಸ ಬಸ್ ನಿಲ್ದಾಣದ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಆದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ ಮೌನ ವಹಿಸಿದ್ದಾರೆ ಎಂದು   ಆರೋಪಿಸಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಜೈ ಭೀಮ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಂಗಳವಾರ ಸಂಜೆ ಬಸ್ […]

ಜಿಲ್ಲೆ

ಕೊಪ್ಪಳದ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣಾಚಾರ್ಯ ಪ್ಯಾಟಿ ಇನ್ನಿಲ್ಲ

ಧಾರವಾಡ  prajakiran.com : ಕೊಪ್ಪಳದ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣಾಚಾರ್ಯ ಪ್ಯಾಟಿ  (82) ಭಾನುವಾರ ಸೆ.27 ರಂದು  ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೊಪ್ಪಳ ತಾಲೂಕಿನ ಗುನ್ನಳ್ಳಿ, ರಾಯಚೂರು ಜಿಲ್ಲೆಯ ಉಡುಮಗಲ್ – ಖಾನಾಪುರ,  ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ,ಹಿರೇವಂಕಲಕುಂಟಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ,ಕಿನ್ನಾಳದಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಮೃತರು, ಪತ್ನಿ ರಾಧಾಬಾಯಿ, ಮಕ್ಕಳಾದ ಪತ್ರಕರ್ತರಾದ  ಆನಂದತೀರ್ಥ ಪ್ಯಾಟಿ,  ಟಿ ವಿ 9 ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಸೇರಿದಂತೆ ಇಬ್ಬರು ಪುತ್ರಿಯರು, ಅಳಿಯಂದಿರು,ಸೊಸೆಯಂದಿರು ಸೇರಿ ಅಪಾರ ಬಂಧು […]

ಜಿಲ್ಲೆ

ಕುಂದಗೋಳದಲ್ಲಿ ಪತಿ ಸಾವಿನ ಆಘಾತ : ಪತ್ನಿಯೂ ಹೃದಯಾಘಾತದಿಂದ ಸಾವು

ಕುಂದಗೋಳ (ಧಾರವಾಡ) prajakiran.com : ಸತಿ–ಪತಿಗಳು ಒಂದಾದ ಭಕ್ತಿ ಹಿತವಾಗಿರ್ಪ್ಪುದು ಶಿವನಿಗೆ ಎಂಬುವ ಉಕ್ತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.  ಫರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಭಾನುವಾರ ಬೆಳಿಗ್ಗೆ 6-30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫರಿದ್ಧೀನ್ ಪಠಾಣ್ (70) ಪತಿಯ ಸಾವಿನ ದು:ಖ ತಾಳಲಾರದೆ  ಸಾಯಂಕಾಲ 4 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ. […]

ಜಿಲ್ಲೆ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಮಾಜಿ  ಖಜಾಂಚಿ ಗಂಗಾಧರಮಠ ನಿಧನ

ಧಾರವಾಡ prajakiran.com : ಇಲ್ಲಿಯ ಪ್ರತಿಷ್ಠಿತ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಮಾಜಿ ಖಜಾಂಚಿ, ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ನಿವೃತ್ತ ಸಿವ್ಹಿಲ್ ಇಂಜನೀಯರ್ ವೀರಭದ್ರಯ್ಯ ಶಂಕ್ರೆಯ್ಯ ಗಂಗಾಧರಮಠ (೯೪) ಶನಿವಾರ ನಿಧನ ಹೊಂದಿದರು.  ಲೋಕೋಪಯೋಗಿ ಇಲಾಖೆಯಲ್ಲಿ ಸಿವ್ಹಿಲ್ ಇಂಜನೀಯರ್ ಆಗಿ ಶ್ಲಾö್ಯಘನೀಯ ಕಾರ್ಯಮಾಡಿ ಸಿವ್ಹಿಲ್ ಕಾಮಗಾರಿಗಳ ನಿರ್ವಹಣೆಗೆ ತಮ್ಮದೇ ಆದ ಹೊಸ ಚಿಂತನೆಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ನಿವೃತ್ತಿಯ ನಂತರ ನಗರದ ಪ್ರತಿಷ್ಠಿತ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಸುಮಾರು ೩೦ ವರ್ಷಗಳ ಕಾಲ […]

ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಎಲ್ಲಾ ಹೊರರೋಗಿಗಳಿಗೆ ಕಡ್ಡಾಯ ತಪಾಸಣೆ

ಖಾಸಗಿ ಆಸ್ಪತ್ರೆಗಳಲ್ಲಿ ಬಡರೋಗಿಗಳ  ಉಚಿತ ಪರೀಕ್ಷೆ ಎಲ್ಲಾ ಹೊರ ರೋಗಿಗಳನ್ನು ತಪಾಸಣೆಗೊಳಪಡಿಸಿ ಕೊರೊನಾ ನಿಯಂತ್ರಿಸಿ   ಧಾರವಾಡ prajakiran.com : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಒಳರೋಗಿಗಳು ಹಾಗೂ ಎಲ್ಲಾ ಹೊರರೋಗಿಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು. ಖಾಸಗಿ ಆಸ್ಪತ್ರೆಗಳು ತಪಾಸಣೆಗೆ ವಿಧಿಸುವ ಶುಲ್ಕ ಭರಿಸಲು ಸಾಧ್ಯವಾಗದ ರೋಗಿಗಳ ಸ್ವ್ಯಾಬ್ ಸಂಗ್ರಹಿಸಿ ಸರ್ಕಾರದ ಕಿಮ್ಸ್ ಮತ್ತು ಡಿಮ್ಹಾನ್ಸ್ ಪ್ರಯೋಗಾಲಯಗಳಿಗೆ ಕಳುಹಿಸಿದರೆ ಉಚಿತವಾಗಿ ಪರೀಕ್ಷಿಸಿ ವರದಿ ನೀಡಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು. ಅವರು ಜಿಲ್ಲಾಧಿಕಾರಿಗಳ […]

ಜಿಲ್ಲೆ

ಧಾರವಾಡದಲ್ಲಿ ಸೆ.೨೫ ರಿಂದ ಮಾಸ್ಕ್ ಬಳಕೆ ಉಲ್ಲಂಘಿಸುವವರಿಗೆ ದಂಡ

ವಿಶೇಷ ಕಾರ್ಯಾಚರಣೆಗೆ ಧಾರವಾಡ ಜಿಲ್ಲಾಡಳಿತ ನಿರ್ಧಾರ ಇದುವರೆಗೆ ೩೦ ಲಕ್ಷ ರೂ. ದಂಡ ಆಕರ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಧಾರವಾಡ prajakiran.com : ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಮಾಸ್ಕ್ ಬಳಕೆ ಮಾಡದವರಿಂದ ಜಿಲ್ಲೆಯಲ್ಲಿ ಈಗಾಗಲೇ ೩೦ ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ದಂಡ ವಿಧಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸಲು  ನಾಳೆ ಸೆ.೨೫ ರಿಂದ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ […]

ಆಧ್ಯಾತ್ಮ ಜಿಲ್ಲೆ

ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ೪,೪೭೫ ಚಾಲ್ತಿ, ೧೦ ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥ  

೨೫ ಕೋಟಿಗಿಂತ ಹೆಚ್ಚು ಮೊತ್ತ ವಸೂಲು ಧಾರವಾಡ  prajakiran.com :  ಇ-ಲೋಕ್ ಅದಾಲತ್‌ನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು.    ಈ ಲೋಕಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾಗಿರುವ ಉಮೇಶ್ ಎಮ್. ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ ೧೩ ಪೀಠಗಳನ್ನು, ಹುಬ್ಬಳ್ಳಿಯಲ್ಲಿ ೧೬ ಪೀಠಗಳನ್ನು, ಕುಂದಗೋಳ, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ ೨ ಪೀಠವನ್ನು ಸ್ಥಾಪಿಸಲಾಗಿತ್ತು. ವಿವಿಧ ರೀತಿಯ ಸುಮಾರು ೭,೬೪೫ ಕ್ಕಿಂತ […]