ಬೆಳಗಾವಿ prajakiran.com : ಟಾಟಾಎಸ್ ಹಾಗೂ ಬುಲೇರೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಎಳು ಜನರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಹತ್ತಿರ ಶುಕ್ರವಾರ ರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದಿಂದ ಸುಮಾರು 25 ಕ್ಕೂ ಜನ ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಜಮೀನಿನಲ್ಲಿ ಕೆಲಸಕ್ಕೆ ಬಂದಿದ್ದರು.
ಧಾರವಾಡದ ಮೊರಬದಿಂದ ರಾಮದುರ್ಗಕ್ಕೆ ವಾಪಸ್ಸು ತೆರಳುವ ವೇಳೆ ಸವದತ್ತಿಯಿಂದ ಧಾರವಾಡಕ್ಕೆ ಹೊರಟಿದ್ದ ಬುಲೇರೊ ವಾಹನಕ್ಕೆ ಟಾಟಾಎಸ್ ಡಿಕ್ಕಿ ಹೊಡೆದಿದೆ.
ಇದರಿಂದಾಗಿ ಸ್ಥಳದಲ್ಲೆ ಟಾಟಾಎಸ್ ನಲ್ಲಿದ್ದ ಭೀಮವ್ವ ನರಿ, ಶೆಟ್ಟಿ ಬೆನಕಟ್ಟಿ, ಪಾರವ್ವಾ ಹುರಳಿ, ಮಲ್ಲವ್ವಾ ಮುರ್ಕಿಭಾವಿ, ಮಾರುತಿ ಪೂಜಾರ್ ಸೇರಿದಂತೆ ಎಳು ಜನ ಸಾವನ್ನಪ್ಪಿದ್ರೆ ಹದಿನೈದಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ಹುಬ್ಬಳ್ಳಿ ಕೆಎಂಸಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಸ್ಥಳಕ್ಕೆ ಸವದತ್ತಿ ಸಿಪಿಐ ಮಂಜುನಾಥ್ ನಡುವಿನಮನಿ ಹಾಗೂ ಪಿಎಸ್ ಐ ದೌಡಾಯಿಸಿ,ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.