ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳ ಹೊಸ ಮೀಸಲಾತಿ ಪ್ರಕಟ

ಹುಬ್ಬಳ್ಳಿ-ಧಾರವಾಡ prajakiran. com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳ ಹೊಸ ಮೀಸಲಾತಿ ಪ್ರಕಟಗೊಂಡಿದೆ. ಹಳೆ ಮೀಸಲಾತಿಗೆ ಆಕ್ಷೇಪಣೆ ಬಂದ ಬಳಿಕ ಆಕ್ಷೇಪಣೆಗಳನ್ನು ಪರಿಗಣಿಸಿಗೆ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರ ಹೊರಡಿಸಲಾಗಿದೆ. ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.   Share on: WhatsApp

ಅಪರಾಧ

ಮದುವೆ ಪ್ರಸ್ತಾಪ ರದ್ದಾಗಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಮುಂದಾದ ಯುವಕ

ಹುಬ್ಬಳ್ಳಿ prajakiran.com : ಮದುವೆಯಾಗಲು ಯುವತಿ ‌ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ  ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ  ಹಳೆ ಹುಬ್ಬಳ್ಳಿಯ ಕಸಾಯಿ ಓಣಿಯಲ್ಲಿ ಶನಿವಾರ ನಡೆದಿದೆ. ಮಲ್ಲಿಕ್  ಬೇಪಾರಿ (30) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ. ಮಲ್ಲಿಕ್ ಕೆಲವು ದಿನಗಳಿಂದ ಯುವತಿಯೊಬ್ಬಳನ್ನ ಪ್ರಿತಿಸುತ್ತಿದ್ದ. ಯುವತಿ‌ಮನೆಗೆ ತೆರಳಿ ಮದುವೆ ಮಾಡಿಕೊಳ್ಳುವ ಕುರಿತು ಪ್ರಸ್ತಾಪ ಮಾಡಿದ್ದ. ಆದ್ರೆ ಮಲ್ಲಿಕನ ಮದುವೆ ಪ್ರಸ್ತಾಪವನ್ನು ಯುವತಿ ಮನೆಯವರು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಯುವಕ ಮೈ […]

ರಾಜ್ಯ

ಹುಬ್ಬಳ್ಳಿ-ಧಾರವಾಡ ನೂತನ ಡಿಸಿಪಿಯಾಗಿ ಕೆ. ರಾಮರಾಜನ್ ನೇಮಕ

ಹುಬ್ಬಳ್ಳಿ-ಧಾರವಾಡ prajakiran.com ಎಕ್ಸಕ್ಲೂಸಿವ್ : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕಾನೂನು ಮತ್ತು ಸುವ್ಯವಸ್ಥೆ ನೂತನ ಡಿಸಿಪಿಯಾಗಿ ಕೆ. ರಾಮರಾಜನ್ ಅವರನ್ನು ನೇಮಕಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪೃವೀಣ ಸೂದ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಕೆ. ರಾಮರಾಜನ್ ಅವರನ್ನು ಮುಂದಿನ ಆದೇಶದವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಡಿಸಿಪಿ ಹುದ್ದೆಯಲ್ಲಿ ಓಓಡಿ ಮೇಲೆ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ. ಕಳೆದ ತಿಂಗಳು ಅ. 21ರಂದು ಧಾರವಾಡ ಎಸ್ಪಿಯಾಗಿ ವರ್ಗಾವಣೆ ಗೊಂಡ […]

ಅಂತಾರಾಷ್ಟ್ರೀಯ

ಹುಬ್ಬಳ್ಳಿ ಚನ್ನಮ್ಮ ಸರ್ಕಲ್ ನಲ್ಲಿ ರಾಜ್ಯದ ಸಂಸದರನ್ನು ಹರಾಜು ಹಾಕಿದ ವಾಟಾಳ್ ನಾಗರಾಜ್

ಹುಬ್ಬಳ್ಳಿ prajakiran.com : ರಾಜ್ಯದ ೨೫ ಬಿಜೆಪಿ ಲೋಕಸಭಾ ಸದಸ್ಯರಿಂದ ರಾಜ್ಯ ಅಭಿವೃದ್ಧಿ ಆಗದ ಹಿನ್ನೆಲೆಯಲ್ಲಿ, ಲೋಕಸಭಾ ಸದಸ್ಯರನ್ನು ಹರಾಜು ಹಾಕುವುದರ ಮೂಲಕ ವಾಟಾಳ್ ನಾಗಾರಾಜ್ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ವಿನೂತನವಾಗಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಉತ್ತರ ಕರ್ನಾಟಕ ಪ್ರವಾಹ, ಅತೀವೃಷ್ಠಿ, ಅನಾವೃಷ್ಠಿಯಿಂದ ತತ್ತರಿಸಿದೆ. ಆದರೂ ಉತ್ತರ ಕರ್ನಾಟಕವನ್ನು ಹಾಗೂ ರಾಜ್ಯ ಸರ್ಕಾರವಾಗಲಿ ಅಥವಾ ರಾಜ್ಯದ ಲೋಕಸಭಾ ಸದಸ್ಯರಾಗಲಿ ಅನುದಾನ ತಂದುಅಭಿವೃದ್ಧಿ ಮಾಡುತ್ತಿಲ್ಲ. ಆ ಕಾರಣಕ್ಕಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರನ್ನು […]

ರಾಜ್ಯ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲುದಾರಿಕೆಯ ವಿಭವ ಇಂಡಸ್ಟ್ರೀಸ್ ನಲ್ಲಿ ಬೆಂಕಿಯಿಂದ 4.5 ಕೋಟಿ ನಷ್ಟ

ಹುಬ್ಬಳ್ಳಿ prajakiran.com : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲುದಾರಿಕೆಯ ವಿಭವ ಇಂಡಸ್ಟ್ರೀಸ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಪರಿಣಾಮ ಅಂದಾಜು ಒಟ್ಟು 4.5 ಕೋಟಿ ನಷ್ಟ ಆಗಿದೆ ಎಂದು ನಿರ್ದೇಶಕ ಎಚ್.ಎನ್. ನಂದಕುಮಾರ ತಿಳಿಸಿದ್ದಾರೆ. ಕಾರ್ಖಾನೆಯ ಉತ್ಪಾದನಾ ವಿಭಾಗದಲ್ಲಿ ಕಾಣಿಸಿಕೊಂಡ ಶಾಟ್ ಸರ್ಕ್ಯೂಟ್ ನ ಬೆಂಕಿ ಕೆನ್ನಾಲಿಗೆ ಪೊರಕೆ ತಯಾರಿಕಾ ಘಟಕದ ವರೆಗೆ ವಿಸ್ತರಿಸಿದೆ.  ಇದರಿಂದಾಗಿ  ಸುಮಾರು 8 ಟ್ರಕ್ ಪೊರಕೆ ಹುಲ್ಲು ಸುಟ್ಟು ಕರಕಲಾಗಿದೆ. ಜೊತೆಗೆ ಕೆಮಿಕಲ್ಸ್, ಪರಪ್ಯೂಮ್, ಹೈಡ್ರೋಕಾರ್ಬನ್, ಫಿನೈಲ್ ಸೇರಿದಂತೆ ಅನೇಕ ವಸ್ತುಗಳುಬೆಂಕಿಗೆ ಆಹುತಿಯಾಗಿವೆ […]

ರಾಜ್ಯ

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ಲಾಬೂರಾಮ್ ಅಧಿಕಾರ ಸ್ವೀಕಾರ

ಹುಬ್ಬಳ್ಳಿ-ಧಾರವಾಡ prajakiran. com : ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಲಾಬೂರಾಮ್ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಪೊಲೀಸ್ ಆಯುಕ್ತ ಆರ್. ದಿಲೀಪ್ ಲಾಬೂರಾಮ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಹುಬ್ಬಳ್ಳಿ ಧಾರವಾಡ ಅವಳಿನಗರ ಕಮಿಷನರೇಟ್ ಕಚೇರಿ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅದ್ದೂರಿ ಸ್ವಾಗತ ಕೋರಿದರು. ಬಳಿಕ ನೂತನ ಪೋಲೀಸ್ ಆಯುಕ್ತ ಲಾಬೂರಾಮ್ ಅವರು ಮಾತನಾಡಿ, ಇದೇ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕ […]

ರಾಜ್ಯ

ಸರ್ಕಾರ ಮೀಸಲಾತಿ ಹೆಚ್ಚಿಸಲು ವಿಳಂಬ ನೀತಿ : ಪ್ರಸನ್ನಾನಂದ ಸ್ವಾಮೀಜಿ

ಹುಬ್ಬಳ್ಳಿ prajakiran.com : ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ವಾಲ್ಮೀಕಿ ಸಮಾಜದ ಬಂಧುಗಳಿದ್ದು, ಅವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಪರಮಪೂಜ್ಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಆಗ್ರಹ ಮಾಡಿದರು. ಅವರು ಬುಧವಾರ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಟ್ಟದ ಸಮಾಲೋಚನಾ  ಸಭೆಯಲ್ಲಿ ಮದಕರಿನಾಯಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಮೀಸಲಾತಿ ಹೆಚ್ಚಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಸಮಗ್ರವಾಗಿ ಸಮಾಜದ ಬಂಧುಗಳಿಗೆ ತಿಳಿಸಿದರು. ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಜಿಲ್ಲಾ […]

ರಾಜ್ಯ

ರಾಜ್ಯದ ಶಾಲಾ ಕಾಲೇಜುಗಳ ದಸರಾ ರಜೆ ರದ್ದುಗೊಳಿಸಿರುವ ಆದೇಶ ಪುನರ್ ಪರಿಶೀಲಿಸುವಂತೆ ಒತ್ತಾಯ

ಹುಬ್ಬಳ್ಳಿ prajakiran.com : ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು  ಅ.1 ರಂದು 2020-21 ನೇ ಸಾಲಿನ ದಸರಾ ರಜೆ ರದ್ದುಗೊಳಿಸಿ  ಆದೇಶ ಮಾಡಿ ವಿದ್ಯಾಗಮ ಕಾರ್ಯಕ್ರಮ ಮುಂದುವರೆಸುವಂತೆ ಆದೇಶಿಸಿದ್ದಾರೆ.  ಆದರೆ ಈ ಆದೇಶವು ಕೆ ಸಿ ಎಸ್ ಆರ್ ನಿಯಮಾವಳಿಗಳಿಗೆ ‌ತದ್ವಿರುದ್ದವಾಗಿದೆ ಶಿಕ್ಷಕರು ರಜೆ ಸಹಿತ ನೌಕರರ ವೃಂದದಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರಿಗೆ ತೊಂದರೆಯಾಗಲಿದೆ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ  ಹುಬ್ಬಳ್ಳಿಆಪಾದಿಸಿದೆ.  ರಾಜ್ಯದಲ್ಲಿ  ಕೋವಿಡ್ 19 ಸಾಂಕ್ರಾಮಿಕ […]

ಅಪರಾಧ

ಟಾಟಾಎಸ್ -ಬುಲೇರೋ ನಡುವೆ ಮುಖಾಮುಖಿ ಡಿಕ್ಕಿ : 7 ಜನ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನ ಗಂಭೀರ

ಬೆಳಗಾವಿ prajakiran.com : ಟಾಟಾಎಸ್ ಹಾಗೂ ಬುಲೇರೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ  ಪರಿಣಾಮ ಸ್ಥಳದಲ್ಲೇ ಎಳು ಜನರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಹತ್ತಿರ ಶುಕ್ರವಾರ ರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದಿಂದ ಸುಮಾರು 25 ಕ್ಕೂ ಜನ ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದರು. ಧಾರವಾಡದ ಮೊರಬದಿಂದ ರಾಮದುರ್ಗಕ್ಕೆ ವಾಪಸ್ಸು ತೆರಳುವ ವೇಳೆ ಸವದತ್ತಿಯಿಂದ ಧಾರವಾಡಕ್ಕೆ ಹೊರಟಿದ್ದ ಬುಲೇರೊ‌ ವಾಹನಕ್ಕೆ ಟಾಟಾಎಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ […]

ರಾಜ್ಯ

ಧಾರವಾಡ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಧಾರವಾಡ prajakiran.com : ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದವರು ಕಳೆದ ಕೆಲ ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಧಾರವಾಡ ಡಿಎಚ್ಒ ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ […]