ರಾಜ್ಯ

ಮಹಾರಾಷ್ಟ್ರದಿಂದ ರಾಯಘಡ್ ಗೆ ತೆರಳುತ್ತಿದ್ದ 66 ವಲಸೆ ಕಾರ್ಮಿಕರಿಗೆ ಧಾರವಾಡದಲ್ಲಿ ತಡೆ

ಧಾರವಾಡ prajakiran.com : ಲಾರಿಯೊಂದರಲ್ಲಿ ಮಹಾರಾಷ್ಟ್ರದಿಂದ ರಾಯಘಡ್ ಗೆ ತೆರಳುತ್ತಿದ್ದ 66 ವಲಸೆ ಕಾರ್ಮಿಕರನ್ನು ತಡೆ ಹಿಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಮಂಗಳವಾರ ಬೆಳ್ಳಗೆ ನಡೆದಿದೆ. ಧಾರವಾಡ ಜಿಲ್ಲೆಯ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಅವರನ್ನು ತಡೆ ಹಿಡಿದು ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದೆ. ತಕ್ಷಣ ಅವರನ್ನು ಸ್ಥಳೀಯ  ಕಲ್ಯಾಣಮಂಟಪದಲ್ಲಿ ಧಾರವಾಡ ಜಿಲ್ಲಾಡಳಿತ ಆರಂಭಿಸಿರುವ ಕ್ವಾರಂಟೆನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ. ಈ ಸಂಬಂಧ ಲಾರಿ ಚಾಲಕನ ವಿರುದ್ದ […]

ರಾಜ್ಯ

ತೆರಿಗೆ ಹೆಚ್ಚಳ ಸಮರ್ಥಿಸಿಕೊಂಡ ಶಾಸಕ ಅರವಿಂದ ಬೆಲ್ಲದ ವಿರುದ್ದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕಿಡಿ

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಧಾರವಾಡ ಪಶ್ಚಿಮ ಶಾಸಕ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ವಿರುದ್ದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕಿಡಿಕಾರಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೆಚ್ಚಳ ಮಾಡಿಸುವುದು ಅವರೇ ಹಾಗೂ ಆನಂತರ ಕಡಿಮೆ ಮಾಡಿಸಿದ್ದೇವೆ ಎಂದು ತಮ್ಮ ಬೆನ್ನು ತಾವೆ ಚೆಪ್ಪರಿಸಿಕೊಳ್ಳುವುದು ನಾಚಿಕಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ […]

ರಾಜ್ಯ

ಮಹಾರಾಷ್ಟ್ರದಿಂದ ಧಾರವಾಡಕ್ಕೆ ಬಂದ ನಾಲ್ವರಿಗೆ ಕರೋನಾ

ಧಾರವಾಡ prajakiran.com : ಧಾರವಾಡದ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಮೂರು ಪ್ರಕರಣ ಬೆಳಕಿಗೆ ಬಂದಿದ್ದರೆ,  ಸಂಜೆ ಮತ್ತೊಂದು  ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಬೆಳಗ್ಗೆ ಪಿ-2156  ನೇ ಸೋಂಕಿತೆಯನ್ನು 33 ವರ್ಷದ ಮಹಿಳೆ, ಪಿ-2157ನೇ ಸೋಂಕಿತ 17 ವರ್ಷದ ಬಾಲಕ, ಪಿ- 2158 ನೇ 2 ವರ್ಷದ 5 ತಿಂಗಳು ಗಂಡು ಮಗು, ಈ ಮೂವರು ಮಹಾರಾಷ್ಟ್ರದಿಂದ ಹಿಂದಿರುಗಿರುವ ಪಿ- 1942, ಪಿ-1943,ಪಿ- 1944 ಹಾಗೂ ಪಿ- 1945 ಅವರೊಂದಿಗೆ ಸಂಪರ್ಕದ […]

ರಾಜ್ಯ

ಗುಜರಾತ್‌ನಿಂದ ಬೆಳಗಾವಿಗೆ ಬಂದ 19 ಪ್ರಯಾಣಿಕರು

ಬೆಳಗಾವಿ prajakiran.com : ಗುಜರಾತ್‌ನ ಅಹ್ಮದಾಬಾದ್‌ನಿಂದ ಬೆಳಗಾವಿ ಏರ್‌ಪೋರ್ಟ್‌ಗೆ  ಸೋಮವಾರ ಸ್ಟಾರ್ ಏರ್‌ಲೈನ್ಸ್ ವಿಮಾನ ಆಗಮಿಸಿದೆ. ಅಹ್ಮದಾಬಾದ್‌ನಿಂದ ಬೆಳಗಾವಿ ಏರ್‌ಪೋರ್ಟ್‌ಗೆ ಒಟ್ಟು 19 ಪ್ರಯಾಣಿಕರ ಆಗಮನವಾಗಿದ್ದು, 19 ಜನರ ಪೈಕಿ 8 ಪ್ರಯಾಣಿಕರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಉಳಿದವರು ಹುಬ್ಬಳ್ಳಿ ಧಾರವಾಡದ 7 ಪ್ರಯಾಣಿಕರು ಹಾಗೂ ದಾವಣಗೆರೆಯ ನಾಲ್ವರನ್ನು  ಅವರವರ ಜಿಲ್ಲೆಗಳಿಗೆ ರವಾನೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾಡಳಿತ ಆಯಾ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ರವಾನಿಸಿದೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಬಂದ ಎಲ್ಲರಿಗೂ 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ. 7 […]

ರಾಜ್ಯ

ಸೋಮವಾರ ಬೆಳಗ್ಗೆ 69, ಸಂಜೆ 24 ಕೇಸ್ ಪತ್ತೆ : ಉಡುಪಿಯಲ್ಲಿ ಒಂದೇ ದಿನ 32 ಪ್ರಕರಣ

ಬೆಂಗಳೂರು prajakiran.com : ಕರೋನಾ ಹೆಮ್ಮಾರಿ ಕರುನಾಡನ್ನು ಬೆಂಬಿಡದೆ ಕಾಡುತ್ತಲೇ ಇದೆ. ಸೋಮವಾರ ಮತ್ತೇ ಕರೋನಾ ಸೋಂಕು ನೂರರ ಸಮೀಪ ಬಂದಿದೆ. ಬೆಳಗ್ಗೆ 69 ಪ್ರಕರಣ ಬಂದರೆ, ಸಂಜೆ ಮತ್ತೇ 24 ಕೇಸ್ ಪತ್ತೆಯಾಗುವ ಮೂಲಕ 93ಕ್ಕೆ ಬಂದು ನಿಂತಿದೆ. ಬೆಳಗ್ಗೆಯಷ್ಟೇ ಉಡುಪಿಯಲ್ಲಿ 16 ಪ್ರಕರಣಗಳು ದೃಢಪಟ್ಟಿದ್ದವು. ಮತ್ತೇ ಸಂಜೆ ವೇಳೆ ಬರೋಬ್ಬರಿ 16 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಒಂದೇ ದಿನ 32 ಪ್ರಕರಣಗಳು ಕೇವಲ ಒಂದೇ ಜಿಲ್ಲೆಯಲ್ಲಿ ಕಾಣಿಸಿಕೊಂಡಂತಾಗಿದೆ. ಇನ್ನೂ ಬಿಸಲನಾಡು ಕಲಬುರಗಿಯಲ್ಲಿ ಬೆಳಗ್ಗೆಯಷ್ಟೇ 14 […]

ರಾಜ್ಯ

ಮುಂಬೈನಿಂದ ಬೆಳಗಾವಿಗೆ ಬಂದ ಬಾಲಕನಿಗೆ ಕರೋನಾ ಸೋಂಕು

ಬೆಳಗಾವಿ prajakiran.com : ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅದರಲ್ಲೂ ಮುಂಬೈನಿಂದ ಬಂದಿರುವ ಬಾಲಕನಿಗೆ ತಗುಲಿರುವ ಸೊಂಕು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಂದಿಗನೂರು ಗ್ರಾಮದ ಹತ್ತು ವರ್ಷದ ಬಾಲಕನಿಗೆ ಸೊಂಕು ಧೃಡಪಟ್ಟಿದೆ. ಸೊಂಕು ಧೃಡವಾದ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ‌ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ. ಆ 10 ವರ್ಷದ ಬಾಲಕನನ್ನು […]

ರಾಜ್ಯ

ವಿದ್ಯಾನಗರಿ ಧಾರವಾಡದ 2.5 ವರ್ಷದ ಮಗು ಸೇರಿ ಮತ್ತೆ ಮೂವರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com: ವಿದ್ಯಾನಗರಿ ಧಾರವಾಡ ಜಿಲ್ಲೆಗೆ ಕಳೆದ ಮೂರು ದಿನಗಳಿಂದ ಮಹಾಮಾರಿ ಕರೋನಾ ವೈರಸ್ ಬೆಂಬಿಡದೆ ಕಾಡುತ್ತಿದೆ. ಸೋಮವಾರ ಬೆಳಕಿಗೆ ಬಂದ ಮೂರು ಪ್ರಕರಣಗಳಲ್ಲಿ ಒಂದು  2.5 ವರ್ಷದ ಮಗು ಸೇರಿ ಮೂವರಿಗೆ ಕರೋನಾ ಸೋಂಕು ವಕ್ಕರಿಸಿರುವುದು ದೃಢಪಟ್ಟಿದೆ. ಸೋಂಕಿತರನ್ನು ಪಿ 2156 33 ವರ್ಷದ ಮಹಿಳೆ ಎಂದು ಗುರುತಿಸಲಾಗಿದ್ದು, ಇವರಿಗೆ ಪಿ-1942, ಪಿ-1943 ಹಾಗೂ ಪಿ-1944 ಹಾಗೂ ಪಿ 1945 ಅವರಿಂದ ಹರಡಿದೆ. ಅವರಿಗೆ ಧಾರವಾಡದ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಅದೇ […]

ರಾಜ್ಯ

ಗ್ರೀನ್ ಜೋನ್ ರಾಮನಗರಕ್ಕೆ ವಕ್ಕರಿಸಿದ ಕರೋನಾ ಕಂಟಕ

ರಾಮನಗರ prajakiran.com : ಕೊನೆಗೂ ಗ್ರೀನ್ ಜೋನ್ ನಲ್ಲಿದ್ದ ರಾಮನಗರಕ್ಕೆ ಕರೋನಾ ಕಂಟಕ ವಕ್ಕರಿಸಿದೆ. ಮಾಗಡಿ ತಾಲೂಕಿನ ಗ್ರಾಮವೊಂದರ ಎರಡು ವರ್ಷದ ಮಗುವಿಗೆ ಕರೋನಾ ಸೋಂಕು ತಗುಲಿದೆ. ಇವರ ತಂದೆ ತಾಯಿಗೆ ವರದಿ ನೆಗೇಟಿವ್ ಬಂದರೆ ಮಗುವಿಗೆ ಮಾತ್ರ ಪಾಸಿಟಿವ್ ಬಂದಿದೆ. ಆ ಮೂಲಕ ರಾಮನಗರ ಜಿಲ್ಲೆಯ ಜನತೆಯ ನೆಮ್ಮದಿಯೂ ಭಂಗವಾಗಿದೆ. ಇವರ ತಂದೆ ತಾಯಿ ಚೈನ್ನೈನಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ರಾಮನಗರಕ್ಕೆ ಚೈನ್ನೈ ಕಂಟಕ ತಗುಲಿದೆ. ಈ ಹಿಂದೆ ರಾಮನಗರ ಜಿಲ್ಲೆಯ ಕೆಲವರನ್ನು ಕೇಂದ್ರ ಕಾರಾಗೃಹಕ್ಕೆ […]

ರಾಜ್ಯ

ರಾಜ್ಯದಲ್ಲಿ ಇಂದು ಬೆಳಗ್ಗೆ 69 ಪ್ರಕರಣ ದೃಢ : ಉಡುಪಿ, ಕಲಬುರಗಿ, ಯಾದಗಿರಿಯಲ್ಲಿ ಹೆಚ್ಚು ಸೋಂಕಿತರು

ಬೆಂಗಳೂರು prajakiran.com : ಕಳೆದ ನಾಲ್ಕು ದಿನಗಳಿಂದ ಅತಿಹೆಚ್ಚು ಸೋಂಕಿತರನ್ನು ಕಂಡಿದ್ದ ಕರುನಾಡು ಸೋಮವಾರ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಹಾಗೂ ಸಮಾಧಾನ ಪಡುವಂತಾಗಿದೆ. ರಾಜ್ಯದಲ್ಲಿ ಸೋಮವಾರ ಬೆಳಗ್ಗೆ 69 ಪ್ರಕರಣ ದೃಢಪಟ್ಟಿದ್ದು,  ಸಾವಿನ ಸಂಖ್ಯೆ ಕೂಡ ಒಂದು ಏರಿಕೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ತಲುಪಿದೆ.  ಉಡುಪಿಯಲ್ಲಿ ಸೋಮವಾರ ಮತ್ತೇ 16 ಪ್ರಕರಣಗಳು ದೃಢಪಟ್ಟಿವೆ. ಉಡುಪಿಯ 14 ಜನರಿಗೆ ಮಹಾರಾಷ್ಟ್ರ ಹಾಗೂ ಮುಂಬೈ ಕಂಟಕ ಎದುರಾದರೆ, […]

ರಾಜ್ಯ

ಪೊಲೀಸ್ ಪೇದೆ ಬದಲಾಗಿ ಕಾನ್ಸ್ ಟೇಬಲ್ ಪದ ಬಳಸುವಂತೆ ಆದೇಶ : ವೈರಲ್ ಆದ ಹಳೆಯ ಸುದ್ದಿ

ಬೆಂಗಳೂರು prajakiran.com : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಈವರೆಗೆ ಎಲ್ಲರೂ ಪೊಲೀಸ್ ಪೇದೆ ಎಂದು ಕರೆಯುತ್ತಿದ್ದರು. ಆದರೆ ಇದೀಗ ಆ ಪದ ಸೂಕ್ತವಲ್ಲ ಎಂದು ನಿರ್ಧರಿಸಿರುವ ಪೊಲೀಸ್ ಇಲಾಖೆ ಇದೀಗ ಪೊಲೀಸ್   ಪೇದೆ ಎಂಬ ಪದದ ಬದಲಾಗಿ ಕಾನ್ಸ್ ಟೇಬಲ್ ಪದವನ್ನು ಬಳಸುವಂತೆ ಕರ್ನಾಟಕ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದಂತ ಅಜಯ ಕುಮಾರ ಸಿಂಗ್ ಅವರು 2009ರಲ್ಲಿಯೇ ಆದೇಶ ಹೊರಡಿಸಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ […]