ಜಿಲ್ಲೆ

ಧಾರವಾಡದ ನವಲೂರ ಬಳಿ ಮತ್ತೆ ಕುಸಿತಕಂಡ ಬಿಆರ್ ಟಿ ಎಸ್ ಕಳಪೆ ಕಾಮಗಾರಿ  

ಧಾರವಾಡ prajakiran.com : ಇತ್ತೀಚಿಗಷ್ಟೇ ಕುಸಿತ ಕಂಡು ಹುಬ್ಬಳ್ಳಿ-ಧಾರವಾಡದ ಜನತೆಯಿಂದ ಹಿಗ್ಗಾಮುಗ್ಗಾ ಛೀಮಾರಿ ಹಾಕಿಸಿಕೊಂಡು ಅಪಮಾನಗೊಂಡಿದ್ದ ಬಿ ಆರ್ ಟಿ ಎಸ್ ಕಳಪೆ ಕಾಮಗಾರಿ ಅವಾಂತರ ಮತ್ತೆ ಮುಂದುವರೆದಿದೆ.

ಈ ಬಾರಿಯೂ ನವಲೂರು ಬಳಿಯಿಂದ ಜೋಗೆಲ್ಲಾಪುರ ಹೋಗುವ ರಸ್ತೆಯಲ್ಲಿ ಸಿಮೆಂಟ್ ಬ್ಲ್ಯಾಕ್ ಗಳು ಕುಸಿದುಬಿದ್ದಿವೆ.

ಅದನ್ನು ನೋಡಿದರೆ ಬಿ ಆರ್ ಟಿ ಎಸ್ ಕಾಮಗಾರಿ ಬಗ್ಗೆ ಮತ್ತೆ ಅನುಮಾನ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ, ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹೇಳಿದ್ದು ಸತ್ಯ ಎಂಬುದು ಸಾಬೀತಾಗಿದೆ.

ಹೀಗಾಗಿ ಈ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರ ಮೇಲೆ ಹಾಗೂ ಬಿ ಆರ್ ಟಿ ಎಸ್ ಇಂಜಿನಿಯರ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬ ಶಾಸಕ ಬೆಲ್ಲದ ಬೇಡಿಕೆಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.

ಈಗಲಾದರೂ ರಾಜ್ಯ ಸರಕಾರ ಅವರ ವಿರುದ್ದ ಕಾನೂನು ಸಮರ ಸಾರುತ್ತಾ ಅಥವಾ ಕಣ್ಣಾ ಮುಚ್ಚಾಲೆ ಆಡುತ್ತಾ ಜನರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುತ್ತಾ ಕಾಲಹರಣ ಮಾಡುತ್ತಾ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

ಒಟ್ಟಾರೆ ಬಿ ಆರ್ ಟಿ ಎಸ್ ಕಳಪೆ ಕಾಮಗಾರಿಯ ಮುಖವಾಡ ದಿನದಿಂದ ದಿನಕ್ಕೆ ಕಳಚುತ್ತಲೇ ಇದೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಮಾತ್ರ ಇದರ ಬಗ್ಗೆ ಚಕಾರವೆತ್ತದೆ ಮೌನವಹಿಸಿರುವುದು ನೋಡಿದರೆ ಎಲ್ಲರ ಮೇಲೆ ಅನುಮಾನ ಮೂಡಿಸುವಂತಾಗಿದೆ ಎಂದರೆ ತಪ್ಪಾಗಲಾರದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *