ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಅವಳಿನಗರದ ಸಂಚಾರಿ ಸ್ವ್ಯಾಬ್ ಸಂಗ್ರಹಣಾ ಕೇಂದ್ರ ನಿಲುಗಡೆ ಸ್ಥಳಗಳು

ಧಾರವಾಡ prajakiran.com : ಕೋವಿಡ್ ತಪಾಸಣೆ ಕಾರ್ಯವನ್ನು ವ್ಯಾಪಕಗೊಳಿಸಿರುವ ಜಿಲ್ಲಾಡಳಿತವು ಹುಬ್ಬಳ್ಳಿ ಧಾರವಾಡ ಅವಳಿನಗರದ ಏಳು ಸ್ಥಳಗಳಲ್ಲಿ ಸಂಚಾರಿ ಸ್ವ್ಯಾಬ್ ಸಂಗ್ರಹಣಾ ಕೇಂದ್ರಗಳ ನಿಲುಗಡೆಗೆ ಸ್ಥಳ ಗುರುತಿಸಿದೆ.

ಈ ಸ್ಥಳಗಳಲ್ಲಿ ಪ್ರತಿ ದಿನ ಬೆಳಿಗ್ಗೆ ೧೦:೩೦ ರಿಂದ ಮಧ್ಯಾಹ್ನ ೨:೩೦ ರವರೆಗೆ ಮೂಗು ಮತ್ತು ಗಂಟಲು ದ್ರವದ ಪ್ರಯೋಗಾಲಯದ ಮಾದರಿಯನ್ನು ಉಚಿತವಾಗಿ ಸಂಗ್ರಹಣೆ ಮಾಡಲಾಗುವುದು.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ ಕೋರಿದ್ದಾರೆ.

ವಾಹನ ನಿಲುಗಡೆ ಸ್ಥಳಗಳು:

ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣ, ಹಳೆ ಬಸ್ ನಿಲ್ದಾಣ, ವಲಯ ಕಚೇರಿ ೧೦ ಹಾಗೂ ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ಹತ್ತಿರ.

ಧಾರವಾಡದ ಜರ್ಮನ್ ಆಸ್ಪತ್ರೆ, ರಾಮನಗೌಡರ ಆಸ್ಪತ್ರೆ ಆವರಣ ಹಾಗೂ ಕರ್ನಾಟಕ ಕಾಲೇಜು ಎದುರು.

ಸಂಚಾರಿ ಸ್ವ್ಯಾಬ್  ಸಂಗ್ರಹಣಾ ಕೇಂದ್ರಗಳ ಕುರಿತ ಮಾಹಿತಿಗಾಗಿ ಸಾರ್ವಜನಿಕರು ಧಾರವಾಡ ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ್ ೮೨೭೭೫೧೧೨೬೪, ೯೪೪೮೪೧೮೫೦೮,

ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ೭೦೧೯೫೨೪೫೧೭ ಹಾಗೂ ಮಹಾನಗರ ಪಾಲಿಕೆಯ ಡಾ. ಶ್ರೀಧರ ದಂಡಪ್ಪನವರ ೯೬೮೯೮೮೬೧೦೩ ಮೋಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *